ಇಂದಿರಾ ಕ್ಯಾಂಟಿನ್ ಸದ್ಭಳಕೆ ಮಾಡಿಕೊಳ್ಳುವಂತೆ ಜಾರಕಿಹೊಳಿಯವರ ಸಲಹೆ
Jarkiholi's advice to make good use of Indira Canteen
ಇಂದಿರಾ ಕ್ಯಾಂಟಿನ್ ಸದ್ಭಳಕೆ ಮಾಡಿಕೊಳ್ಳುವಂತೆ ಜಾರಕಿಹೊಳಿಯವರ ಸಲಹೆ
ಮೂಡಲಗಿ 29: ಕೂಲಿ- ಕಾರ್ಮಿಕರು ಹಾಗೂ ಬಡ ಕುಟುಂಬಗಳ ಅನುಕೂಲಕ್ಕಾಗಿ ಸರ್ಕಾರವು ಅತೀ ಕಡಿಮೆ ದರದಲ್ಲಿ ಉಪಹಾರ ಮತ್ತು ಊಟದ ಸೌಲಭ್ಯಗಳುಳ್ಳ ಇಂದಿರಾ ಕ್ಯಾಂಟಿನ್ ತೆರೆದಿದ್ದು, ಇದನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.ತಾಲ್ಲೂಕಿನ ಅರಭಾವಿ ಪಟ್ಟಣದಲ್ಲಿ ಇಚೆಗೆ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿ ಮಾತನಾಡಿದ ಅವರು, ತಮಿಳುನಾಡಿನ ಮಾದರಿಯಲ್ಲಿ ನಮ್ಮ ಕರ್ನಾಟಕದಲ್ಲೂ ಕಡಿಮೆ ಹಣದಲ್ಲಿ ತಿಂಡಿ- ತಿನಿಸುಗಳು ಈ ಕ್ಯಾಂಟಿನ್ ದಲ್ಲಿ ಸಿಗಲಿವೆ ಎಂದು ತಿಳಿಸಿದರುಈಗಾಗಲೇ ಮೂಡಲಗಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್ ತೆರೆಯಲಾಗಿದ್ದು, ಅರಭಾವಿ ಮತ್ತು ಕಲ್ಲೊಳ್ಳಿ ಪಟ್ಟಣಗಳಲ್ಲಿ ಇಂದಿನಿಂದ ಆರಂಭವಾಗಲಿದೆ. ದಿನಗೂಲಿ ನೌಕರರು, ಹಮಾಲರು, ಕಾರ್ಮಿಕರು ಮುಂತಾದವರಿಗೆ ಇದು ಉಪಯುಕ್ತ ಆಗಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಅರಭಾವಿ ಮಠದ ಗುರು ಬಸವಲಿಂಗ ಮಹಾ ಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.ಪಟ್ಟಣ ಪಂಚಾಯತಿ ಅಧ್ಯೆಕ್ಷೆ ರೇಣುಕಾ ಮಾದರ, ಉಪಾಧ್ಯಕ್ಷೆರಾಜಶ್ರೀ ಗಂಗನ್ನವರ, ವೇ.ಮೂ.ಶಿವಯ್ಯ ಹಿರೇಮಠ, ಮೂಡಲಗಿ ತಹಶೀಲ್ದಾರ ಶ್ರೀಶೈಲ ಗುಡುಮೆ, ಯೋಜನಾ ನಿರ್ದೇಶಕ ಮಲ್ಲಿರ್ಕಾಜುನ ಕಲಾದಗಿ, ಕಾರ್ಯಕಾರಿ ಅಭಿಯಂತರ ತಡಲಸಲೂರ, ಮಹಾವೀರ ಹುದ್ದಾರ, ಮುಖ್ಯಾಧಿಕಾರಿ ವಿನಾಯಕ ಬಬಲೇಶ್ವರ, ಸದಸ್ಯರಾದ ಸುರೇಶ ದೊಡ್ಡಲಿಂಗನವರ, ಹನಮಂತ ಕಂದಾರಿ, ಬಸವರಾಜ ಜೋಕ್ಕಾನಟ್ಟಿ ಸತ್ಯೇಪ್ಪ ಮೇಳವಂಕಿ ,ನಿಂಗಪ್ಪ ಇಳಗೇರ ,ಅಡಿವೆಪ್ಪ ಬೀಲಕುಂದಿ ,ಕೆಂಚಪ್ಪ ಮಂಟುರ, ಹಿರಿಯರಾದ ಮುತ್ತಪ್ಪ ಜಲ್ಲಿ, ಬಸವರಾಜ ಮಾಳೇದವರ, ಭೀಮಶಿ ಮಾಳೇದವರ, ರವಿ ಬೂಲೇಶ್ವರ ,ಅಪ್ಪಯ್ಯ ಗಂಗ್ನನವರ ,ಬಾಳೇಶ ನಾನಾಪ್ಪಗೋಳ ರಮೇಶ ಸಂಪಗಾವಿ,ರವಿ ಹುಕ್ಕಿ ,ಮಾಯಪ್ಪ ಬೇನಚಣಮರಡಿ ,ರಮೇಶ ಮಾದರ, ಕೃಷ್ಣಾ ಬಂಡಿವಡ್ಡರ, ಮೋಹನ ಬಂಡಿವಡ್ಡರ, ಹನಮಂತ ಚಿಪ್ಪಲಕಟ್ಟಿ, ಅರಭಾವಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಅನೇಕ ಮುಖಂಡರು ಉಪಸ್ಥಿತರಿದ್ದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 