ಜಲವಿಮಾನ ನಿಲ್ದಾಣಕ್ಕೆ ಕಾಳಿ, ಕಬಿನಿ ನದಿ ಜಲಾಶಯ ಪ್ರದೇಶ ಆಯ್ಕೆ

ಜಲವಿಮಾನ ನಿಲ್ದಾಣಕ್ಕೆ ಕಾಳಿ, ಕಬಿನಿ ನದಿ ಜಲಾಶಯ ಪ್ರದೇಶ ಆಯ್ಕೆ Kali, Kabini river reservoir area selected for hydro airport

ಜಲವಿಮಾನ ನಿಲ್ದಾಣಕ್ಕೆ ಕಾಳಿ, ಕಬಿನಿ ನದಿ ಜಲಾಶಯ ಪ್ರದೇಶ ಆಯ್ಕೆ 

 ಕಾರವಾರ 16: ಕೇಂದ್ರ ಸರ್ಕಾರ ಉಡಾಣ್ 5.5 ಯೋಜನೆಯಡಿ ಜಲವಿಮಾನ ನಿಲ್ದಾಣಕ್ಕಾಗಿ ಗುರುತಿಸಿರುವ 7 ಪ್ರದೇಶಗಳಲ್ಲಿ,  ಉತ್ತರ ಕನ್ನಡ ಜಿಲ್ಲೆಯ ಕಾರವಾರ  ಬಳಿ ಕಾಳಿ ನದಿ ಹಾಗೂ  ಸಮುದ್ರ ಪ್ರದೇಶ, ಸುಫಾ ಜಲಾಶಯದ ಹಿನ್ನೀರು ಪ್ರದೇಶ ಸೇರಿವೆ ಎಂದು ಕೇಂದ್ರದ ವಿಮಾನಯಾನ ಸಚಿವಾಲಯ ಹೇಳಿದೆ.  

ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸ ಪ್ರಿಯರು ಹಾಗೂ ಶ್ರೀಮಂತರಿಗೆ ಸೀ ಪ್ಲೇನ್ ಲಭ್ಯವಾಗಲಿದೆ. ಕಾರವಾರ ದಿಂದ ದಾಂಡೇಲಿ ಬಳಿಯ  ಸುಫಾ ಹಿನ್ನೀರು ಪ್ರದೇಶದದಲ್ಲಿ ಪ್ರವಾಸಿಗರು ಸಂಚಾರ ಮಾಡಬಹುದು. ಮಂಗಳೂರು ನಿಂದ ಕಬಿನಿಗೆ ಹಾರಬಹುದು. ಕಬಿನಿ ಯಿಂದ ಕಾರವಾರಕ್ಕೆ, ಕಾರವಾರದಿಂದ  ಸುಫಾ ಹಿನ್ನೀರು ತಲುಪುವಾಗ ಪಶ್ಚಿಮ ಘಟ್ಟಗಳ ಸೌಂದರ್ಯ ಸವಿಯಬಹುದು. ಸುಫಾದಿಂದ ಗೋವಾಕ್ಕೆ ಅಥವಾ ಹುಬ್ಬಳ್ಳಿ ಗೆ  ಸಹ ಸಣ್ಣ ವಿಮಾನಗಳಲ್ಲಿ ಹಾರಬಹುದಾಗಿದೆ. ಸೀಪ್ಲೇನ್ ನೀರ ಮೇಲಿಂದ ಹಾರಿ ನೆಲದ ಮೇಲೆ ಸಹ ಇಳಿಯ ಬಲ್ಲವು. ಹತ್ತು ಪ್ರಯಾಣಿಕರನ್ನು ಒತ್ತಯ್ಯ ಬಲ್ಲ ಸೀ ಪ್ಲೇನಗಳು ಉತ್ತರ ಕನ್ನಡ ದಿಂದ ಕಬಿನಿ, ಮಂಗಳೂರು ನಿಂದ ದಾಂಡೇಲಿ ಸನಿಹದ   ಸುಫಾಕ್ಕೆ   ಹಾರಲಿವೆ. ಮಂಗಳೂರು ಸಮುದ್ರ ಪ್ರದೇಶ , ಕಬಿನಿ  ಹಿನ್ನೀರು  ಸಹ ಸೀಪ್ಲೇನ್ ಯೋಜನೆಯಲ್ಲಿದ್ದು, ಇಲ್ಲಿ ನದಿ ಮತ್ತು ಜಲಾಶಯದ ಹಿನ್ನೀರಲ್ಲಿ ಜಟ್ಟಿಗೆ ನಿರ್ಮಾಣಕ್ಕೆ ಸ್ಥಳ ಪರೀಶೀಲನೆ ಆಗಬೇಕಿದೆ. ಅಲ್ಲದೆ ನೀರ ಮೇಲೆ ಹಾರಬಲ್ಲ ಸೀ ಪ್ಲೇನ್ ಗಳಿಗೆ , ಜಲಾಶಯ ಪಕ್ಕದಲ್ಲಿ 1.5 ಕಿಮೀ ರನ್ ಗಳನ್ನು ಸಹ ನಿರ್ಮಿಸುವ  ಯೋಜನೆ ಇದೆ.  ಕಾರವಾರ ಕಾಳಿ ನದಿ ಸಂಗಮ ಪ್ರದೇಶ,  ದಾಂಡೇಲಿ ಸಮೀಪದ ಕಾಳಿ ಜಲ ವಿದ್ಯುತ್ ಯೋಜನಾ ಪ್ರದೇಶವಾದ  ಸೂಪಾ ಜಲಾಶಯ ಪ್ರದೇಶ  ಉಡಾನ್ 5.5 ಯೋಜನೆಯ ಭಾಗವಾಗಿ ಈ ಎರಡು ಜಲವಿಮಾನ ನಿಲ್ದಾಣಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. 

ಸೀಪ್ಲೇನ್ ಹಾರಾಟ ದಿಂದ  ಜಿಲ್ಲೆಯ ಮತ್ತು ದಾಂಡೇಲಿ ಪ್ರವಾಸೋದ್ಯಮದಲ್ಲಿ ಮಹತ್ತರ ಬದಲಾವಣೆ  ಕಂಡು ಬರಲಿದೆ.  ಪ್ರವಾಸೋದ್ಯಮಕ್ಕೆ ಸೀಪ್ಲೇನ್  : ಒಂದು ನದಿಯ  ಹಿನ್ನೀರು ಅಥವಾ ಸಮುದ್ರ  ಪ್ರದೇಶದ ದಿಂದ  ಮತ್ತೊಂದು ನದಿಯ ಹಿನ್ನೀರು ಪ್ರದೇಶದಲ್ಲಿ  ಸೀ ಪ್ಲೇನ್ ಗಳು  ಇಳಿಯುವ  ವಿಮಾನಯಾನವಾಗಿದೆ. ಈ ವಿಮಾನ ನದಿ, ಜಲಾಶಯದಲ್ಲಿ ನಿರ್ಮಿಸಿರುವ ಜಟ್ಟಿಯಲ್ಲಿ (ರನ್ ವೇ) ಇಳಿಯುತ್ತದೆ. ಮತ್ತು ಸಮೀಪದ ಏರ್ ಪೋರ್ಟ್‌ಗಳಲ್ಲಿ ಕೂಡ ವಿಮಾನ ಇಳಿಸಬಹುದಾಗಿದೆ.ಈ ವಿಮಾನಗಳು ಜಲ ಮತ್ತು ನೆಲದ ಮೇಲೆ   ಇಳಿಯುವ ತಂತ್ರಜ್ಞಾನ ಹೊಂದಿವೆ. ಈ ಜಾಗದಲ್ಲಿ ಪರಿಸರ ಮಾಲಿನ್ಯ ಉಂಟಾಗುವದಿಲ್ಲ. ಇದಕ್ಕೆ 1.5 ಕಿ.ಮೀ ಉದ್ದ 10 ಅಡಿ ಆಳದ  ಜಲ ಪ್ರದೇಶದ ಅವಶ್ಯಕತೆ ಇದ್ದು ,ಈ ಯೋಜನೆ ವಿದೇಶಗಳಲ್ಲಿ ಈಗಾಗಲೇ ಯಶಸ್ವಿಯಾಗಿದೆ. ಪ್ರವಾಸೋದ್ಯಮದ ಯಶಸ್ಸಿಗೆ ಈ ಯೋಜನೆ ಮಹತ್ವದ ಕೊಡುಗೆ ನೀಡುವುದರೊಂದಿಗೆ ಪ್ರವಾಸಿಗರನ್ನು ಆಕರ್ಷಿಸಲಿದೆ.   


ಮಧ್ಯಮ ವರ್ಗ  ಹಾಗೂ ಪ್ರವಾಸ ಪ್ರಿಯರು ಸೀಪ್ಲೇನ್  ದಲ್ಲಿ ಪ್ರಯಾಣಿಸುವ ಕನಸನ್ನು ನನಸಾಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಉಡಾನ್ ಯೋಜನೆಯನ್ನು ರೂಪಿಸಿದೆ. ಉಡೇ ದೇಶ್ ಕಾ ಆಮ್ ನಾಗರಿಕ್ ಎನ್ನುವ ಘೋಷಣೆ ಮಾತ್ರವಲ್ಲ. ಬದಲಾಗಿ ದೇಶದಲ್ಲಿ ವಿಮಾನ ಪ್ರಯಾಣವನ್ನು ಎಲ್ಲರಿಗೂ ಕೈಗೆಟಕುವಂತೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ರಾಜ್ಯ ಪ್ರವಾಸೋದ್ಯಮ ಸಚಿವಾಲಯ ಈ ಬಗ್ಗೆ ಆಸಕ್ತಿತಾಳಿದೆ ಎನ್ನಲಾಗುತ್ತಿದೆ.