ಬೀಡ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನದ ಕಳಸಾರೋಹಣ
Kalasarohana of Basaveshwara Temple in Beeda Village
ಹಾನಗಲ್ 04: ತಾಲೂಕಿನ ನೆಲ್ಲಿ ಬೀಡ ಗ್ರಾಮದಲ್ಲಿ ಗುಡ್ಡದ ಬಸವೇಶ್ವರ ದೇವಸ್ಥಾನದ ಕಳಸಾರೋಹಣ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಸಹಸ್ರಾರು ಸಂಖ್ಯೆಯ ಸದ್ಭಕ್ತರ ಹರ್ಷೋದ್ಗಾರದ ಮಧ್ಯೆ ಭಕ್ತಿ, ಭಾವದಿಂದ ನೆರವೇರಿದವು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಶ್ರೀನಿವಾಸ ಮಾನೆ, ಆಧ್ಯಾತ್ಮದಲ್ಲಿ ನಂಬಿಕೆಯನ್ನಿಟ್ಟು ಬದುಕು ನಡೆಸಿದಾಗ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಿಸಲು ಸಾಧ್ಯವಿದೆ. ಸ್ವಾರ್ಥದ ಅಂಧಕಾರದಲ್ಲಿ ಮುಳುಗಿರುವ ಸಮಾಜ ಸರಿದಾರಿಯಲ್ಲಿ ನಡೆಯುವಂತೆ ಮಾಡಲು ಧಾರ್ಮಿಕ ಆಚರಣೆಗಳ ಅವಶ್ಯವಿದೆ. ಜೀವನದ ಬಹಿರಂಗ ಸತ್ಯಕ್ಕೆ ಮಾರುಹೋಗಿರುವ ಜನರು ಅಂತರಂಗದಲ್ಲಿನ ಸೌಂದರ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ತಪ್ಪು ಹಾದಿ ಹಿಡಿಯುತ್ತಿರುವ ಪ್ರಸ್ತುತ ಸಮಾಜವನ್ನು ಕಠಿಣ ಕಾನೂನುಗಳಿಂದ ನಿಯಂತ್ರಿಸಬಹುದೇ ವಿನಃ ಸಂಪೂರ್ಣ ಸುಧಾರಣೆ ತರಲು ಸಾಧ್ಯವಿಲ್ಲ. ಸಮಾಜ ತಿದ್ದುವ ಶಕ್ತಿ ಧರ್ಮಕ್ಕೆ ಮಾತ್ರವಿದೆ ಎಂದು ಹೇಳಿದ ಅವರು ದುರಾಸೆಗಿಳಿದಿರುವ ಮನುಷ್ಯ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದಾನೆ. ಮನುಷ್ಯ ತನ್ನ ಜೀವಿತದ ಅವಯಲ್ಲಿ ಸದ್ವಿಚಾರ ಸದ್ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಸಾರ್ಥಕ ಬದುಕು ಸಾಗಿಸಬೇಕಿದೆ ಎಂದರು.
ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಪುಟ್ಟಪ್ಪ ನರೇಗಲ್, ಮುಖಂಡರಾದ ಬಸವರಾಜ ಹುರುಳಿಕುಪ್ಪಿ, ಹನುಮಂತಪ್ಪ ಕಬ್ಬೂರ, ಗೋವಿಂದಪ್ಪ ಪೂಜಾರ, ಧರ್ಮರೆಡ್ಡಿ ಮೋಟೇಬೆನ್ನೂರು, ಕರಬಸಪ್ಪ ಹೊಸಳ್ಳಿ, ಧರ್ಮರೆಡ್ಡಿ ಹೆಬ್ಬಾಳ, ಮಂಜು ಲಕ್ಷ್ಮಾಪೂರ, ಹನುಮಂತಪ್ಪ ಪೂಜಾರ, ಸಣ್ಣಗೌಡ ಪಾಟೀಲ ಸೇರಿದಂತೆ ಅನೇಕರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 