ಮಹಾನ್ ಸಂತರ ವಿಚಾರ ಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜಯಂತಿ ಸಾರ್ಥಕ

ಮಹಾನ್ ಸಂತರ ವಿಚಾರ ಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜಯಂತಿ ಸಾರ್ಥಕ Jayanti is meaningful when the thoughts of great saints are implemented in life

                 ಮುದ್ದೇಬಿಹಾಳ 14: ಶರಣ, ಸಂತರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸದೇ ಸರ್ವರೂ ಗೌರವಿಸುವಂತಾಗಬೇಕು ಇಂತಹ ಮಹಾನ್ ವ್ಯಕ್ತಿಗಳ ವಿಚಾರ ಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿಗಳ ಆಚರಣೆ ಸಾರ್ಥಕವಾಗುತ್ತದೆ. ಜಾತೀಯತೆ, ಅಸಮಾನತೆ, ಮೌಢ್ಯ ತೊಡೆದು ಹಾಕುವ ನಿಟ್ಟಿನಲ್ಲಿ ವಚನಕಾರರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಶಿಲ್ದಾರ ಕೀರ್ತಿ ಚಾಲಕ ಅವರು ಹೇಳಿದರು.ಪಟ್ಟಣದ ತಾಲೂಕಾ ಆಡಳಿತಭವನದ ತಹಶಿಲ್ದಾರ ಕಾರ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

                 ಈಸಮಾಜದಲ್ಲಿನ ಅಸಮತೋಲನ ಹಾಗೂಅಂಕುಡೊಂಕುಗಳನ್ನು ತಿದ್ದುವ ಮೂಲಕ ಸಮ ಸಮಾಜ ನಿರ್ಮಾಣದ ಗುರಿಯೊಂದಿಗೆ ಸಾವಿರಾರು ವಚನಗಳನ್ನು ರಚಿಸಿ ಅನಿಷ್ಠಪದ್ದತಿಗಳನ್ನು ತೊಲಗಿಸಲು ಪ್ರಯತ್ನಿಸಿದ ಮಹಾನ ಶರಣರು ಎಂದರು.ಈ ವೇಳೆ ಆಯ ಬಿ ಹಿರೇಮಠ ಅವರು ವಿಶೇಷವಾಗಿ ಉಪನ್ಯಾಸ ನೀಡಿದ ಅವರು ಶಿವಯೋಗಿ ಸಿದ್ಧರಾಮೇಶ್ವರರು 68 ಸಾವಿರ ವಚನಗಳನ್ನು ರಚಿಸಿ ಹಾಡಿದ್ದಾರೆ. ಅವುಗಳ ಪೈಕಿ ಈಗ 1,679 ವಚನಗಳು ಮಾತ್ರ ಲಭಿಸಿವೆ. ಬಸವಣ್ಣ ಹಾಗೂ ಸಿದ್ದರಾಮೇಶ್ವರ ಶಿವಯೋಗಿಗಳು ಶ್ರೇಷ್ಠ ವಚನಕಾರರಾಗಿದ್ದಾರೆ. ಬಸವಣ್ಣ ರಾಜಕೀಯ ಮತ್ತು ಸಾಮಾಜಿಕವಾಗಿ ಹೆಚ್ಚು ಒತ್ತು ಕೊಡುತ್ತಿದ್ದರು.

               ಸಿದ್ದರಾಮೇಶ್ವರರು ಸಮಾಜ ಸೇವೆಯಲ್ಲಿ ತೃಪ್ತಿ ಪಡೆಯುತ್ತಿದ್ದರು. ಅಧ್ಯಾತ್ಮ ಪರಂಪರೆ ಹೊಂದಿರುವ ದೇಶದಲ್ಲಿ ದಿವ್ಯಜ್ಞಾನಿಗಳನ್ನು ಮುಂದಿನ ಜನಾಂಗಕ್ಕೆ ಪರಿಚಯಿಸಲು ಅವರ ಚಿಂತನೆಗಳನ್ನು ಅನುಷ್ಠಾನಕ್ಕೆ ತರಬೇಕಿದೆ.ಮಾತನಾಡಿದರು 12ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಗಮನಾರ್ಹವಾದುದು. ಅವರು ಅಸಮಾನತೆ, ವರ್ಣ, ಜಾತಿ, ಲಿಂಗಭೇದವನ್ನು ತೊಡೆದು ಹಾಕುವ ಕೆಲಸವನ್ನು ವಚನಗಳ ಮೂಲಕ ಮಾಡಿದವರು. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಮೂರನೇ ಅಧ್ಯಕ್ಷರಾಗಿ ಅವರು ಸಮಾಜದಲ್ಲಿ ಕೆಲಸ ಮಾಡಿದ್ದಾರೆ ಎಂದರು. ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ ಸಾವಳಗಿ ಅವರು ಮಾತನಾಡಿ ಸಿದ್ದರಾಮೇಶ್ವರರು ಉತ್ತಮ ಸಾಹಿತಿಯಾಗಿದ್ದರು.

               ಅವರು ರಚಿಸಿರುವ 1992 ವಚನಗಳು ಇಂದು ಲಭ್ಯವಿವೆ. ಅವರು ವಿಧವಾ ವಿವಾಹ, ಶಿಕ್ಷಣ, ಕೆರೆ ಕಟ್ಟೆ ನಿರ್ಮಾಣ, ಜಾತೀಯತೆ ತೊಡೆದು ಹಾಕಲು ಶ್ರಮಿಸಿದರು. ವಚನಗಳ ಪುಟ್ಟ ಪುಸ್ತಕವನ್ನು ಸಾರ್ವಜನಿಕರಿಗೆ ತಲುಪಿಸುವ ವ್ಯವಸ್ಥೆ ಮಾಡಿದರು ಜನರಿಗೆ ವಚನಕಾರರ ಆಶಯ ತಿಳಿಯುವ ಜತೆಗೆ ಸ್ವಸ್ಥ ಸಮಾಜ ನಿರ್ಮಾಣ ಆಗಲು ಸಾಧ್ಯವಾಗುತ್ತದೆ ಎಂದರು.ತಹಶಿಲ್ದಾರ ಕೀರ್ತಿ ಚಾಲಕ ಅವರು ಶಿವಯೋಗಿ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಿಹಿ ಹಂಚಲಾಯಿತು. ಪುಷ್ಪ ನಮನ ಸಲ್ಲಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮುನ್ನ ಜಯಂತ್ಯುತ್ಸವದ ಪ್ರಯುಕ್ತ ಶಿವಯೋಗಿ ಸಿದ್ದರಾಮೇಶ್ವರ ಭಾವಚಿತ್ರ ಮೆರವಣಿಗೆಯು ಪಟ್ಟಣದ  ನೇತಾಜಿ ನಗರ ಬಡಾವಣೆಯ ಜಾಲಿಕಟ್ಟಿ ದುರ್ಗಮ್ಮ ದೇವಸ್ಥಾನದಿಂದ ಪ್ರಾರಂಭಗೊಂಡು ಬಸವೇಶ್ವರ ವೃತ್ತ,

               ಕಿತ್ತೂರು ರಾಣಿ ಚನ್ಮಮ್ಮ ವೃತ್ತದ ಮೂಲಕ ತಾಲೂಕಾ ಆಡಳಿತ ಭವನಕ್ಕೆ ತಲುಪಿತು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಬಾಗವಹಿಸಿದ್ದವು. ಈ ವೇಳೆ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೇಯಲ್ಲಿ ಅತಿಹೆಚ್ಚು ಅಂಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ತಾಲೂಕಾ ಆಡಳಿತದಿಂದ ಸನ್ಮಾನಿಸಿ ಗೌರವಿಸಲಾಯಿತು.ಈ ವೇಳೆ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ, ತಾಲೂಕಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗಳಾದ ಶ್ರೀಮತಿ ಬಸಂತಿ ಮಠ, ಹಿಂದುಳಿದ ಕಲ್ಯಾಣ ಇಲಾಖೆಯ, ಮುಖಂಡರಾದಭೋವಿ ಸಮಾಜದ  ಅಶೋಕ ಇರಕಲ್ಲ, ಪರುಶುರಾಮ ನಾಲತವಾಡ, ರವಿಚಂದ್ರ ಹಡಲಗೇರಿ, ಪಂಡೀತ ಇರಕಲ್ಲ, ದಲಿತ ಸಮಾಜದ ಮುಂಡರಾದ ಹರೀಷ ನಾಟಿಕಾರ, ಸಿ ಜಿ ವಿಜಯಕರ ಹಲವು ಇದ್ದರು.