ಜಮ್ಮಾ ಜಮ್ಮಾ ಫೌಂಡೇಶನ್: ವರುಷಕ್ಕೆ ನೂರು ಪ್ರಯೋಗಗಳು ಸ್ಪರ್ಧೆ ಶಿಕ್ಷಕ ಎಸ್ ಡಿ ಕುಸಲಾಪೂರಗೆ ಪ್ರಶಸ್ತಿ
Jamma Jamma Foundation: One Hundred Experiments per Year Competition Award for Teacher S. D. Kusala
ಸವದತ್ತಿ 23:ಬೆಳಗಾವಿ ಜಿಲ್ಲೆ, ಸವದತ್ತಿ ತಾಲೂಕಿನ ಹಿರೇಬೂದನೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕರಾದ ಶಿದ್ರಾಮಗೌಡ ಕುಸಲಾಪೂರ ಅವರು ಜಮ್ಮಾ ಜಮ್ಮಾ ಫೌಂಡೇಶನ್ ಅಮೇರಿಕಾ ವತಿಯಿಂದ ವಿಜ್ಞಾನ ಶಿಕ್ಷಕರಿಗಾಗಿ ಆಯೋಜಿಸಲಾದ “ವರುಷಕ್ಕೆ ನೂರು ಪ್ರಯೋಗಗಳು” ಎಂಬ ವಿಶಿಷ್ಟ ಸ್ಪರ್ಧೆಯಲ್ಲಿ ಅಪೂರ್ವ ಸಾಧನೆ ಮಾಡುವ ಮೂಲಕ ಆದರ್ಶ ವಿಜ್ಞಾನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಸ್ಪರ್ಧೆಯಲ್ಲಿ ವರ್ಷಪೂರ್ತಿ ನೂರು ವಿಜ್ಞಾನ ಪ್ರಯೋಗಗಳನ್ನು ಯಶಸ್ವಿಯಾಗಿ ವಿದ್ಯಾರ್ಥಿಗಳೊಂದಿಗೆ ನಡೆಸಿ, ದಾಖಲೆ ರೂಪದಲ್ಲಿ ಮಂಡಿಸುವ ಸವಾಲು ಇತ್ತು. ವಿವಿಧ ಭಾಗಗಳಿಂದ ಅನೇಕ ವಿಜ್ಞಾನ ಶಿಕ್ಷಕರು ಭಾಗವಹಿಸಿದ್ದರೂ, ಶಿದ್ರಾಮಗೌಡ ಕುಸಲಾಪೂರ ಅವರು ನೂರು ಪ್ರಯೋಗಗಳನ್ನು ಮೊದಲಿಗರಾಗಿ ಪೂರ್ಣಗೊಳಿಸಿ ವಿಶೇಷ ಗೌರವಕ್ಕೆ ಪಾತ್ರರಾದರು. ಇವರೊಂದಿಗೆ ಪ್ರಯೋಗಗಳನ್ನು ಪೂರ್ಣಗೊಳಿಸಿದ ಮೊದಲ ಹತ್ತು ಶಿಕ್ಷಕರನ್ನು ಹಿರೇಬಾಗೆವಾಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.ಅವರ ಈ ಸಾಧನೆ ಪ್ರಯೋಗಾಧಾರಿತ ಕಲಿಕೆಗೆ ಹೊಸ ಆಯಾಮ ನೀಡಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ಆಸಕ್ತಿದಾಯಕ ಹಾಗೂ ಅನುಭವಾತ್ಮಕವಾಗಿ ಕಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸರಕಾರಿ ಶಾಲೆಯಲ್ಲಿಯೇ ಸೀಮಿತ ಸೌಲಭ್ಯಗಳ ನಡುವೆಯೂ ಉತ್ಸಾಹ, ನಿಷ್ಠೆ ಮತ್ತು ನವೀನ ಬೋಧನಾ ವಿಧಾನಗಳ ಮೂಲಕ ಈ ಸಾಧನೆ ಮಾಡಿದ್ದಾರೆ ಎಂಬುದು ಶ್ಲಾಘನೀಯ.
ಈ ಮಹತ್ವದ ಸಾಧನೆಗಾಗಿ ಶಾಲೆಯ ಮುಖ್ಯೋಪಾಧ್ಯಾಯರು, ಸಹಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಶಿದ್ರಾಮಗೌಡ ಕುಸಲಾಪೂರ ಅವರ ಸಾಧನೆ ಇತರ ಶಿಕ್ಷಕರಿಗೂ ಪ್ರೇರಣೆಯಾಗಿದ್ದು, ವಿಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಉತ್ಸಾಹವನ್ನು ಮೂಡಿಸಿದೆ. ಜಮ್ಮಾ ಜಮ್ಮಾ ಫೌಂಡೇಶನ್ (ಎಎಈ) ಒಂದು ನೋಂದಾಯಿತ ಲಾಭರಹಿತ ಸಂಸ್ಥೆಯಾಗಿದೆ. ಅಪ್ಪಣ್ಣಗೌಡ ಪಾಟೀಲ ಎಂಬ ಅನಿವಾಸಿ ಭಾರತೀಯರು ಇದರ ಸಂಸ್ಥಾಪಕರಾಗಿದ್ದಾರೆ. ಭಾರತದ ಗ್ರಾಮೀಣ ಶಾಲೆಗಳಲ್ಲಿ ವಿಜ್ಞಾನ ಶಿಕ್ಷಣವನ್ನು ಉತ್ತೇಜಿಸಲು ಸದರಿ ಸಂಸ್ಥೆ ಸಹಾಯ ಮಾಡುತ್ತಿದೆ. 2015 ರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಬಾಲ್ಯದ ಶಿಕ್ಷಣಕ್ಕೆ ಸಹಾಯ ಮಾಡಿದೆ. 2005 ರಲ್ಲಿ ಜಮ್ಮಾ ಜಮ್ಮಾ ಫೌಂಡೇಶನ್ (ಎಎಈ) ಎಂಬ ದತ್ತಿ ಸಂಸ್ಥೆಯನ್ನು ರಚಿಸಿ, ಅಂದಿನಿಂದ ಸುಮಾರು 65 ಕ್ಕೂ ಹೆಚ್ಚು ಶಾಲೆಗಳಿಗೆ ವಿಜ್ಞಾನ ಪ್ರಯೋಗಕ್ಕೆ ಪೂರಕವಾದ ಸಾಮಗ್ರಿಗಳನ್ನು ಒದಗಿಸುವ ಮೂಲಕ ಸಕಾರಾತ್ಮಕ ಬದಲಾವಣೆಗೆ ಪ್ರಯತ್ಮಿಸುತ್ತಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 