ಬಸ್ ತಂಗುದಾಣಗಳ ನಿರ್ಮಾಣ ಕಾಮಗಾರಿಗೆ ಕಡಾಡಿ ಭೂಮಿ ಪೂಜೆ
Kadadi Bhoomi Puja for the construction of bus shelters
ಬಸ್ ತಂಗುದಾಣಗಳ ನಿರ್ಮಾಣ ಕಾಮಗಾರಿಗೆ ಕಡಾಡಿ ಭೂಮಿ ಪೂಜೆ
ಬೆಳಗಾವಿ 11: ಬಸ್ ಪ್ರಯಾಣಿಕರ ತಂಗುದಾಣವು ದಿನ ನಿತ್ಯ ಕೆಲಸಕ್ಕೆ ಸಂಚರಿಸುವ ಜನ ಸಾಮಾನ್ಯರ ಮತ್ತು ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳ ತ್ವರಿತ ಆಶ್ರಯ ತಾಣಗಳಾಗಿದ್ದು ಮಹಿಳೆಯರು, ಮಕ್ಕಳು ಹಾಗೂ ವೃದ್ದರಿಗೆ ಪ್ರಯಾಣದ ಸಂದರ್ಭದಲ್ಲಿ ಮಳೆ, ಗಾಳಿ, ಬಿಸಿಲುಗಳಿಂದ ಈ ತಂಗುದಾಣಗಳು ರಕ್ಷಣೆ ನೀಡಲಿವೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಹಲವು ವಾರ್ಡಗಳಲ್ಲಿ ಬಸ್ ಪ್ರಯಾಣಿಕರ ತಂಗುದಾಣಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.
ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಜಿಲ್ಲೆಯಲ್ಲಿ 100 ಕ್ಕೂ ಹೆಚ್ಚು ಬಸ್ ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಾಣ ಮಾಡುವ ಸಂಕಲ್ಪ ಕೈಗೊಳ್ಳಲಾಗಿದ್ದು, ಈಗಾಗಲೇ ಜಿಲ್ಲೆಯ ಹಲವು ಗ್ರಾಮಗಳಲ್ಲಿ 60 ಬಸ್ ಪ್ರಯಾಣಿಕರ ತಂಗುದಾಣಗಳಿಗೆ ಮಂಜೂರಾತಿ ನೀಡಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. 10 ಬಸ್ ತಂಗುದಾಣಗಳ ಕಾಮಗಾರಿ ಪೂರ್ಣಗೊಂಡಿದೆ ಎಂದರು.
ನಗರ ಸೇವಕರಾದ ಹಣಮಂತ ಕೊಂಗಾಲಿ ಅವರ ವಾರ್ಡ ನಂ 46 ರ ರಾಮತೀರ್ಥ ನಗರದ ಬಸವೇಶ್ವರ ಬಡಾವಣೆ ಕ್ರಾಸ್ ಹತ್ತಿರ ಮತ್ತು ಆಂಜನೇಯ ದೇವಸ್ಥಾನದ ಹತ್ತಿರ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣವಾಗಲಿದೆ. ವಾರ್ಡ ನಂ 35ರ ನಗರ ಸೇವಕರಾದ ಶ್ರೀಮತಿ ಲಕ್ಷ್ಮೀ ರಾಠೋಡ ಅವರ ವಾರ್ಡಿನ ಚನ್ನಮ್ಮ ಹೌಸಿಂಗ್ ಸೊಸಾಯಿಟಿ ಹತ್ತಿರ ಸೆಕ್ಟರ್ 6/1 ರಲ್ಲಿ ಮತ್ತು ಶ್ರೀನಗರದ ಸೆಕ್ಟರ್ ನಂ 05 ಹತ್ತಿರ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣವಾಗಲಿದೆ. ನಗರ ಸೇವಕರಾದ ಶ್ರೇಯಸ್ ನಾಕಾಡಿ ಅವರ ವಾರ್ಡ ನಂ 34 ರ ಶಾಹುನಗರ ಗಣೇಶ ಚೌಕ್ ಹತ್ತಿರ ಬಸ್ ಪ್ರಯಾಣಿಕರ ತಂಗುದಾಣಗಳಿಗೆ ಭೂಮಿ ಪೂಜೆ ನೇರವೇರಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಾದೇವ ರಾಠೋಡ, ಮಂಡಲ ಅಧ್ಯಕ್ಷ ವಿಜಯ ಕೊಡಗನೂರ, ಮಾಜಿ ಮೇಯರ ಎನ್. ಬಿ ನಿರ್ವಾಣಿ, ಅಣ್ಣಾಸಾಹೇಬ ದೇಸಾಯಿ, ನಿರುಪಾದಯ್ಯ ಕಲ್ಲೋಳಿಮಠ, ಅಪ್ಪಾಸಾಹೇಬ ಕಾಂಬಳೆ, ವಿಜಯಾ ಹಿರೇಮಠ, ಎಸ್. ಎಸ್ ಶೀಲವಂತ, ಎಸ್. ಎಂ ವಕ್ಕುಂದ, ಶ್ರೀ ಮಹಾಂತೇಶ ಮೂಲಿಮನಿ, ವಿನಾಯಕ ಪತ್ತಾರ, ಶಿವಾನಂದ ಕಣಗನಿ, ಕೃಷ್ಣಾ ಪಾಟೀಲ, ಸುರೇಶ ಯಾದವ, ಸಂತೋಷ ದೇಸಾಯಿ, ಶಂಕರ ಗುಡಸ, ಸಂಜು ಭಾಂವಿ, ವಿಠ್ಠಲ ಬಡಿಗೇರ, ಆರ್ ಸಿ ಪಾಟೀಲ ಸೇರಿದಂತೆ ಸ್ಥಳೀಯ ನಿವಾಸಿಗಳು, ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 