ರಾಜಸ್ಥಾನದಲ್ಲಿ ಜೋಡೋ ಚಾಂಪಿಯನ್ಶಿಪ್ : ಸ್ನೇಹ ದೀಪ ಅಂದ ವಿದ್ಯಾರ್ಥಿಗಳ ಸಾಧನೆ
Jodo Championship in Rajasthan: Achievements of Sneha Deepa Anda students
ರಾಣೆಬೆನ್ನೂರು : 31 ರಾಜಸ್ಥಾನದ ಗಂಗಾ ನಗರದಲ್ಲಿ 14ನೇ ರಾಷ್ಟ್ರೀಯ ಅಂದರ ಜೋಡೋ ಚಾಂಪಿಯನ್ಶಿಪ್ -2025 ಇತ್ತೀಚೆಗೆ ನಡೆಯಿತು. ಸದರಿ ಕ್ರೀಡಾಕೂಟದಲ್ಲಿ ನಗರದ ಸ್ನೇಹ ದೀಪ ಅಂದ ಹಾಗೂ ಅಂಗವಿಕಲರ ಸಂಸ್ಥೆಯ ವಿದ್ಯಾರ್ಥಿಗಳು ಕರ್ನಾಟಕದಿಂದ ಪ್ರತಿನಿಧಿಸಿದ್ದರು. ಮಹಿಳೆಯರ ಮತ್ತು ಪುರುಷರ ಸಬ್ ಜೂನಿಯರ್ -30 ಕೆ.ಜಿ. ವಿಭಾಗದಲ್ಲಿ ಹೆಚ್ ವಂಶಿ- ಮತ್ತು ಸಂಜನಾ ಜಿ. ಹುಲ್ಲಣ್ಣನವರ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಪಡೆಡಿದ್ದಾರೆ. ಹಾಗೂ 45 ಕೆ.ಜಿ. (ಮಹಿಳೆಯರ)- ಕು. ಲತಾ ಫಕ್ಕೀರ್ಪ ಹರಿಜನ ತೃತೀಯ ಸ್ಥಾನದಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಮತ್ತು 70 ಕೆಜಿ, ಸಂಜಯಕುಮಾರ್ ಎಂ. ಮಿರ್ಜಿ, ತೃತಿಯ ಸ್ಥಾನ, ( ಕಂಚಿನ ಪದಕ ) ಗಳಿಸಿ ಶಾಲೆಗೆ ಮತ್ತು ಜಿಲ್ಲೆಗೆ ಮತ್ತು ನಾಡಿಗೆ ಕೀರ್ತಿ ತಂದಿದ್ದಾರೆ.
ಸಾಧಕ ವಿದ್ಯಾರ್ಥಿಗಳು ನಗರಕ್ಕೆ ಆಗಮಿಸುತ್ತಿದ್ದಂತೆ, ಭವ್ಯ ಸ್ವಾಗತವನ್ನು ನೀಡಿದ ಗಣ್ಯರು ಮೆರವಣಿಗೆ ನಡೆಸಿ ಸಂಭ್ರಮಿಸಿ, ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಅರುಣಕುಮಾರ ಪೂಜಾರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶ್ ಮೋಟಗಿ, ಗಣ್ಯರಾದ ಸುಧೀರ್ ಕುರುವತ್ತಿ, ವಿದ್ಯಾ ಕುರುವತ್ತಿ, ಡಾ. ಗೀರೀಶ್ ಕೆಂಚಪ್ಪನವರ, ವಸಂತಾ ಹುಲ್ಲತ್ತಿ, ಕೆ.ಸಿ. ಕೋಮಲಾಚಾರ, ಸ್ವಪ್ನ ಬತ್ತದ,, ಡಾ. ದೀಪಾಲಿ ಪುನಿತ, ಪರಮೇಶಪ್ಪ ಮುದಿಗೌಡ್ರ, ಗೀರೀಶ್ ಬುಡ್ಡನಗೌಡ್ರ, ಮಂಜುನಾಥ ಮುದ್ದಿ ಯವರ, ಉಪಸ್ಥಿತರಿದ್ದರು. ಸಾಧಕ ವಿದ್ಯಾರ್ಥಿಗಳು ಮತ್ತು ದಾನಿಗಳಿಗೂ ಸಂಸ್ಥೆಯ ಧರ್ಮದರ್ಶಿಗಳಾದ ಡಾ. ಪಾಲ್ ಮುದ್ದಾ, ಹಾಗೂ ಕೆ.ಜಿ. ಮೋಹನ್ ಮತ್ತು ಶಿಕ್ಷಕರು ಆಡಳಿತ ಮಂಡಳಿ ಸದಸ್ಯರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 