ವಾಷಿಂಗ್ಟನ್ದಲ್ಲಿ ಜುಲೈ 4,5 ಹಾಗೂ 6 ಮೂರು ದಿನ ವಿಶ್ವ ಬಸವ ಸಮ್ಮೇಳನ

ಧಾರವಾಡ 02:  ಅಮೆರಿಕಾದ ವಾಷಿಂಗ್ಟನ್ ನಗರದಲ್ಲಿ ಮುಂಬರುವ ಜುಲೈ ತಿಂಗಳಲ್ಲಿ ಮೂರು ದಿನಗಳ ವಿಶ್ವ ಬಸವ ಸಮ್ಮೇಳನ ಏರ್ಪಡಿಸಲಾಗುತ್ತಿದೆ ಎಂದು ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ತಿಳಿಸಿದರು.

ಕಲ್ಯಾಣನಗರದ ಬಸವ ಸಮಿತಿ ಹಾಗೂ ಟಿ.ಎಸ್.ಪಾಟೀಲ ಪ್ರತಿಷ್ಠಾನ ಸಂಯುಕ್ತವಾಗಿ ನಿನ್ನೆ ನವೆಂಬರ್ 30ರಂದು ಅನುಭವ ಮಂಟಪದಲ್ಲಿ ಆಯೋಜಿಸಿದ ಅರಿವಿನ ಮನೆ ಉಪನ್ಯಾಸ ಮಾಲೆಯ "ಶರಣ ಚಿಂತನ" ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 

ಆ ಮೂರು ದಿನಗಳ ವಿಶ್ವ ಬಸವ ಸಮ್ಮೇಳನ 2020ನೆ ಜುಲೈ 4,5 ಹಾಗೂ 6 ರಂದು ಆಚರಿಸಲಾಗುತ್ತಿದೆ. ಸಮ್ಮೇಳನ ಅಂಗವಾಗಿ ಬಸವಣ್ಣನವರ ವಚನಗಳು, ಆಚಾರ-ವಿಚಾರ ಉಪನ್ಯಾಸ, ಶಿವ ಶರಣೆಯರ ಕುರಿತು ಗೋಷ್ಠಿಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು. 

ಡಿಜಿಟಲ್ ತಂತ್ರಜ್ನಾನ ಮಾಧ್ಯಮದ ಮೂಲಕ ಬಸವಣ್ಣನವರ ತತ್ವಗಳನ್ನು ವಿಶ್ವವ್ಯಾಪಿಯಾಗಿ ಪರಿಚಯಿಸಲಾಗುತ್ತಿದೆ.  ಸುಮಾರು 22 ರಾಷ್ಟ್ರಗಳ ಜನರು ಈ ಕಾರ್ಯಕ್ರಮ ವೀಕ್ಷಿಸುತ್ತಿದ್ದಾರೆ. ಬಸವಣ್ಣನವರ ವಚನಗಳನ್ನು ದೇಶದ ಎಲ್ಲ ಭಾಷೆಗಳಲ್ಲಿಯೂ ಅನುವಾದ ಮಾಡಿದೆ ಎಂದು ಜತ್ತಿ ಹೇಳಿದರು. ಇದರ ಜೊತೆಯಲ್ಲಿ 23 ಭಾಷೆ ಗಳಲ್ಲಿಯು ಕೂಡಾ ವಚನಗಳನ್ನು ಹಾಡುವ ಕಾರ್ಯ ಕೈಗೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು. ಶರಣರ ಶಬ್ದ ಆದಿಯಾಗಿ ಅರ್ಥವಾಗಲು ಅನುಭಾವದ ನೆಲೆಯಲ್ಲಿ ವಚನಗಳನ್ನು ಶರಣರ ಶಬ್ದದ ವಿಶ್ಲೇಷಣೆ ರಾಷ್ಟ್ರಕ್ಕೆ ತಲುಪಿಸಲಾಗುತ್ತಿದೆ ಎಂದರು.

        "ಶರಣರ ಚಿಂತನೆ" ಕುರಿತು ಚಿಂತಕ ಡಾ. ಬಸವಲಿಂಗ ಸೊಪ್ಪಿಮಠ ಉಪನ್ಯಾಸ ನೀಡಿ ಮಾತನಾಡಿ ಶಿವನಿಗೆ ಶರಣು ಹೋದವನು ಶರಣ. ಆಧುನಿಕ ಕಾಲದಲ್ಲಿ ಶರಣ ಚಿಂತನೆ ಅಡಿಯಲ್ಲಿ ವಚನ ಪಿತಾಮಹ ಫ.ಗು.ಹಳಕಟ್ಟಿ, ಡಾ. ಎಮ್. ಎಮ್. ಕಲಬುಗರ್ಿ, ಡಾ.ವೀರಣ್ಣ ರಾಜೂರವರು ವಚನ ಸಾಹಿತ್ಯ ಸಂಪಾದನೆ ಮಾಡಿದರು. ಬಸವಣ್ಣನವರ ಚಿಂತನೆಗಳನ್ನು ಜಾಗತಿಕ ಮಟ್ಟದಲ್ಲಿ ಅರವಿಂದ ಜತ್ತಿಯವರು ತೆಗೆದುಕೊಂಡು ಹೋಗಿದ್ದಾರೆಂದರು. ಅರಿವು, ಆಚಾರ, ವಿಚಾರ, ಅನುಭಾವ ಸಾಮಾನ್ಯ ಜನರನ್ನು ಸ್ವಾಭಿಮಾನ ಅರಿವಿನ ಕಡೆಗೆ ತೆಗೆದುಕೊಂಡು ಹೋದದ್ದು ವಿಶೇಷ ಎಂದರು.

ಅರಿವು ಪ್ರತಿಯೊಬ್ಬ ವ್ಯಕ್ತಿಯಲ್ಲಿ ಕಾಣಬಹುದು. ಅರಿವು ವ್ಯಕ್ತಿಯ ಜನ್ಮಹತ್ತಿ ಬಂದದ್ದು ಎಂದು ಹೇಳಿದ ಅವರು, ಶರಣರ ಬದುಕಿನಲ್ಲಿ ಸಂಸಾರವನ್ನು ಒಪ್ಪಿಕೊಂಡು ಶರಣ ದಾಂಪತ್ಯದ ವಿಚಾರಗಳು ನೋಡಲಿಕ್ಕೆ ಸಾಧ್ಯ. ಶರಣರ ಜೀವನ, ಅದು ಸುಚಿತ್ತದ ಅರಿವಿನ ಜೀವನ, ಆಡುವ ಮಾತಿನಲ್ಲಿ ಅನುಭವದ ಬೆಳಕು ಇರಬೇಕು ಎಂದು ಹೇಳಿ ಶರಣರ ಚಿಂತನೆಗಳನ್ನು ವಿವರಿಸಿದರು.

ಹಿರಿಯ ಸಾಹಿತಿಗಳಾದ ಡಾ. ವೀರಣ್ಣ ರಾಜೂರ ಅಧ್ಯಕ್ಷತೆ ವಹಿಸಿ ಮಾತನಾಡಿ ಶರಣ ತತ್ವಗಳು ಇಂದು ಕೇವಲ ಕನರ್ಾಟಕ ಗಡಿಯೊಳಗೆ ಇಲ್ಲಿ ಇವು ವು ವಿಶ್ವವ್ಯಾಪಿ ಪಡೆದಿವೆ. ಶರಣರ 2500 ವಚನಗಳನ್ನು ಎಲ್ಲ ಭಾಷೆಗಳಲ್ಲಿ ಅನುವಾದ ಅಲ್ಲದೆ ಶುದ್ಧ ವಚನಗಳನ್ನು ಓದುಗರ ಕೈಗೆ ಕೊಡಲು ಪ್ರಯತ್ನಿಸಲಾಗುತ್ತಿದೆ ಎಂದು ಡಾ. ರಾಜೂರ ತಿಳಿಸಿದರು. ಬೆಂಗಳೂರು, ಕಲಬುಗರ್ಿ, ಧಾರವಾಡದ ಬಸವ ಸಮಿತಿ ಜಾಗೃತವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ಅರಿವು, ಆಚಾರ, ನಡೆ-ನುಡಿಗಳಲ್ಲಿ ಒಂದಾದವನೇ ಶರಣ ಎಂದರು. ವೇದಿಕೆಯ ಮೇಲೆ ಟಿ.ಎಸ್.ಪಾಟೀಲ ಪ್ರತಿಷ್ಠಾನದ ಅಧ್ಯಕ್ಷೆ ಮಾತೋಶ್ರೀ ಅನುಸೂಯಮ್ಮ ಪಾಟೀಲ ಉಪಸ್ಥಿತರಿದ್ದರು. 

ಆರಂಭದಲ್ಲಿ ಕಲ್ಯಾಣ ನಗರದ ಶರಣೆಯರ ಬಳಗದಿಂದ ಪ್ರಾರ್ಥನೆ ನಡೆಯಿತು. ಕೆ.ಯು.ಡಿ.ಬಸವ ಪೀಠದ ಸಂಚಾಲಕ ಡಾ.ಸಿ.ಎಂ ಕುಂದಗೋಳ ಪ್ರಾಸ್ತಾವಿಕವಾಗಿ ಮಾತನಾಡಿ ಶರಣರ ಚಿಂತನೆ ಮಾಲಿಕೆಯು ಸಮಾಜದಲ್ಲಿ ಪರಿವರ್ತನೆಗೆ ಕಾರಣ ಆಗಬೇಕೆಂದರು. ಶರಣೆ ಚಿನ್ಮಯಿ ಪಾಟೀಲ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಲ್ಯಾಣನಗರದ ಬಸವ ಸಮಿತಿ ಸಂಚಾಲಕ ಎಂ.ಜಿ. ಮುಳಕೂರ ವಂದಿಸಿದರು.

ಡಾ. ಎನ್.ಜಿ.ಮಹದೇವಪ್ಪ, ಪ್ರೋ. ಬಿ.ವಿ. ಗುಂಜಟ್ಟಿ, ಪ್ರೋ. ಯರವಂತೆಲಿಮಠ, ಪ್ರೋ. ಬಿ.ಸಿ. ಜವಳಿ, ಬಸವ ಕೇಂದ್ರ ಅಧ್ಯಕ್ಷ ಶೇರೆಣ್ಣವರ, ಉಪಾಧ್ಯಕ್ಷ ಎಂ.ಎಸ್.ಚೌಧರಿ, ಹುಬ್ಬಳ್ಳಿಯ ಲೋಕೇಶ ಕೊರವಿ, ಗಂಗಾವತಿಯ ಶ್ರೀಶೈಲ ಪಟ್ಟಣಶೆಟ್ಟಿ, ಎಲ್.ಐ.ಸಿ. ನಿವೃತ್ತ ಅಧಿಕಾರಿ ಪಿ.ಎಸ್.ಹಿರೇಮಠ, ಎಂ. ಆರ್.ಈಶಣ್ಣ, ಮಲ್ಲಿಕಾಜರ್ುನ ಹಳ್ಳಿಕೇರಿ, ಪೋಲಿಸಪಾಟೀಲ ಸೇರಿದಂತೆ ಶರಣ ಶರಣೆಯರು ಭಾಗವಹಿಸಿದ್ದರು.