ಬಲ್ಡೋಟ ಹಟಾವೋ 104ನೇ ದಿನದ ಧರಣಿಯಲ್ಲಿ ಕಂಬಾಳಿಮಠ ಬೇಸರ
Kambalimath is bored during the 104th day of Baldota Hatao sit-in.
ಕೊಪ್ಪಳ 11: ನಗರಸಭೆ ಆವರಣದಲ್ಲಿ 104ನೇ ದಿನಗಳಿಂದ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಮೂಲಕ ನಡೆಸುತ್ತಿರುವ ಬಲ್ಡೋಟ ಹಟಾವೋ ಕೊಪ್ಪಳ ಬಚಾವೋ ಅನಿರ್ದಿಷ್ಟಾವಧಿ ಧರಣಿ ಬೆಂಬಲಿಸಿ ನಿವೃತ್ತ ಶಿಕ್ಷಕ ಎಸ್.ಎಂ. ಕಂಬಾಳಿಮಠ ಮಾತನಾಡಿದರು. ಕಂಬಾಳಿಮಠ ಅವರು ಮಾತನಾಡುತ್ತಾ 'ಕಾರ್ಖಾನೆಗಳು ಸ್ಥಾಪನೆ ಅಥವಾ ವಿಸ್ತರಣೆ ಇಲ್ಲಿನ ಜನ ಜೀವನದ ಮೇಲೆ ದುಷ್ಪರಿಣಾಮ ಬೀರುವಂತಿರಬಾರದು. ಆದರೆ ಇಲ್ಲೀನ ಪರಿಸರದ ಮೇಲೆ ಮಾಲಿನ್ಯ ಮಾಡುತ್ತದೆ ಎಂದಾದರೆ ಯಾವ ಉದ್ದೇಶ ಇಟ್ಟುಕೊಂಡು ಬಲ್ಡೋಟ ವಿಸ್ತರಣೆ ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
54 ಸಾವಿರ ಕೋಟಿ ಹೂಡಿಕೆ ಎಂದರೆ ಸಾಮಾನ್ಯವೇ? ಇದಕ್ಕೆ ಯಾವ ವೈಜ್ಞಾನಿಕ ಮಾನದಂಡವಿದೆ. ಇದರ ಮಾಲಿನ್ಯದ ಲೆಕ್ಕಾಚಾರವಿಲ್ಲದೆ, ಇದರ ತ್ಯಾಜ್ಯ ವಿಸರ್ಜನೆಯ ಅಪಾಯಕಾರಿ ಗೊತ್ತು ಗುರಿಯಿಲ್ಲದೆ ಸ್ಥಾಪನೆ ಮಾಡುತ್ತಿರುವುದು ಸರಿಯಲ್ಲ. ಇಲ್ಲಿನ ಜಿಲ್ಲಾಡಳಿತ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಈಗ ವಿಸ್ತರಣೆಗೆ ಮುಂದಾಗಿರುವ ಬಲ್ಡೋಟ ಕಾರ್ಖಾನೆ ಈಗಾಗಲೇ 2011 ರಿಂದಲೇ ನಡೆಸುತ್ತಿರುವ ಒಂದು ಪೆಲ್ಲೆಟ್ ಘಟಕದಿಂದ ಅರ್ಧ ಭಾಗ ಕೊಪ್ಪಳ ದೂಳುಮಯ ಮಾಡಿದೆ. ಹಾಗೆ ನೋಡಿದರೆ ಕಲ್ಯಾಣನಗರ ಅಗಡಿ ಲೇಓಟ್ ಭಾಗ್ಯನಗರ ಪ್ರದೇಶವನ್ನೂ ಬಿಟ್ಟಿಲ್ಲ. ಯಾಕೆ ಈ ಸತ್ಯ ಅರ್ಥವಾಗುತ್ತಿಲ್ಲ.
ಇದರ ಗಂಭೀರತೆ ಅರಿಯಬೇಕೆಂದರೆ ಅವರು ವಾರ್ಡಗಳ ಭೇಟಿ ಮಾಡಿ ಸತ್ಯ ತಿಳಿದುಕೊಳ್ಳಲಿ. ಇಲ್ಲದಿದ್ದರೆ ಜನರು ಸಂಪೂರ್ಣವಾಗಿ ಉಸಿರಾಟದ ತೊಂದರೆಯ ಕಾಯಿಲೆಗೆ ತುತ್ತಾಗುವುದು ಶತಸಿದ್ಧ. ಅನಾರೋಗ್ಯದ ಕಾರಣಕ್ಕೆ ಈಗಾಗಲೇ ಜಾಗೃತ ನೌಕರರ ವರ್ಗ ಇಲ್ಲಿಂದ ವರ್ಗಾವಣೆಗೊಳ್ಳುತ್ತಿದ್ದಾರೆ. ಮತ್ತೆ ಕೊಪ್ಪಳದಲ್ಲಿ ನೆಲೆ ನಿಲ್ಲುವ ಬಯಕೆಯನ್ನು ಕೈಬಿಟ್ಟಿದ್ದಿರೆ. ಅಂತವರು ಇಲ್ಲಿ ನಿವೇಶನಗಳನ್ನಾಗಲಿ ಮನೆಗಳನ್ನಾಗಲಿ ಖರೀದಿ ಮಾಡುತ್ತಿಲ್ಲ. ಮತ್ತು ಯಾವುದೆ ಮನೆ ಕಟ್ಟುತ್ತಿಲ್ಲ ಅಂದರೆ ಏನು ಅರ್ಥ ಇದನ್ನು ಕೂಡಲೇ ಗಂಭೀರವಾಗಿ ಪರಿಗಣಿಸಿ ಇಲ್ಲಿನ ಬಲ್ಡೋಟ ಒಳಗೊಂಡು ಯಾವುದೇ ಕಾರ್ಖಾನೆಗಳ ವಿಸ್ತರಣೆ ಮಾಡಕೂಡದು. ಹೀಗಿರುವ ಕಾರ್ಖಾನೆಗಳ ಮಾಲಿನ್ಯವನ್ನು ಕಡ್ಡಾಯವಾಗಿ ನಿಯಂತ್ರಣಕ್ಕೆ ತರಬೇಕು ಅಂದಾಗ ಮಾತ್ರ ಇಪ್ಪತ್ತು ಹಳ್ಳಿಗಳ ಜನ ಜೀವನ ಉಳಿಯಲು ಸಾಧ್ಯ. ಕೃಷಿ ಉಳಿಯಲು ಸಾಧ್ಯ' ಎಂದರು.
ಧರಣಿಯಲ್ಲಿ ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ್, ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಸಂತೋಷ್ ದೇಶಪಾಂಡೆ, ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಪ್ರಾಚಾರ್ಯ ಎಸ್.ಬಿ. ರಾಜೂರು, ಬಿ.ಜಿ.ಕರಿಗಾರ, ಶಂಭುಲಿಂಗಪ್ಪ ಹರಗೇರಿ, ಮಹಾದೇವಪ್ಪ ಮಾವಿನಮಡು, ಗವಿಸಿದ್ದಪ್ಪ ಪೋ. ಪಾಟೀಲ್, ಮೂಕಪ್ಪ ಮೇಸ್ತ್ರಿ ಬಸಾಪುರ, ವಿಜಯಮಹಾಂತೇಶ ಹಟ್ಟಿ, ರಂಗಕರ್ಮಿ ಶರಣು ಶೆಟ್ಟರ್, ಶರಣು ಪಾಟೀಲ್, ಸುರೇಶ ಎಚ್, ಬಸವರಾಜ ಎಸ್, ಶಿವಪ್ಪ ಜಲ್ಲಿ , ನಾಗರಾಜ್ ಕುಷ್ಟಗಿ, ರಮೇಶ ಮೈನಹಳ್ಳಿ, ಬಸವರಾಜಪ್ಪ ಶೆಟ್ಟರ್, ವಿಶಾಲಾಕ್ಷಿ ಶೆಟ್ಟರ್, ಈರಮ್ಮ ಉಂಡಿ, ಗಂಗಮ್ಮ ಕುರುಗೋಡು, ಬೀಬಿಜಾನ್ ಮುಂತಾದವರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 