ಫೆ.2 ರಂದು ಜಿಲ್ಲೆಯ ದರಬಾರ ಶಾಲಾ ಆವರಣದಲ್ಲಿ ಉದ್ಯೋಗ ಮೇಳ-ಕಾಂತ ನಾಯ್ಕ

ಫೆ.2 ರಂದು ಜಿಲ್ಲೆಯ ದರಬಾರ ಶಾಲಾ ಆವರಣದಲ್ಲಿ ಉದ್ಯೋಗ ಮೇಳ-ಕಾಂತ ನಾಯ್ಕ Job fair at Darbara School premises in the district on Feb. 2-Kantha Nayak


      ವಿಜಯಪುರ, ಜ, 30  : ವಿದ್ಯಾವಂತ ನಿರುದ್ಯೋಗಿಗಳಿಗೆ ಅವರು ಹೊಂದಿರುವ ಕೌಶಲ್ಯಗನುಸಾರವಾಗಿ ಉದ್ಯೋಗ ಪಡೆಯಲು ಅನುಕೂಲವಾಗುವತ್ತ, ವಿಜಯಪುರ ನಗರದ ದರಬಾರ ಶಾಲಾ ಆವರಣದಲ್ಲಿ ಫೆಬ್ರವರಿ 2ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ.  ಅಂದು ಬೆಳಿಗ್ಗೆ 9 ರಿಂದ ಸಂಜೆ5 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದ್ದು, ಅಭ್ಯರ್ಥಿಗಳು ಣಣಠಿ://ಣಜಥಿಠಚಿಟಜಟಚಿ.ಞಜಛಿಞಚಿಡಿಟಿಚಿಣಚಿಞಚಿ.ಛಿಠ ಲಿಂಕ್ ಬಳಸಿ ನೋಂದಣಿ ಮಾಡಿಕೊಂಡು ಉದ್ಯೋಗ ಮೇಳದ ಸದುಪಯೋಗಪಡಿಸಿಕೊಳ್ಳುವಂತೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕಾಂತ ನಾಯ್ಕ್‌ ಅವರು ಹೇಳಿದರು. 

ಅವರು ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ,  ವಿದ್ಯಾವಂತ ನಿರುದ್ಯೋಗಿಗಳು ಉದ್ಯೋಗ ಪಡೆಯುವ ಜೊತೆಗೆ,ಅವರ ಕೌಶಲ್ಯಕ್ಕನುಸಾರವಾಗಿ ತರಬೇತಿ ನೀಡಲು ಕ್ರಮ ವಹಿಸಲಾಗುವುದು. ಜಿಲ್ಲೆಯಲ್ಲಿ ನಡೆಯುವ ಉದ್ಯೋಗ ಮೇಳದಲ್ಲಿ 152 ಕಂಪನಿಯ ಉದ್ಯೋಗದಾತರು ಈವರೆಗೆ ನೋಂದಣಿಯಾಗಿದ್ದು,.ಜಿಲ್ಲೆಯೂ ಸೇರಿದಂತೆ ರಾಜ್ಯದಾದ್ಯಂತ 9609 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ನಗರದಲ್ಲಿ ನಡೆಯುವ ಉದ್ಯೋಗ ಮೇಳಕ್ಕೆ ಅಭ್ಯರ್ಥಿಗಳು ಮುಂಚಿತವಾಗಿ ಹೆಸರನ್ನು  ನೋಂದಾಯಿಸಿಕೊಳ್ಳಲು ಮನವಿ ಮಾಡಿಕೊಂಡ ಅವರು,ಮೇಳದಲ್ಲಿ ಭಾಗವಹಿಸಲು ನೋಂದಣಿ ಉಚಿತವಾಗಿದೆ ಎಂದರು. ನೋಂದಾಯಿಸಿಕೊಂಡ  ಅಭ್ಯರ್ಥಿಗಳು ಮೇಳದ ದಿನ ಅನುಕೂಲವಾಗುವಂತೆ ಬೇರೆ-ಬೇರೆ ಕೌಂಟರ್ ತೆರೆದು ಮಾಹಿತಿ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 

  ಈ ಉದ್ಯೋಗ ಮೇಳದಲ್ಲಿ ಕಂಪನಿಗಳು ಸ್ಥಳದಲ್ಲಿಯೇ ಪ್ರಾಥಮಿಕ ಸಂದರ್ಶನ ನಡೆಸುವರು.ಉದ್ಯೋಗಾಕಾಂಕ್ಷಿಗಳಿಗೆ ವೃತ್ತಿ ಆಯ್ಕೆ,ತರಬೇತಿಗಳು ಅರಿವು  ದೊರೆಯುತ್ತದೆ.ಸಂಪರ್ಕ ಮತ್ತು ಸಹಭಾಗಿತ್ವದ ಅವಕಾಶ ಪ್ರಾಜೆಕ್ಟ್‌ ಮ್ಯಾನೇಜರ್‌ಗಳ ಮತ್ತು ತಂತ್ರಜ್ಞಾನ ತಜ್ಞರೊಂದಿಗೆ ನೇರ ಸಂಪರ್ಕ ಸಾಧಿಸಬಹುದು.ಅಭ್ಯರ್ಥಿಗಳು ಯಾವ ತಂತ್ರಜ್ಞಾನ ಕೌಶಲ್ಯಗಳಿಗೆ ಹೆಚ್ಚು ಬೇಡಿಕೆ ಇದೆ ಎಂಬುದನ್ನು ತಿಳಿದು ತಮ್ಮ ಆಸಕ್ತಿ ಕ್ಷೇತ್ರ  ಆರಿಸಿಕೊಳ್ಳಬಹುದು. ಯಾವ ಕೌಶಲ್ಯಗಳು ಬೇಡಿಕೆಯಲ್ಲಿ ಇವೆ ಎಂಬುದನ್ನು ತಿಳಿದುಕೊಂಡು, ತಮ್ಮ ಕೌಶಲ್ಯವನ್ನು ಅದಕ್ಕೆ ಅನುಗುಣವಾಗಿ ಬೆಳೆಸಿಕೊಳ್ಳುವ ಅವಕಾಶ, ವಿವಿಧ ಉದ್ಯಮಗಳು ಮತ್ತು ಕಂಪನಿ,ಆ ಕಂಪನಿಯ ಬೇಡಿಕೆಯ ಕೆಲಸ ಮತ್ತು ನೀರೀಕ್ಷೆ ಬಗ್ಗೆ ತಿಳಿದುಕೊಳ್ಳುವ ಅವಕಾಶ, ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಎರಡೂ ಕೆಲಸದ ಮಾರುಕಟ್ಟೆಯ ಹೊಸ ಧೋರಣೆಗಳನ್ನು ತಿಳಿದುಕೊಳ್ಳಲು ಇದೊಂದು ಸದಾವಕಾಶ ಒದಗಿಸಿದೆ. 

ಉದ್ಯೋಗ ಮೇಳದ ಕಾರ್ಯಕ್ರಮದಲ್ಲಿ ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆಯ ಸದಸ್ಯರಾದ   ಆರತಿ ಶಹಪೂರ, ಪಾಲಿಕೆಯ ಆಯುಕ್ತರಾದ ವಿಜಯ ಮೆಕ್ಕಳಕಿ, ಜಿಲ್ಲಾ ಪಂಚಾಯಿತಿಯ ಕಾರ್ಯದರ್ಶಿಗಳಾದ ಪ್ರಕಾಶ್ ವಡ್ಡರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದೀನ್ ಸೌದಾಗರ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮಹೇಶ್  ಮಾಳ್ವಲ್ಕರ್ ಬಾಗಲಕೋಟೆ  ಜಿಲ್ಲಾ ಕೌಶಲ್ಯಾಧಿಕಾರಿ ಗುರುಪಾದಯ್ಯ ಹಿರೇಮಠ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸಿ ಕೆ ಹೊಸಮನಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.