ಬಂಗಾಳದ ಜಂಗಲ್ ರಾಜ್ ತೊಡೆದುಹಾಕಬೇಕು
Jungle Raj in Bengal should be abolished
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಜಂಗಲ್ ರಾಜ್ ತೊಡೆದುಹಾಕಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ತೃಣಮೂಲ ಕಾಂಗ್ರೆಸ್ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಣಾಘಾಟ್ನ ತಾಹೆರ್ಪುರ್ ನೇತಾಜಿ ಪಾರ್ಕ್ನಲ್ಲಿ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಬೇಕಾಗಿತ್ತು. ಆದರೆ ಕಳಪೆ ಗೋಚರತೆಯಿಂದಾಗಿ ಅವರ ಹೆಲಿಕಾಪ್ಟರ್ ಹೆಲಿಪ್ಯಾಡ್ನಲ್ಲಿ ಇಳಿಯಲು ಸಾಧ್ಯವಾಗದ ಕಾರಣ ಕೋಲ್ಕತಾ ವಿಮಾನ ನಿಲ್ದಾಣಕ್ಕೆ ಹಿಂತಿರುಗುವ ಅನಿವಾರ್ಯತೆ ಎದುರಾಯಿತು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಟಿಎಂಸಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ "ಇಂದು ದೇಶವು ತ್ವರಿತ ಅಭಿವೃದ್ಧಿಯನ್ನು ಬಯಸುತ್ತಿದೆ. ಬಿಹಾರ ಮತ್ತೊಮ್ಮೆ ಎನ್ಡಿಎ ಸರಕಾರಕ್ಕೆ ಅಭಿವೃದ್ಧಿಗಾಗಿ ಬೃಹತ್ ಜನಾದೇಶವನ್ನು ನೀಡಿತು.ಬಂಗಾಳದಲ್ಲಿ ಬಿಜೆಪಿಯ ಗೆಲುವಿಗೆ ಬಿಹಾರ ದಾರಿ ಮಾಡಿಕೊಟ್ಟಿದೆ. ಬಿಹಾರವು 'ಜಂಗಲ್ ರಾಜ್' ಆಳ್ವಿಕೆಯನ್ನು ಒಂದೇ ಧ್ವನಿಯಲ್ಲಿ ತಿರಸ್ಕರಿಸಿದೆ" ಎಂದರು.
''ಬಿಹಾರದ ಜನರು 20 ವರ್ಷಗಳ ನಂತರವೂ ಅವರು ಬಿಜೆಪಿ-ಎನ್ಡಿಎಗೆ ಮೊದಲಿಗಿಂತ ಹೆಚ್ಚಿನ ಸ್ಥಾನಗಳನ್ನು ನೀಡಿದ್ದಾರೆ. ಈಗ ನಾವು ಪಶ್ಚಿಮ ಬಂಗಾಳದಲ್ಲಿರುವ ಜಂಗಲ್ ರಾಜ್ ತೊಡೆದುಹಾಕಬೇಕು'' ಎಂದು ಕರೆ ನೀಡಿದರು.
"ಟಿಎಂಸಿ ಬಿಜೆಪಿಯನ್ನು ತೀವ್ರವಾಗಿ, ಪದೇ ಪದೇ, ತನ್ನ ಎಲ್ಲಾ ಶಕ್ತಿಯಿಂದ ವಿರೋಧಿಸಲಿ.ಆದರೆ ಅದು ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಏಕೆ ಅಡ್ಡಿಯಾಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ನೀವು ಮೋದಿಯನ್ನು ವಿರೋಧಿಸಬಹುದು, ಆದರೆ ಬಂಗಾಳದ ಜನರನ್ನು ಅಸಂತೋಷಗೊಳಿಸಬೇಡಿ. ಅವರ ಹಕ್ಕುಗಳನ್ನು ಕಸಿದುಕೊಳ್ಳಬೇಡಿ. ಅವರ ಕನಸುಗಳನ್ನು ಛಿದ್ರಗೊಳಿಸುವ ಪಾಪವನ್ನು ಮಾಡಬೇಡಿ'' ಎಂದು ಕಿಡಿ ಕಾರಿದರು. ಬಿಜೆಪಿಗೆ ಒಂದು ಅವಕಾಶ ನೀಡುವಂತೆ ನಾನು ವಿನಮ್ರವಾಗಿ ಪಶ್ಚಿಮ ಬಂಗಾಳದ ಜನರಲ್ಲಿ ಕೈಜೋಡಿಸಿ ವಿನಂತಿಸುತ್ತಿದ್ದೇನೆ"ಎಂದರು.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 