ಸಾಲಿದುರಗಮ್ಮ ಹಾಗೂ ಮಾತಂಗೆಮ್ಮ ದೇವತೆಗಳ ಜಾತ್ರಾ ಮಹೋತ್ಸವ
Jatra Mahotsava of Saliduragamma and Matangemma deities
ಸಾಲಿದುರಗಮ್ಮ ಹಾಗೂ ಮಾತಂಗೆಮ್ಮ ದೇವತೆಗಳ ಜಾತ್ರಾ ಮಹೋತ್ಸವ
ಸವಣೂರ 28: ತಾಲ್ಲೂಕಿನ ಹಿರೇಮುಗದೂರ ಗ್ರಾಮದ ಸಾಲಿದುರಗಮ್ಮ ಹಾಗೂ ಮಾತಂಗೆಮ್ಮ ದೇವತೆಗಳ ಜಾತ್ರಾ ಮಹೋತ್ಸವ ಡಿ,30 ರಿಂದ ಜ-3ರ ವರೆಗೆ ಅದ್ದೂರಿಯಾಗಿ ಜರುಗಲಿದೆ.ಡಿ,30 ರಂದು ಸೋಮವಾರ ಬೆಳಿಗ್ಗೆ 6 ಘಂಟೆಗೆ ವರದಾ ನದಿಯ ಶ್ರೀ ದುರ್ಗಾದೇವಿ ದೇವಸ್ಥಾನದಿಂದ ತುಂಬಿದ ಕಳಸದೊಂದಿಗೆ ಹಾಗೂ 101 ಕುಂಭ ಮೇಳದೊಂದಿಗೆ ಬಡಗೇರ ಮನೆಯಿಂದ ಶ್ರೀ ಚಂದ್ರಮುಖಿ ಮಹಿಳಾ ಡೊಳ್ಳು ಕಲಾ ತಂಡ ಕೊಣ್ಣೂರ ಹಾಗೂ ರಮದೋತ ನಾಸಿಕ ಡೋಲ್ ಗುತ್ತಲ ವಾಧ್ಯಮೇಳದೊಂದಿಗೆ ಶ್ರೀ ದೇವಿಯನ್ನು ದೇವಸ್ಥಾನಕ್ಕೆ ಬರಮಾಡಿಕೊಳ್ಳುವುದು.ಸಾಯಂಕಾಲ 5 ಘಂಟೆಗೆ ಕುಂಭಾಬಿಷೇಕ ಶ್ರೀ ದುರ್ಗಾಹೋಮ ಮತ್ತು ನವಗ್ರಹಶಾಂತಿ ಪೂಜೆ ನೇರವೇರುವುದು.ಡಿ,31 ರಂದು ಮಂಗಳವಾರ ಬೆಳಿಗ್ಗೆ 5-30 ಘಂಟೆಗೆ ರುದ್ರಾಭಿಷೇಕ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಹಾಗೂ ಉಡಿ ತುಂಬುವುದು.
ಮಧ್ಯಾಹ್ನ 11-30 ಘಂಟೆಗೆ ಧರ್ಮಸಭೆ ನಂತರ ಅನ್ನಪ್ರಸಾದ. ರಾತ್ರಿ 8-30 ರಿಂದ ಸಿಡಿಮದ್ದುಗಳ ಪ್ರದರ್ಶನ ಮತ್ತು ನೃತ್ಯದೊಂದಿಗೆ ಶೃಂಗರಿಸಿದ ಮಂಟಪದಲ್ಲಿ ಶ್ರೀದೇವಿಯ ಉತ್ಸವವು ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಬೆಳಿಗ್ಗೆ ತಲುಪುವುದು.ಜ.01 ರಂದು ಬುಧವಾರ ಬೆಳಿಗ್ಗೆ ನೈವಿಧ್ಯ ಹಣ್ಣು-ಕಾಯಿ ಮತ್ತು ಯಡೆ ಕೊಡುವುದು.ಸಾಯಂಕಾಲ 6-30ಕ್ಕೆ ರುದ್ರಾಭಿಷೇಕ ಮಹಾಪೂಜೆ ಜರುಗುವುದು.ಜ-02 ರಂದು ಗುರುವಾರ ಬೆಳಿಗ್ಗೆ 6-30 ರಿಂದ ರುದ್ರಾಭಿಷೇಕ ಮತ್ತು ಮಹಾಪೂಜೆ.ರಾತ್ರಿ 8-30 ಘಂಟೆಗೆ ರಸಮಂಜರಿ ಕಾರ್ಯಕ್ರಮ ಜರುಗುವವು.ಜ-03 ರಂದು ಶುಕ್ರವಾರ ಬೆಳಿಗ್ಗೆ 6-30 ರಿಂದ ರುದ್ರಾಭಿಷೇಕ ಮತ್ತು ಉಡಿ ತುಂಬವ ಕಾರ್ಯಕ್ರಮ ಮತ್ತು ಮಹಾಮಂಗಳಾರತಿ.ರಾತ್ರಿ 9-30 ಕ್ಕೆ ಭಾರಿ ಸವಾಲ್ ಜವಾಲ್ ಭಜನಾ ಸ್ಪರ್ಧೆ ಜರುವುದು.ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಊರಿನ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವತೆಗಳ ಆರ್ಶಿವಾದ ಪಡೆದುಕೊಳ್ಳಬೇಕೆಂದು ಸಾಲಿದುರಗಮ್ಮ ಹಾಗೂ ಮಾತಂಗೆಮ್ಮದೇವಿ ಸೇವಾ ಸಮಿತಿ(ರಿ)ಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 