ಜ. 25ರಂದು ಚನ್ನವೀರ ಶರಣರ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವ
Jan. 25th Channaveera Sharan's commemoration and fair festival
ಗದಗ 21: ಮೌನಯೋಗಿ ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ 31 ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವ ಇದೇ ಜ.16 ರಿಂದ ಜ. 26 ರ ವರೆಗೆ ಜರುಗಲಿದೆ. ಜ. 25 ರಂದು ಸಂಜೆ 5 ಗಂಟೆಗೆ ಮಹಾರಥೋತ್ಸವ ಜರುಗುವದು ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ಮಹಾತ್ಮರ ಜೀವನ ದರ್ಶನ ಪ್ರವಚನ, ಮಹಾರಥೋತ್ಸವ, ಲಘು ರಥೋತ್ಸವ, ಜಾನಪದ ಕಲಾಮೇಳ, ಸಾಮೂಹಿಕ ವಿವಾಹಗಳು, ಸುಮಂಗಲೆಯರಿಗೆ ಉಡಿ ತುಂಬುವದು, ತುಲಾಬಾರ, ಧಾರ್ಮಿಕ ಚಿಂತನಾಗೋಷ್ಠಿ ಹಾಗೂ ಶರಣಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸುಕ್ಷೇತ್ರ ಬಳಗಾನೂರಿನ ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ ಮಠದ ಪೂಜ್ಯಶ್ರೀ ಶಿವಶಾಂತವೀರ ಶರಣರು ಹೇಳಿದರು.
ಜ.26 ರಂದು ಸಂಜೆ 5 ಗಂಟೆಗೆ ಕಡುಬಿನ ಕಾಳಗ ಹಾಗ ಶರಣರ ಬೆಳ್ಳಿಮೂರ್ತಿ ಉತ್ಸವ ಜರುಗುವದು. ಸುಕ್ಷೇತ್ರ ಬಳಗಾನೂರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಚನ್ನವೀರ ಶರಣರ ಬೆಳ್ಳಿಮೂರ್ತಿ ಉತ್ಸವ ಜರುಗುವದು. ನಂತರ ಶ್ರೀಮಠದಲ್ಲಿ ಕಡುಬಿನ ಕಾಳಗ ಜರುಗುವದು.ಸಂಜೆ 6 ಗಂಟೆಗೆ ಬೆಂಗಳೂರಿನ ಸರಿಗಮಪ ಎಂಟಟ್ರೇನರ್ಸ ನ ಗಾಯಕರಾದ ಡಾ.ಶ್ರೀರಾಮ ಕಾಸರ್ ಮತ್ತು ತಂಡದವರಿಂದ ರಸಮಂಜರಿ ಹಾಗೂ ಚಲನಚಿತ್ರ ನಟರಾದ ಪ್ರವೀಣ ಗಸ್ತಿ ಮತ್ತು ಕಾಮಿಡಿ ಕಿಲಾಡಿಗಳಿಂದ ಹಾಸ್ಯ ಸಂಜೆ ಜರುಗುವದು.
ರಾತ್ರಿ 9 ಗಂಟೆಗೆ ಸಿಡಿಮದ್ದು ಸುಡುವ ಆಕರ್ಷಣಿಯ ಕಾರ್ಯಕ್ರಮ ಜರಗುವುದು ರಾತ್ರಿ 10 ಗಂಟೆಗೆ ಬಳ್ಳಾರಿಯ ಅಭಿನಯ ಕಲಾಕೇಂದ್ರ ಅವರಿಂದ ಅಲ್ಲಿಪುರದ ಮಹಾದೇವ ತಾತನವರ ಭಕ್ತಿ ಪ್ರಧಾನವಾದ ನಾಟಕ ಪ್ರದರ್ಶನವಾಗಲಿದೆ ಎಂದು ಪೂಜ್ಯಶ್ರೀಗಳು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎ.ಎನ್.ನಾಗರಳ್ಳಿ, ವಿ.ಬಿ.ಪೊಲೀಸಪಾಟೀಲ, ಎಂ.ಬಿ.ಸಿಕ್ಕೆದೇಸಾಯಿ, ವಿ.ಎಸ್.ಹಿರೇಮಠ, ಎಸ್.ಬಿ.ಪಾಟೀಲ, ಎಸ್.ಎಸ್.ಪಾಟೀಲ,ಶಿವಲಿಂಗಯ್ಯ ಶಾಸ್ತ್ರಿಗಳು ಹಿರೇಮಠ ಸಿದ್ದಾಪೂರ, ವಸಂತಮೇಟಿ, ಶೇಖಣ್ಣ ಗದ್ದಿಕೇರಿ, ಮನ್ನಾಪೂರ, ಗೌರಿಪೂರ, ವೈ.ಬಿ.ಡೊಳ್ಳಿನ, ಎಚ್.ಎಸ್.ವೆಂಕಟಾಪೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 