ನರೇಗಾ ಯೋಜನೆ ಯತಾಸ್ಥಿತಿಗೆ ಉಳಿಸಲು ಜ್ಯೋತಿ ಗೊಂಡಬಾಳ ಒತ್ತಾಯ

ನರೇಗಾ ಯೋಜನೆ ಯತಾಸ್ಥಿತಿಗೆ ಉಳಿಸಲು ಜ್ಯೋತಿ ಗೊಂಡಬಾಳ ಒತ್ತಾಯ Jyoti Gondaba demands to keep NREGA scheme as it is


ಕೊಪ್ಪಳ   28: ಕೇಂದ್ರ ಬಿಜೆಪಿ ಸರಕಾರದ ಜನವಿರೋಧಿ ನೀತಿಗಳು, ಧ್ವೇಷ ಮನಸ್ಥಿತಿಯಿಂದ ನರೇಗಾ ಯೋಜನೆಯನ್ನು ಬದಲಾಯಿಸಿ ಮಹಾತ್ಮ ಗಾಂಧಿ ಅವರ ಹೆಸರು ತೆಗೆದಿದ್ದನ್ನು ದೇಶವೇ ವಿರೋಧಿಸಬೇಕು ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಕೋರಿದರು. 

ಅವರು ನಗರದ ಗಾಂಧಿ ವೃತ್ತದಲ್ಲಿ ಜಲ್ಲಾ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ ಗಾಂಧಿ ನರೇಗಾ ಯೋಜನೆ ಯಥಾಸ್ಥಿತಿ ಉಳಿಸಲು ಆಗ್ರಹಿಸಿ ಪ್ರತಿಭಟನಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.  

ಕೇಂದ್ರದ ಗೋಡ್ಸೆ ಮತ್ತು ಮನುಸ್ಮೃತಿ ಪಾಲಕರು ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆದು, ಯೋಜನೆಯ ರೂಪ ಬದಲಿಸಿ, ರಾಜ್ಯ ಸರಕಾರಗಳಿಗೆ ಅನ್ಯಾಯ ಮಾಡಲು ಹೊರಟಿದೆ, ಕೇಂದ್ರ ಬಿಜೆಪಿ ಸರಕಾರದ ದುಷ್ಟ ಮನಸ್ಥಿತಿಯನ್ನು ಖಂಡಿಸಿ, ಮಹಾತ್ಮ ಗಾಂಧಿ ನರೇಗಾ ಯೋಜನೆ ಯಥಾಸ್ಥಿತಿ ಉಳಿಸಲು ಆಗ್ರಹಿಸಿ ಮಹಾತ್ಮ ಗಾಂಧೀಜಿ ವೃತ್ತದವರೆಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದ್ದೇವೆ, ಕೂಡಲೇ ಕೇಂದ್ರ ಎಚ್ಚೆತ್ತು ಕೊಳ್ಳದಿದ್ದರೆ ಇದನ್ನು ಜನಾಂದೋಲನವಾಗಿದೆ ರೂಪಿಸಲಾಗುತ್ತದೆ ಎಂದರು. 

ಈ ಸಂದರ್ಭದಲ್ಲಿ ಮುಖಂಡರುಗಳಾದ ಕಿಶೋರಿ ಬೂದನೂರ, ಆಯೆುಷಾ ಖಾನಂ, ಮಂಜುನಾಥ ಜಿ. ಗೊಂಡಬಾಳ, ಯಾದವ ರವಿ ಕುರಗೋಡ, ಹೊನ್ನೂರಸಾಬ ಭೈರಾಪೂರ, ಸಲೀಂ ಅಳವಂಡಿ, ಪದ್ಮಾವತಿ ಕಂಬಳಿ, ಸುಮಂಗಲಾ ನಾಯಕ, ಮಲ್ಲಿಕಾರ್ಜುನ ಪೂಜಾರ, ಗಂಗಮ್ಮ ಚಿಕೇನಕೊಪ್ಪ, ಯಶೋಧಾ ಮರಡಿ, ಚನ್ನಮ್ಮ, ಶಿಲ್ಪಾ ಗುಡ್ಲಾನೂರ, ಸಾವಿತ್ರಿ ಗೊಲ್ಲರ, ಶರಣಮ್ಮ ಪೂಜಾರ, ಅಂಜಲಿ, ರೇಖಾ, ಶ್ರೀನಿವಾಸ ಪಂಡಿತ, ಸೈಯದ್ ನಾಸಿರುದ್ದೀನ್, ಮೌನೇಶ ವಡ್ಡಟ್ಟಿ, ಹನುಮೇಶ ಬೆಣ್ಣಿ ಅನೇಕರಿದ್ದರು. ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಗ್ರೇಡ್ 2 ತಹಶೀಲ್ದಾರ ಗವಿಸಿದ್ದಪ್ಪ ಮಣ್ಣೂರ ಅವರು ಮನವಿ ಸ್ವೀಕರಿಸಿದರು.