ದೈಹಿಕವಾಗಿ ಸದೃಢರಾಗಲು ಕಬ್ಬಡ್ಡಿ ಕ್ರೀಡೆ ಸಹಕಾರಿ: ಅಭಿನವ ಮಂಜುನಾಥಶ್ರೀ
ರಾಯಬಾಗ 20: ಗ್ರಾಮೀಣ ಭಾಗದ ದೇಶೀಯ ಕ್ರೀಡೆಯಾದ ಕಬ್ಬಡ್ಡಿ ತನ್ನದೇ ಆದ ಐತಿಹಾಸಿಕ ಮಹತ್ವ ಪಡೆದುಕೊಂಡಿದೆ ಎಂದು ಕ್ಯಾರಗುಡ್ಡ ಅವಜೀಕರ ಧ್ಯಾನಯೋಗಾಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಹೇಳಿದರು.
ಭಾನುವಾರ ಸಾಯಂಕಾಲ ಪಟ್ಟಣದ ಮಹಾವೀರ ಭವನ ಆವರಣದಲ್ಲಿ ಶಾಸಕ ಡಿ.ಎಮ್.ಐಹೊಳೆಯವರ ಹುಟ್ಟುಹಬ್ಬದ ಪ್ರಯುಕ್ತ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ ಸಾರಥ್ಯ ದಲ್ಲಿ ಹಮ್ಮಿಕೊಂಡಿರುವ ಅಖಿಲ ಭಾರತ ‘ಎ’ ಗ್ರೇಡ್ ಮಹಿಳಾ ಕಬ್ಬಡ್ಡಿ ಪಂದ್ಯಾವಳಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ದೈಹಿಕವಾಗಿ ಸದೃಢರಾಗಲು ಕಬ್ಬಡ್ಡಿ ಕ್ರೀಡೆ ಸಹಕಾರಿಯಾಗಿದೆ ಎಂದರು.
ಶಾಸಕ ಐಹೊಳೆಯವರು ಗ್ರಾಮೀಣ ಭಾಗದ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಕಬ್ಬಡ್ಡಿ ಪಂದ್ಯಾವಳಿ ಆಯೋಜಿಸಿದ್ದು, ದೇಶದಾದ್ಯಂತದಿಂದ ಆಗಮಿಸಿರುವ ಕ್ರೀಡಾಪಟುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.ಕ್ರೀಡಾ ಪಂದ್ಯಾವಳಿಯಲ್ಲಿ ಹರ್ಯಾಣ, ದೆಹಲಿ, ರಾಜಸ್ತಾನ, ತಮಿಳುನಾಡು ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಸುಮಾರು 40 ತಂಡಗಳು ಭಾಗವಹಿಸಲಿವೆ.ಸಮಾರಂಭದ ಸಾನ್ನಿಧ್ಯವನ್ನು ನಂದಿಕುರಳಿ ಪಂಚಲಿಂಗೇಶ್ವರ ಮಠದ ವೀರಭದ್ರ ಸ್ವಾಮೀಜಿ ವಹಿಸಿದ್ದರು. ಶಾಸಕ ಡಿ.ಎಮ್.ಐಹೊಳೆ, ಕರ್ನಾಟಕ ರಾಜ್ಯ ರೇಫರಿ ಬೋರ್ಡ ಚೇರ್ಮನ್ನ ಎಮ್.ಶಣ್ಮುಗಮ್, ಕಬ್ಬಡ್ಡಿ ಅಸೋಶಿಯೇಶನ್ ಜಿಲ್ಲಾ ಉಪಾಧ್ಯಕ್ಷ ಸಂಜು ಮಸಾಲಜಿ, ಸಂಜು ಮೈಶಾಳೆ, ಸದಾಶಿವ ಘೋರೆ್ಡ, ಅರುಣ ಐಹೊಳೆ, ಶಿವಾನಂದ ಐಹೊಳೆ, ಮಹೇಶ ಕರಮಡಿ, ಸುರೇಶ ಮಾಳಿ, ಜಿಯಾವುಲ್ಲ ಮುಲ್ಲಾ, ಶಿವು ಕೋಳಿ, ಚಿದಾನಂದ ಹಳಿಂಗಳಿ, ಮಹೇಶ ಕುಲಗುಡೆ, ಉಮೇಶ ಮೇತ್ರಿ, ರಿಯಾಜ್ ಮೋಮಿನ, ರೀತೇಶ ಅವಳೆ, ರಾಕೇಶ ಅವಳೆ, ಗೋಪಾಲ ಕೋಚೇರಿ, ಮಾರುತಿ ಬಂತೆ, ಅಪ್ಪಾಸಾಬ ಕೆಂಗನ್ನವರ ಸೇರಿ ಅನೇಕರು ಇದ್ದರು.