ಜಮಖಂಡಿ ತುಬಚಿ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ
Jamkhandi Tubachi Shivalingeshwara Fair Festival
ಜಮಖಂಡಿ 22: ತಾಲೂಕಿನ ತುಬಚಿ ಶಿವಲಿಂಗೇಶ್ವರ ಮಠದ ಆವರಣದಲ್ಲಿ ಡಾ, ಅಲ್ಲಮಪ್ರಭು ಶ್ರೀಗಳು ದಿವ್ಯ ಸಾನ್ನಿಧ್ಯದಲ್ಲಿ ಮಠದ ನೂತನ ಶಿಲಾಮಂಟಪ ಹಾಗೂ ಗುರುಭವನ ಉದ್ಘಾಟನೆ ಮತ್ತು ಮಾ 20.ರಿಂದ ಏ,3 ರವರೆಗೆ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯು ಜರುಗಿತು.
ಮಠಗಳು ಕೇವಲ ಕಲ್ಲು,ಮಣ್ಣಿನ ಕಟ್ಟಡವಲ್ಲ, ಅದು ಭಕ್ತಿ ಮತ್ತು ಸಂಸ್ಕಾರದ ಕೇಂದ್ರವಾಗಿದೆ. ನೂತನವಾಗಿ ನಿರ್ಮಿಸಲಾದ ಶಿಲಾಮಂಟಪ ಹಾಗೂ ಗುರುಭವನ ಕಟ್ಟಡವು ಲೋಕಾರೆ್ಣಯಾಗುತ್ತಿರುವುದು ಡಾ.ಅಲ್ಲಮಪ್ರಭು ಮಹಾಸ್ವಾಮಿಗಳ ಶ್ರಮ ಹಾಗೂ ಭಕ್ತರೆಲ್ಲರ ಸಹಕಾರ ಫಲವಾಗಿದೆ ಎಂದು ಶೇಗುಣಸಿಯ ಮಹಾಂತ ಶ್ರೀಗಳು ಹೇಳಿದರು. ಜಾತ್ರಾ ಮಹೋತ್ಸವವು ಗ್ರಾಮದ ಐಕ್ಯತೆ ಮತ್ತು ಸೌಹಾರ್ದತೆಯ ಪ್ರತೀಕ.
ಭಕ್ತರೆಲ್ಲರೂ ಒಗ್ಗೂಡಿ ಈ ಧಾರ್ಮಿಕ ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ ಮತ್ತು ಶ್ರದ್ಧಾಭಕ್ತಿಯಿಂದ ನೆರವೇರಿಸಬೇಕು. ಜಾತ್ರಾ ಮಹೋತ್ಸವ ರಥೋತ್ಸವ, ಪಲ್ಲಕ್ಕಿ ಸೇವೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ರೂಪುರೇಷೆ ಸಿದ್ಧಪಡಿಸುವುದು.ದಾಸೋಹ ವ್ಯವಸ್ಥೆ ಆಗಮಿಸುವ ಭಕ್ತಾದಿಗಳಿಗೆ ಪ್ರಸಾದ ನಿಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಡಾ, ಅಲ್ಲಮಪ್ರಭು ಶ್ರೀಗಳು ಹೇಳಿದರು
ಫೋಟೋ : ಜಮಖಂಡಿ ತಾಲೂಕಿನ ತುಬಚಿ ಗ್ರಾಮದ ಶಿವಲಿಂಗೇಶ್ವರ ಮಠದ ನೂತನ ಶಿಲಾಮಂಟಪ ಹಾಗೂ ಗುರುಭವನ ಉದ್ಘಾಟನೆ ಮತ್ತು ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಡಾ, ಅಲ್ಲಮಪ್ರಭು ಶ್ರೀಗಳು ಹಾಗೂ ಮಹಾಂತ ಶ್ರೀಗಳಿಗೆ ಸನ್ಮಾನಿಸಲಾಯಿತು,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 