ಕಂಪ್ಲಿ ಉತ್ಸವ: ವೈಭವದ ತುಂಗಾರತಿ ಮಹೋತ್ಸವ
Kampli Utsav: The glorious Tungarati festival
ಬಳ್ಳಾರಿ 11: ಕಂಪ್ಲಿ ಉತ್ಸವದ ಅಂಗವಾಗಿ ಕಂಪ್ಲಿ ಪಟ್ಟಣದ ಸೋಮಪ್ಪನ ದೇವಸ್ಥಾನದ ಮುಂಭಾಗದಲ್ಲಿರುವ ಸೋಮಪ್ಪ ಕೆರೆಯಲ್ಲಿ ತುಂಗಭದ್ರಾ ಆರತಿ ಮಹೋತ್ಸವ ಹಾಗೂ ಬಾಗಿನ ಸಮರೆ್ಣಯ ಧಾರ್ಮಿಕ ಕಾರ್ಯಕ್ರಮವು ಉತ್ಸವದ ಮೊದಲ ದಿನವಾದ ಬುಧವಾರ ಅದ್ದೂರಿಯಾಗಿ ನಡೆಯಿತು.ವಾರಾಣಸಿಯಿಂದ ಆಗಮಿಸಿದ್ದ 10 ಕ್ಕೂ ಹೆಚ್ಚು ಅರ್ಚಕರು, ಗಂಗಾರತಿ ಮಾದರಿಯಲ್ಲಿ ತುಂಗಾರತಿಯನ್ನು ವೈಭವದಿಂದ ನಡೆಸಿಕೊಟ್ಟರು. ಧಾರ್ಮಿಕ ವಿಧಿ-ವಿಧಾನದೊಂದಿಗೆ ಸೋಮಪ್ಪ ಕೆರೆಯ ತಟದಲ್ಲಿ ವಿವಿಧ ಪೂಜಾ ಕಾರ್ಯಗಳು ತುಂಗಾರತಿ ಭಾಗವಾಗಿ ನಡೆದವು.?*ಜಿಲ್ಲಾ ಉಸ್ತುವಾರಿ ಸಚಿವರಿಂದ ಬಾಗಿನ ಸಮರೆ್ಣ: ತುಂಗಾರತಿಗೂ ಮುನ್ನ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್, ಕಂಪ್ಲಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳಿ ನಿಯಮಿತ (ಕಾವೇರಿ ಹ್ಯಾಂಡ್ಲೂಮ್ಸ್) ದ ಅಧ್ಯಕ್ಷರೂ ಆಗಿರುವ ಜೆ.ಎನ್.ಗಣೇಶ್ ಅವರು ಕೆರೆಯ ತೀರದಲ್ಲಿ ಬಾಗಿನ ಸಮರೆ್ಣ ಮಾಡುವ ಮೂಲಕ ಎರಡನೇಯ ಬಾರಿಯ ಕಂಪ್ಲಿ ಉತ್ಸವಕ್ಕೆ ಚಾಲನೆ ನೀಡಿದರು. ತುಂಗಾರತಿಗೆ 18 ವೇದಿಕೆಗಳಲ್ಲಿ ಹೆಜ್ಜೆ ಕುಣಿತ ಸಾಥ್: ಕಂಪ್ಲಿ ಉತ್ಸವದ ಅಂಗವಾಗಿ ವಾರಾಣಸಿಯ ಅರ್ಚಕರಿಂದ ನೆರವೇರಿದ ತುಂಗಾರತಿಗೆ ಸೋಮಪ್ಪ ಕೆರೆಯ ಸುತ್ತಲೂ ನಿರ್ಮಿಸಿದ್ದ 18 ವೇದಿಕೆಗಳಲ್ಲಿ ಭರತನಾಟ್ಯ ಕಲಾವಿದರ ಹೆಜ್ಜೆಯ ನಾದವು ಜೊತೆಯಾಗಿದ್ದು ನೋಡುಗರಿಗೆ ರೋಮಾಂಚನ ಮೂಡಿಸಿತು.
ಕೆರೆಯಲ್ಲಿ ತೇಲುವ ಆಕರ್ಷಕ ದೀಪೋತ್ಸವ: ಕಂಪ್ಲಿ ಉತ್ಸವದ ಅಂಗವಾಗಿ ಸೋಮಪ್ಪನ ಕೆರೆಯಲ್ಲಿ ತುಂಗಾರತಿ ಭಾಗವಾಗಿ ತೇಲುವ ಚಿತ್ತಾರದ ದೀಪಗಳನ್ನು ಬೆಳಗಿಸಲಾಯಿತು. ಸಾರ್ವಜನಿಕರು ಸಂಭ್ರಮ- ಸಡಗರದಿಂದ ಬೆಳಕಿನ ಚಿತ್ತಾಕರ್ಷದ ನಡುವೆ ತುಂಗಾರತಿಯನ್ನು ಬೆರಗಿನಿಂದ ಕಣ್ತುಂಬಿಕೊಂಡರು.ಇದಕ್ಕೂ ಮುನ್ನ ಐತಿಹಾಸಿಕ ಸೋಮಪ್ಪ ಕೆರೆ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಂದ ಭರತ ನಾಟ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಬಳಿಕ ವಿವಿಧ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ ಸಾಧಕರಿಗೆ, ಹೋರಾಟಗಾರರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಹಂಪಿ ಸಾವಿರ ಮಠದ ಎಮ್ಮಿಗನೂರಿನ ಶ್ರೀ ರಾಮದೇವ ಶಿವಾಂತ ಮಹಾಚಾರ್ಯ, ಮಾಜಿ ಶಾಸಕ ಭೀಮನಾಯ್ಕ, ಕಂಪ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸರಾವ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್. ಎನ್., ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪಿ.ರವಿಕುಮಾರ್, ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಕಂಪ್ಲಿ ತಾಲ್ಲೂಕು ತಹಶೀಲ್ದಾರ ಜೂಗಲ ಮಂಜುನಾಯಕ, ತೋರಣಗಲ್ಲು ಡಿಎಸ್ಪಿ ಪ್ರಸಾದ್ ಗೋಖಲೆ, ತಾಪಂ ಇಒ ಆರ್.ಕೆ.ಶ್ರೀಕುಮಾರ್, ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ, ಸಿಡಿಪಿಒ ಪ್ರದೀಪ್, ಕಂಪ್ಲಿ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಹಬೀಬ್ ರೆಹಮಾನ್, ಅಪೆಕ್ಸ್ ಬ್ಯಾಂಕ್ ನ ಅಧ್ಯಕ್ಷ ಮೂಕಯ್ಯ ಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿ- ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.=
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 