ಕ.ವಿ.ವಿ ಏಕವಲಯ ಮಹಿಳೆಯರ ವಾಲಿಬಾಲ್ ಪಂದ್ಯಾವಳಿ
KVV single zone women's volleyball tournament
ಧಾರವಾಡ 21 : ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮತ್ತು ಜೆ.ಎಸ್.ಎಸ್ ಬನಶಂಕರಿ ಕಲಾ ವಾಣಿಜ್ಯ ಮತ್ತು ಎಸ್.ಕೆ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯ ವಿದ್ಯಾಗಿರಿ ಧಾರವಾಡ ಇವುಗಳ ಸಂಯುಕ್ತಾಶ್ರಯದಲ್ಲಿ ಕ.ವಿ.ವಿ ಏಕವಲಯ ಮಹಿಳೆಯರ ವಾಲಿಬಾಲ್ ಪಂದ್ಯಾವಳಿ 2025-26 ಜೆ.ಎಸ್.ಎಸ್ ಕದಂಬ ಕ್ರೀಡಾಂಗಣದಲ್ಲಿ ನಡೆಯಿತು. ಪ್ರಸ್ತುತ ಪಂದ್ಯಾವಳಿಯ ಉದ್ಘಾಟನಾ ಸಮಾರಂಭಕ್ಕೆ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸಿಬಿಎಸ್ಸಿ ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ಸಾಧನ ಎಸ್ ಆಗಮಿಸಿ ಕ್ರೀಡಾಪಟುಗಳಿಗೆ ಸ್ಪೂರ್ತಿಯನ್ನು ತುಂಬಿದರು ಮುಂದುವರೆದು ಇಂದಿನ ಅವಸರದ ಬದುಕಿನಲ್ಲಿ ಕ್ರೀಡೆ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು ಸೋಲೇ ಗೆಲುವಿನ ಸೋಪಾನವಾಗಲಿ, ಕ್ರೀಡೆಯಿಂದ ದೈಹಿಕವಾಗಿ ಸದೃಢವಾಗುವುದು ಮಾತ್ರವಲ್ಲ ಮಾನಸಿಕವಾಗಿಯೂ ಬೌದ್ಧಿಕವಾಗಿಯೂ ವ್ಯಕ್ತಿ ಬಲಿಷ್ಠನಾಗುತ್ತಾನೆ. ಸದಾ ಧನಾತ್ಮಕವಾಗಿ ಆಲೋಚನೆಗಳೊಂದಿಗೆ ಜೀವನದಲ್ಲಿ ಎಂತಹ ಅಡೆತಡೆಗಳು ಬಂದರೂ ಎದುರಿಸುವ ಪರಿಪೂರ್ಣ ವ್ಯಕ್ತಿತ್ವ ಕ್ರೀಡೆಯಿಂದ ರೂಪಗೊಳ್ಳುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಜೆ.ಎಸ್.ಎಸ್ ಬನಶಂಕರಿ ಕಲಾ ವಾಣಿಜ್ಯ ಮತ್ತು ಎಸ್ ಕೆ ಗುಬ್ಬಿ ವಿಜ್ಞಾನ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ವೆಂಕಟೇಶ್ ಮುತಾಲಿಕ್ ಅವರು ವಹಿಸಿಕೊಂಡು ಪಠ್ಯದ ಜೊತೆಗೆ ಕ್ರೀಡೆ ವಿದ್ಯಾರ್ಥಿಗಳ ವ್ಯಕ್ತಿತ್ವದ ಸಮಗ್ರ ವಿಕಾಸಕ್ಕೆ ಅವಶ್ಯವಿದೆ ಇಂದು ಪಠ್ಯದಷ್ಟೇ ಮಹತ್ವ ಕ್ರೀಡೆಗೂ ಒದಗಿಸಬೇಕಿದೆ ಎಂದು ಹೇಳಿದರು .ಕಾರ್ಯಕ್ರಮದ ಕೊನೆಯಲ್ಲಿ ಬಹುಮಾನ ವಿತರಣಾ ಸಮಾರಂಭವನ್ನು ನೆರವೇರಿಸಿತು. ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಸರ್ಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ಬ್ಯಾಹಟ್ಟಿಯ ನಿವೃತ್ತ ದೈಹಿಕ ಶಿಕ್ಷಕರಾದ ಶ್ರೀ ವೆಂಕನಗೌಡ ಪಾಟೀಲ್ ಇವರು ಆಗಮಿಸಿದ್ದರು, ವಿಜೇತರಿಗೆ ಬಹುಮಾನ ವಿತರಿಸಿ ಸೋಲು-ಗೆೆಲವು ಗೆಲ್ಲಬೇಕೆಂಬ ಸ್ಪರ್ಧಾರ್ಥಿಗೆ ಸಾಮಾನ್ಯವಾದುದು ಮುನ್ನಡೆಯುವವರು ಜಯಿಸುತ್ತಾರೆ.ಸಮಾರಂಭದಲ್ಲಿ ಜೆ.ಎಸ್.ಎಸ್ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು, ಸಂಘಟಕರಾದ ಡಾ. ಜಿನ್ನಪ್ಪ ಕುಂದಗೋಳ, ಉಪಪ್ರಚಾರರಾದ ಅವಂತಿಕಾ ರೊಟ್ಟಿ ಡಾ. ಎನ್.ಡಿ ಕುಲಕರ್ಣಿ ಹಾಗೂ ಡಾ.ಶೌಕತ್ ಅಲಿ, ಕುಮಾರ ವರುಣ್ ಕಾಮರೆಡ್ಡಿ ಅರುಣ ಸವಣೂರ, ಉಪಸ್ಥಿತರಿದ್ದರು. ಶ್ರವಣ ಯೋಗಿ ನಿರೂಪಿಸಿದರು, ಡಾ. ಶಶಿಕಾಂತ ವಂದಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 