ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ವೃತ್ತಿಪರ ಕೌಶಲ್ಯ ಕಲಿಸಲಾಗುತ್ತೆ: ಡಾ.ಜರಕುಂಟಿ
Journalism students are taught professional skills: Dr. Jarakunti
ಮುಧೋಳ 04: ಬಾಗಲಕೋಟ ಬಿವ್ಹಿವ್ಹಿ ಸಂಘದ ನಗರದ ಶ್ರೀ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳಿಗೆ ಕಲಿಕೆ ಮತ್ತು ಸೃಜನಶೀಲತೆಯನ್ನು ಕಲಿಸಿಕೊಡಲಾಗುತ್ತದೆ, ಉದಯೋನ್ಮುಖ ಮಾಧ್ಯಮ ವೃತ್ತಿಪರರ ಪ್ರತಿಭೆ ಮತ್ತು ಆಕಾಂಕ್ಷೆಗಳನ್ನು ಪೋಷಿಸುತ್ತಾ ಬಂದಿದೆ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ವಿದ್ಯಾರ್ಥಿಗಳನ್ನು ವೇಗ ವರ್ಧಕರನ್ನಾಗಿ ಮಾಡಲಾಗುತ್ತದೆ, ಸಂವಹನ, ವಿಮರ್ಶಾತ್ಮಕ ಚಿಂತನೆ ಮತ್ತು ನೈತಿಕ ಸಮಗ್ರತೆಯ ಸಾಧನಗಳೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ಈ ವಿಭಾಗದ ಉದ್ದೇಶವಾಗಿದೆ ಎಂದು ಪ್ರಾಚಾರ್ಯ ಡಾ.ಎಮ್.ಆರ್.ಜರಕುಂಟಿ ಹೇಳಿದರು.
ನಗರದ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಅಧ್ಯಾಪಕರ ವಿನಿಮಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಈ ವಿಭಾಗದಲ್ಲಿ ಮುದ್ರಣ ಪತ್ರಿಕೋದ್ಯಮ, ಸಮೂಹ ಸಂವಹನ, ರೇಡಿಯೋ ಮತ್ತು ದೂರದರ್ಶನ ನಿರ್ಮಾಣ, ಜಾಹೀರಾತು, ಸಾರ್ವಜನಿಕ ಸಂಪರ್ಕ, ಚಲನಚಿತ್ರ ಅಧ್ಯಯನಗಳು, ಸಾಕ್ಷ-್ಯಚಿತ್ರಗಳು, ಸಂವಹನ ಸಂಶೋಧನೆ, ಹೊಸ ಮಾಧ್ಯಮ ಮತ್ತು ಛಾಯಾಗ್ರಹಣದಲ್ಲಿ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತರಬೇತಿಯನ್ನು ನೀಡುತ್ತದೆ, ಕೋರ್ಸ್ ಪಠ್ಯಕ್ರಮದ ಒಳಗೆ ಮತ್ತು ಹೊರಗೆ, ತಾಂತ್ರಿಕ ಪರಿಣತಿ ಯೊಂದಿಗೆ ಮಾತ್ರವಲ್ಲದೆ ಪರಿಣಾಮಕಾರಿ ಸಂವಹನ ಮತ್ತು ವಿಶ್ಲೇಷಣಾತ್ಮಕ ವೀಕ್ಷಣೆಯ ಅಮೂಲ್ಯ ಸಾಮರ್ಥ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಅಭಿವೃದ್ಧಿಪಡಿಸಲು ಅಧ್ಯಾಪಕರು ನಿರಂತರ ಶ್ರಮಿಸುತ್ತಿದ್ದಾರೆ, ಇದರ ಪರಿಣಾಮ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕವಾಗಿ ಅತ್ಯುತ್ತಮ ಅಂಕಗಳನ್ನು ಪಡೆದುಕೊಳ್ಳುತ್ತಿದ್ದಾರೆ, ಈ ವಿಭಾಗವು ಹಲವಾರು ಶೈಕ್ಷಣಿಕ ಮತ್ತು ಸಮೂಹ ಸಂವಹನ ಕ್ಷೇತ್ರಗಳಲ್ಲಿ ಶಾಶ್ವತ ಪ್ರಭಾವ ಬೀರಿದ ಗಮನಾರ್ಹ ವಿದ್ಯಾರ್ಥಿಗಳನ್ನು ಉತ್ಪಾದಿಸಿದೆ ಎಂದರು.
ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ವಿಷಯ ಬರವಣಿಗೆ, ವೃತ್ತಪತ್ರಿಕೆ ವಿನ್ಯಾಸ, ಆಡಿಯೋ-ವಿಷುಯಲ್ ನಿರ್ಮಾಣ, ಚಲನಚಿತ್ರ ತಯಾರಿಕೆ, ರೇಡಿಯೋ ಕಾರ್ಯಕ್ರಮ ನಿರ್ಮಾಣ ಮತ್ತು ಹೊಸ ಮಾಧ್ಯಮ ನಿರ್ಮಾಣಗಳಲ್ಲಿ ತಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸಲಾಗುತ್ತದೆ ಕಾರಣ ವಿವಿಧ ಆಧುನಿಕ ಸಾಪ್ಟವೇರ್ ಗಳನ್ನು ಹೇಗೆ ಬಳಸಿಕೊಂಡು ತಮ್ಮ ವೃತ್ತಿ ಕೌಶಲ್ಯ ಅಭಿವೃದ್ದಿ ಪಡಿಸಿಕೊಳ್ಳ ಬೇಕು ಎಂದು ಅಧ್ಯಾಪಕರಿಂದ ತಿಳಿದುಕೊಳ್ಳಬೇಕೆಂದು ಹೇಳಿದರು.
ಕೆಎಲ್‌ಇ ಸಂಸ್ಥೆಯ ಮಹಾಲಿಂಗಪೂರ ಎಸ್.ಸಿ.ಪಿ ಮಹಾವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಉಪನ್ಯಾಸಕ, ಎಸ್.ಆರ್.ಕಂಠಿ ಕಾಲೇಜಿನ ಹಳೆಯ ವಿದ್ಯಾರ್ಥಿ ಬಸವರಾಜ ಪಾಗದ ಅವರು ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಇನ್ ಡಿಸೈನ್ ಮತ್ತು ಇತರೆ ಸಾಫ್ಟ್ ವೇರ್ ಗಳ ಬಳಕೆ ಮಾಡುವದರ ಕುರಿತು ತಿಳಿಸಿಕೊಟ್ಟರು.
ಐಕ್ಯೂಎಸಿ ಸಂಯೋಜಕ ಎ.ಐ.ಕಡೂರ ವೇದಿಕೆ ಮೇಲಿದ್ದರು, ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ವಿಶ್ವನಾಥ ಮುನವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಶ್ವೇತಾ ಶಿರಬಡಗಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು, ವಿದ್ಯಾರ್ಥಿನಿಯರಾದ ಸಂಜನಾ ಅಮರಾಪೂರ ನಿರೂಪಿಸಿದರು, ಕಾವೇರಿ ಧನಗರ ವಂದಿಸಿದರು, ಪತ್ರಿಕೋಧ್ಯಮ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 