ಕನಕ ಚರಿತ್ರೆ ಆಜರಾಮರ: ಜಿ.ಎಂ.ಕೋಟ್ಯಾಳ

ಕನಕ ಚರಿತ್ರೆ ಆಜರಾಮರ: ಜಿ.ಎಂ.ಕೋಟ್ಯಾಳ Kanaka's history is a mystery: G.M. Kotyala


ಆಲಮಟ್ಟಿ 08: ಕೀರ್ತನೆಗಳ ಹರಿಕಾರ ಭಕ್ತ ಕನಕದಾಸರ ಜೀವನ ಚರಿತ್ರೆ ಅಮೋಘ ಪುಷ್ಪಪುಂಜಗಳಲ್ಲಿ ತೇಲಿವೆ. ವಿಶೇಷ ಶ್ರೇಷ್ಠತೆ ಶ್ರೇಣಿಯಲ್ಲಿ ಕೂಡಿವೆ ಎಂದು ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ನುಡಿದರು. 

       ಸ್ಥಳೀಯ ಎಸ್‌.ವಿ.ವಿ.ಸಂಸ್ಥೆಯ ರಾವಬಹದ್ದೂರ ಡಾ, ಫ.ಗು.ಹಳಕಟ್ಟಿ (ಆರ್‌.ಬಿ.ಪಿ.ಜಿ) ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನಕದಾಸರ 525ನೇ ಜಯಂತಿ ಕಾರ್ಯಕ್ರಮದಲ್ಲಿ ಪೂಜಾ ನೆರವೇರಿಸಿ ಮಾತನಾಡಿದ ಅವರು, ಸಾಮಾಜಿಕ ಅಸಮಾನತೆಗಳ ವಿರುದ್ಧ ಧ್ವನಿ ಎತ್ತಿ ದಿಟ್ಟತನದಿಂದ ಹೋರಾಡಿದ ಧೀಮಂತ ಕನಕದಾಸರು ಸಮಾಜದಲ್ಲಿ ಹೆಪ್ಪುಗಟ್ಟಿದ ಜಾತಿ ವ್ಯವಸ್ಥೆಯನ್ನು ನಿರಾಕರಿಸಿದ ಪುಣ್ಯಾತ್ಮರು ಎಂದರು. 

     ಸಾಮಾಜಿಕ ಸಮಾನತೆ ಹಾಗೂ ಭಕ್ತಿ ಚಳುವಳಿಗೆ ಕನಕರ ಕೊಡುಗೆ ಅಪಾರವಾಗಿವೆ. ಇವರಿಂದ ಹೊರಬಂದ ಕೀರ್ತನೆಗಳು ಅತ್ಯಂತ ಪ್ರಭಾವಳಿಯ ಸೃಜನಶೀಲತೆಯಿಂದ ಮೂಡಿವೆ. ದಾಸರ ಜೀವನ ಬೋಧನೆಗಳು ಲಕ್ಷಾಂತರ ಜನರ ಮನ ತಲುಪಿವೆ. ಇಂಥ ದೈವತ್ವದ ವೇದಾಂತದ ತತ್ವಜ್ಞಾನಿ ಕರುನಾಡು ಪಡೆದಿರುವುದೇ ಸೌಭಾಗ್ಯ. ಅವರ ಕೀರ್ತನೆ ಪದಗಳು ಆವಣೀರ್ಯವಾಗಿವೆ. ಸಾಹಿತ್ಯ ಕೃತಿಗಳನ್ನು ಮೀರಿ ಸುಗಂಧಮಯವಾಗಿ ಪರಿಮಳಿಸಿವೆ. ಕನಕರ ಶ್ರಮ ಸಾರ್ಥಕವಾಗಿವೆ ಎಂದರು. 

        ಮಾನವೀಯತೆ ಮತ್ತು ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿದಿರುವ ಕನಕರು ಕನ್ನಡ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ. ಸಂಗೀತ ಕ್ಷೇತ್ರಕ್ಕೂ ಅನುಪಮ ಕೊಡುಗೆ ನೀಡಿದ್ದಾರೆ. ಸಹೃದಯಿಗಳ ಮನಾಂಗಳದಲ್ಲಿ ನೆಲೆಕಂಡಿರುವ ಕನಕರ ಭಕ್ತಿಸಾರ, ಕಾವ್ಯ ಕೃತಿಗಳು ಇಂದಿಗೂ ಆಜರಾಮರಾಗಿವೆ ಎಂದರು. 

   ಹಿರಿಯ ಶಿಕ್ಷಕ ಎನ್‌.ಎಸ್‌.ಬಿರಾದಾರ, ಶ್ರೇಷ್ಠ ಲೇಖನ, ಕವಿ, ಸಂಯೋಜಕ, ಸಮಾಜ ಸುಧಾರಕರಾಗಿ ಮಿನುಗಿರುವ ಕನಕದಾಸರು ತತ್ವಾದರ್ಶಗಳ ದಿಗ್ಗಜರಾಗಿದ್ದಾರೆ. ದಾಸ ಪರಂಪರೆ, ಸಾಹಿತ್ಯ ಅವಿಸ್ಮರಣೀಯವಾಗಿವೆ. ಸಮಾಜದಲ್ಲಿ ಜಾಡುಗಟ್ಟಿದ ಜಾತಿ ಸಂಕೋಲೆಗಳ ಪರದೆ ವಿರುದ್ಧ ಕಟುವಾಗಿ ಟೀಕಿಸಿದ್ದಾರೆ. ಕನಕರ ಈ ಧೈರ್ಯ, ಸಾಹಸ ಮರೆಯಲಾಗದು. ಕನಕರ ಸಂದೇಶಗಳು ಸಾರ್ವಕಾಲಿಕ ಪ್ರಸ್ತುತವಾಗಿವೆ ಎಂದರು.. ಗುರುಬಳಗ ಹಾಗೂ ವಿದ್ಯಾರ್ಥಿಗಳು ಕನಕದಾಸರ ಭಾವಚಿತ್ರಕ್ಕೆ ಭಕ್ತಿಭಾವದಿಂದ ಪೂಜೆ ಸಲ್ಲಿಸಿ ನಮಿಸಿದರು. 

    ಆರ್‌.ಎಂ.ರಾಠೋಡ, ಎಂ.ಬಿ.ದಶವಂತ, ಎಲ್‌.ಆರ್‌.ಸಿಂಧೆ, ಸಚೀನ ಹೆಬ್ಬಾಳ, ಶ್ರೀಧರ ಚಿಮ್ಮಲಗಿ, ಸಿದ್ದು ಪಟ್ಟಣಶೆಟ್ಟಿ, ಗೋಪಾಲ ಬಂಡಿವಡ್ಡರ, ಕವಿತಾ ಮರಡಿ, ಮಂಜುಳಾ ಸಂಗಾಪೂರ, ವಿದ್ಯಾ ಹಿರೇಮಠ ಇತರರಿದ್ದರು.