ಜೈ ಬಾಪು ಜೈ ಭೀಮ್ ಜೈ ಸಂವಿಧಾನ ಕಾರ್ಯಕ್ರಮ ಯಶಸ್ವಿಗೊಳಿಸಿ : ಮಣ್ಣಣ್ಣವರ

Jai Bapu Jai Bheem Jai Make the constitution program a success: Mannannavara

ಜೈ ಬಾಪು ಜೈ ಭೀಮ್ ಜೈ ಸಂವಿಧಾನ ಕಾರ್ಯಕ್ರಮ ಯಶಸ್ವಿಗೊಳಿಸಿ : ಮಣ್ಣಣ್ಣವರ      

ಶಿಗ್ಗಾವಿ 20: ದೇಶದಲ್ಲಿ ಐತಿಹಾಸಿಕ ಕಾರ್ಯಕ್ರಮ ಜೈ ಬಾಪು ಜೈ ಭೀಮ್ ಜೈ ಸಂವಿಧಾನ ಕಾರ್ಯಕ್ರಮಕ್ಕೆ ಬನ್ನಿ ಭಾಗವಹಿಸಿ ಯಶಸ್ವಿಗೊಳಿಸಿ ತಾಲೂಕ ಬ್ಲಾಕ್ ಕಾಂಗ್ರೆಸ್ ಸಮಿತಿ ವಕ್ತಾರ ಮಂಜುನಾಥ ಮಣ್ಣಣ್ಣವರ ಹೇಳಿದರು. ಪಟ್ಟಣದ ವರದಿಗಾರರೊಂದಿಗೆಮಾತನಾಡಿದ ಅವರು ಬೆಳಗಾವಿಯಲ್ಲಿ ನಡೆಯುವ ಕಾಂಗ್ರೆಸ್ ಪಕ್ಷದ ವತಿಯಿಂದ ಜರುಗುತ್ತಿರುವ ಐತಿಹಾಸಿಕ ಜೈ ಬಾಪು ಜೈ ಭೀಮ್ ಜೈ ಸಂವಿಧಾನ ಕಾರ್ಯಕ್ರಮ ದೇಶದ ಇತಿಹಾಸ ಪುಟದಲ್ಲಿ ಸೇರುತ್ತಿದ್ದು ಗಾಂಧೀಜಿ ಅವರ ಭಾತೃತ್ವದ ಕನಸಿನ ಭಾರತದ ಅನಾವರಣ ಮಾಡುತ್ತಿದ್ದರು ಈ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷರು ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕ ಗಾಂಧಿ ಸೇರಿದಂತೆ ಕೆಪಿಸಿಸಿ ಅಧ್ಯಕ್ಷ, ಮುಖ್ಯಮಂತ್ರಿ, ಸಚಿವರುಗಳು ಕೆಪಿಸಿಸಿ ಪದಾಧಿಕಾರಿಗಳು ಶಾಸಕರು, ಸಂಸದರು, ಭಾಗವಹಿಸುತ್ತಿದ್ದು ಐತಿಹಾಸಿಕ ಕಾರ್ಯಕ್ರಮವನ್ನು ಗಾಂಧಿವಾದಿಗಳು ಸಂವಿಧಾನ ಗೌರವಿಸುವ ನಾವೆಲ್ಲರೂ ಸ್ವಯಂ ಪ್ರೇರಿತರಾಗಿ ಭಾಗವಹಿಸಿ ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮ ಮೇಲಿದ್ದು ಹೆಚ್ಚಿನ ಜನಸಂಖ್ಯೆಯಲ್ಲಿ ಆಗಮಿಸುವಂತೆ ಕಾಂಗ್ರೆಸ್ ಪರಿವಾರದ ಸದಸ್ಯನಾಗಿ ಪಕ್ಷದ ಕಾರ್ಯಕರ್ತ ಬಂಧುಗಳಿಗೆ ವಿನಂತಿ ಮಾಡಿದ್ದಾರೆ.