ಕೆಎಲ್‌ಇ ಹೇಲ್ತ್‌ ಗೈಡ್ ನೇರ ಪೋನ್‌-ಇನ್ ಕಾರ್ಯಕ್ರಮ

KLE Health Guide is a direct phone-in program

ಕೆಎಲ್‌ಇ ಹೇಲ್ತ್‌ ಗೈಡ್ ನೇರ ಪೋನ್‌-ಇನ್ ಕಾರ್ಯಕ್ರಮ

ಬೆಳಗಾವಿ,  04 : ಕೆಎಲ್‌ಇ ವೇಣುಧ್ವನಿ 90.4 ಎಫ್‌. ಎಮ್‌. ಕೇಂದ್ರ ಬೆಳಗಾವಿ, ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಬೆಳಗಾವಿ ಹಾಗೂ ಕೆಎಲ್‌ಇ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಬೆಳಗಾವಿ ಇವರ ಸಹಯೋಗದಲ್ಲಿ ಬುಧವಾರ ದಿನಾಂಕ 5ನೆ ಫೆಬ್ರುವರಿ 2025 ರಂದು ಬೆಳಿಗ್ಗೆ 10 ರಿಂದ 11 ಗಂಟೆ ವರೆಗೆ ವಿಶ್ವ ಕ್ಯಾನ್ಸರ್ ದಿನ ಕುರಿತು ನೇರ ಪೋನ್‌-ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗಾವಿಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ತಜ್ಞ ವೈದ್ಯ ಕುಮಾರ ವಿಂಚುರಕರ್ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು 9019904904 ಸಂಖ್ಯೆಗೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಕೆಎಲ್‌ಇ ವೇಣುಧ್ವನಿ 90.4 ಎಫ್‌. ಎಮ್‌. ಈಗ ಮೊಬೈಲ್ ಆಫ್‌ನಲ್ಲೂ ಲಭ್ಯ ಎಂದು ನಿಲಯ ನಿರ್ದೇಶಕ ಡಾ. ಸುನಿಲ ಜಲಾಲಪೂರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.