ಶಿಗ್ಗಾಂವ ಅರ್ಬನ್ ಕೋ ಆಫ್ ಬ್ಯಾಂಕ್ ನವೀಕೃತ ಮಹಡಿ ಉದ್ಘಾಟಿಸಿದ ಜಗದ್ಗುರು

ಶಿಗ್ಗಾಂವ ಅರ್ಬನ್ ಕೋ ಆಫ್ ಬ್ಯಾಂಕ್ ನವೀಕೃತ ಮಹಡಿ ಉದ್ಘಾಟಿಸಿದ ಜಗದ್ಗುರು Jagadguru inaugurates the renovated floor of Shiggaon Urban Co-operative Bank

ಶಿಗ್ಗಾಂವ ಅರ್ಬನ್ ಕೋ ಆಫ್ ಬ್ಯಾಂಕ್ ನವೀಕೃತ ಮಹಡಿ ಉದ್ಘಾಟಿಸಿದ ಜಗದ್ಗುರು 

ಶಿಗ್ಗಾವಿ  13: ರಂಭಾಪುರಿ ಪೀಠದತವರು ಮನೆಇದ್ದಂತೆ ತವರುಮನೆರಕ್ಷಣೆಗೆ ಪೀಠ ನಿರಂತರವಾಗಿ ನಡೆದುಕೊಳ್ಳುತ್ತದೆ ಎಂದುರಂಭಾಪುರಿ ಪೀಠದಜಗದ್ಗುರು ಪ್ರಸನ್ನರೇಣುಕಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.       ಪಟ್ಟಣದ ಶಿಗ್ಗಾಂವ ಅರ್ಬನ್ ಕೋ ಆಫ್ ಬ್ಯಾಂಕ್ ಲಿಮಿಟೆಡ್,ಬ್ಯಾಂಕಿನ ನವೀಕೃತ ಒಳಾಂಗಣ  ಹಾಗೂ ಮೊದಲ ಮಹಡಿಯಉದ್ಘಾಟನೆ ಹಾಗೂ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದಅವರು ಸಹಕಾರಿ ಸಂಘಗಳು ಪ್ರಗತಿ ಪಥದಲ್ಲಿ ಸಾಗಬೇಕಾದರೆಜನ ಸಾಮಾನ್ಯರ ಸಹಕಾರ ಮುಖ್ಯಅಲ್ಲದೇ ಪ್ರಾರಂಭದಲ್ಲಿ ಹಲವಾರುಕಠಿಣ  ಸವಾಲುಗಳನ್ನು ಸಮರ್ಥವಾಗಿಎದುರಿಸಲು ಸಂಸ್ತೆಯ ಆಡಳಿತ ಮಂಡಳಿಯಲ್ಲಿ ಸಾಮಾಜಿಕ ಕಳಕಳಿ ಬಹಳ ಮುಖ್ಯವಾಗಿದೆ. ಹಾಗೂ ಇಂದಿನ ಆಧುನಿಕ ಭರಾಟೆಯಯುಗದಲ್ಲಿ ಪರಸ್ಪರರಲ್ಲಿ ಸಂಬಂಧಗಳು ಕಡಿಮೆಯಾಗುತ್ತಿವೆಎಂದರು.     ಕೆಲವು ಮಠಾಧೀಶರು ಹಾಗೂ ಕೆಲವು ಎಡ ಪಂಥೀಯ ವ್ಯಕ್ತಿಗಳು ವೀರಶೈವಧರ್ಮದ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ. ವೀರಶೈವ ಮತ್ತು ಲಿಂಗಾಯತ ಧರ್ಮಗಳು ಒಂದೆಯಾಗಿದ್ದು ಕೆಲವು ಮಠಾಧೀಶರು ಹಾಗೂ ಕೆಲವು ಎಡ ಪಂಥೀಯ ವ್ಯಕ್ತಿಗಳಿಂದ ವೀರಶೈವಧರ್ಮವನ್ನು ವಡೆದು ಅಳಲು ಮುಂದಾಗುತ್ತಿದ್ದಾರೆ.ಕೆಲವು ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಧರ್ಮವನ್ನು ವಡೆದಾಳಲು ಮುಂದಾಗುತ್ತಿದ್ದಾರೆಎಂದು ಬೇಸರ ವ್ಯಕ್ತಪಡಿಸಿದರು.     ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರು, ಗಂಜಿಗಟ್ಟಿಚರಮೂರ್ತೇಶ್ವರ ಮಠದಡಾ. ವೈಜನಾಥ ಶಿವಲಿಂಗ ಶಿವಾಚಾರ್ಯರು, ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು, ಹಿರೇಮಣಕಟ್ಟಿ ಮುರುಕೇಂದ್ರ ಮಠದ ವಿಶ್ವಾರಾಧ್ಯ  ಶಿವಾಚಾರ್ಯರು ಸಮ್ಮುಖ ವಹಿಸಿದ್ದರು.    ಗಡಿ ಪ್ರಾಧಿಕಾರದಅಧ್ಯಕ್ಷ ಸೋಮಣ್ಣ ಬೇವಿನಮರದ, ಮಾಜಿ ಸಂಸದ ಮಂಜುನಾಥಕುನ್ನೂರ, ಸಂಸ್ಥಾಪಕ ಅಧ್ಯಕ್ಷಡಾ.ಪ್ರಭುಗೌಡ ಪಾಟೀಲ, ಸಹಕಾರಿಧುರೀಣ ಹೆಚ್‌.ಆರ್‌.ದುಂಡಿಗೌಡ್ರ ಮಾತನಾಡಿದರು.    ಅಧ್ಯಕ್ಷತೆಯನ್ನುಜಗದೀಶ ತೊಂಡಿಹಾಳ ವಹಿಸಿದ್ದರು. ಪುರಸಭೆಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ, ಅಶೋಕ.ಬಂಕಾಪುರ, ಜನಾರ್ಧನ ಬ್ರಹ್ಮಾವರ,  ತ್ರಿಲೋಚನಯ್ಯ ಸುರಗೀಮಠ, ಕುಮಾರ ಹೆಸರೂರ , ಉಮೇಶ ಗೌಳಿ, ಚಿದಾನಂದಕಮ್ಮಾರ, ಮಾಲತೇಶ ಗೌಳಿ, ಧರ್ಮಪ್ಪಧಾರವಾಡ, ಡಾ.ಬಿ. ಹೆಚ್‌. ವೀರಣ್ಣ, ಧೀರೇಂದ್ರಕುಂದಾಪೂರ, ಕಾಶವ್ವ ಹಾವೇರಿ, ಚನ್ನಮ್ಮ ಬಡ್ಡಿ ಸೇರಿದಂತೆ ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು