ಶೈಕ್ಷಣಿಕ ಸಾಧನೆಗಾಗಿ ಜಗನ್ನಾಥ ಆಲಂಪಲ್ಲಿ, ಮಮ್ತಾಜ್ ಬೇಗಂಗೆ ಪ್ರಶಸ್ತಿ
Jagannath Alampalli, Mumtaz Begum awarded for academic achievement
ಗಂಗಾವತಿ 09: ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಡಿ.28,29 ಹಾಗು 30 ಮೂರು ದಿನಗಳ ಕಾಲ ವೈಜ್ಞಾನಿಕ ಸಮ್ಮೇಳನದಲ್ಲಿ ಶೈಕ್ಷಣಿಕ ಸಾಧನೆಗಾಗಿ ಲಿಟಲ್ ಹಾರ್ಟ್ಸ ಶಾಲೆಯ ಜಗನ್ನಾಥ ಆಲಂಪಲ್ಲಿ ಇವರಿಗೆ ಹೆಚ್.ನರಸಿಂಹಯ್ಯ ಪ್ರಶಸ್ತಿ, ಹಾಗು ಕೊಲ್ಲಿ ಕಾಲೇಜು ಉಪನ್ಯಾಸಕಿ ಮಮ್ತಾಜ್ ಬೇಗಂ ಇವರಿಗೆ ಚೈತನ್ಯ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಪರಿಷತ್ ಕೊಪ್ಪಳ ಜಿಲ್ಲಾಧ್ಯಕ್ಷ ಲಿಂಗರೆಡ್ಡಿ ಆಲೂರು ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ಪ್ರತಿ ವರ್ಷ ರಾಜ್ಯದ ಸುಮಾರು 30ಕ್ಕು ಹೆಚ್ಚು ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು ಈ ಬಾರಿ ಕೊಪ್ಪಳ ಜಿಲ್ಲೆಯ ಶೈಕ್ಷಣಿಕ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ, ಯುವ ಸಮುದಾಯದಲ್ಲಿ ವೈಜ್ಞಾನಿಕತೆ ಬೆಳೆಸುವ ನಿಟ್ಟಿನಲ್ಲಿ ಸುಮಾರು 40 ಸಾವಿರ ಮಕ್ಕಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದು ಸಾಹಿತ್ಯ ಸಮ್ಮೇಳನಾ ಮಾದರಿಯಲ್ಲಿ ಜರುಗಲಿದೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕರ್ನಾಟಕ ಸರಕಾರ, ಮಾನವ ಬಂಧುತ್ವ ವೇದಿಕೆ, ಯಾದಗಿರಿ ಪ್ರಗತಿಪರ ಸಂಘಟನೆಗಳು, ಇಸ್ರೋ ಭಾರತ ಸರಕಾರ ಬೆಂಗಳೂರು ಕರ್ನಾಟಕ, ಜವಾಹರಲಾಲ್ ನೆಹರು ತಾರಾಲಯ ಬೆಂಗಳೂರು, ಭಾರತ ವಾಯುಪಡೆ ಬೆಂಗಳೂರು, ವಿಶ್ವೇಶ್ವರರಯ್ಯ ಕೈಗಾರಿಕಾ ಹಾಗು ಮ್ಯೂಸಿಯಂ ಬೆಂಗಳೂರು, ಮೊಬೈಲ್ ಪ್ಲಾನಿಟೋರಿಯಂ ಕೆ ಸೈಪ್ಸ್ ಹಾಗು ನ್ಯಾಷನಲ್ ಏರೋನಾಟಿಕಲ್ಸ್ ಲ್ಯಾನೋರೋಟರಿ ಡಿ.ಆರ್,ಡಿ.ಓ ಸಹಯೋಗದಲ್ಲಿ ಕಾರ್ಯಕ್ರಮ ಜರುಗಲಿದೆ ಎಂದರು.
ಸಿಎಂ ಸಿದ್ದರಾಮಯ್ಯ ಸಮ್ಮೇಳನಾ ಉದ್ಘಾಟಿಸಲಿದ್ದು, ಪವಾಡ ಬಯಲು ಕಾರ್ಯಕ್ರಮದ ರೋವಾರಿ ಪರಿಷತ್ತಿನ ಅಧ್ಯಕ್ಷ ಹುಲಿಕಲ್ ನಟರಾಜ್, ಜಸ್ಟೀಸ್ ನಾಗಮೋಹನ್ ದಾಸ್, ಡಾ.ಕಿರಣ್ ಕುಮಾರ್, ಕಮಲ್ ಕುಮಾರ್, ಆರತಿ ಚೌದ್ರಿ, ಎಸ್.ಕೆ.ಉಮೇಶ್ ನಿವೃತ್ತ ಅಧೀಕ್ಷಕರು, ವೈಎನ್ ಶಂಕರಗೌಡ ಮೈಸೂರು, ತಿಪಟೂರು ವೈದ್ಯ ಡಾ.ಶ್ರೀಧರ, ಶ್ರೀರಾಮಚಂದ್ರ, ಡಾ.ಓಂಕಾರ್ ನಾಯ್ಡು, ಅನಂತ ನಾಯ್ಕ, ಡಾ.ಲೀಲಾ ಸಿಂಪಿಗೆ, ಭರಮಣ್ಣ ಕೋಳಿ, ಜೀವನ್ ಮಾಂಜ್ರೇಕರ್ ಇತರರು ಪಾಲ್ಗೊಳ್ಳಲಿದ್ದು, ರಾಜ್ಯದ 30 ಜಿಲ್ಲೆಗಳಿಂದ ತಲಾ ಇಬ್ಬರು ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಸಮಾವೇಶದಲ್ಲಿ ಗೌರವಿಸಲಾಗುತ್ತದೆ ಎಂದು ಅವರು ವಿವರಿಸಿದರು. ಸಾಹಿತಿ ಹಾಗು ಪರಿಷತ್ತಿನ ನಿರ್ದೇಶಕ ಪವನ್ ಕುಮಾರ್ ಗುಂಡೂರು ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಪರಿಷತ್ತಿನ ಕೊಪ್ಪಳ ಜಿಲ್ಲಾ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ್ ಪೂಲಬಾವಿ, ನಿರ್ದೇಶಕರಾದ ಇಬ್ರಾಹಿಂ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 