ಇಟಗಿ ಉತ್ಸವ: ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಂಗಣ್ಣ ಕೊಪ್ಪಳ ಆಯ್ಕೆ
Itagi Festival: Sanganna Koppal elected as the president of the conference
ಕೊಪ್ಪಳ 23: ಜಿಲ್ಲೆಯ ಕುಕನೂರು ತಾಲೂಕಿನ ಧಾರ್ಮಿಕ ಸುಕ್ಷೇತ್ರ ಐತಿಹಾಸಿಕ ಪ್ರಸಿದ್ಧ ಇಟಗಿ ಗ್ರಾಮದ ದೇವಸ್ಥಾನದ ಆವರಣದಲ್ಲಿ 22ನೇ ಬಾರಿಗೆ ನಡೆಯುವ ಇಟಗಿ ಉತ್ಸವದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಯಲಬುರ್ಗಾದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತಕರಾದ ಸಂಗಣ್ಣ ಕೊಪ್ಪಳ ಆಯ್ಕೆ ಯಾಗಿದ್ದಾರೆ ಎಂದು ಸಂಘಟಕ ಮಹೇಶ್ ಬಾಬು ಸುರುವೇ ತಿಳಿಸಿದ್ದಾರೆ. ಐತಿಹಾಸಿಕ ಪ್ರಸಿದ್ಧ ದೇವಾಲಯಗಳ ಚಕ್ರವರ್ತಿ ಇಟಗಿ ಗ್ರಾಮದ ಮಹೇಶ್ವರ ದೇವಸ್ಥಾನದ ಅವರಣ ದಲ್ಲಿ ಇಟಗಿ ಉತ್ಸವದ ಸಾಂಸ್ಕೃತಿಕ ಸಮಿತಿಯಿಂದ ಬರುವ 2025 ಡಿಸೆಂಬರ್ 20 ರಿಂದ 22ರ ವರೆಗೆ ನಡೆಯುವ ಇಟಗಿ ಉತ್ಸವದಲ್ಲಿ 21 ರಂದು ನಡೆಯುವ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಯಲಬುರ್ಗಾ ದ ಕಾಯಕ ಜೀವಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತಕರಾದ ಸಂಗಣ್ಣ ಕೊಪ್ಪಳ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇಂದು ಕೊಪ್ಪಳದಲ್ಲಿ ನಡೆದ ಉತ್ಸವದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಗೌರವ ಅಧ್ಯಕ್ಷರಾದ ಎಂ.ಬಿ . ಅಳವಂಡಿ ಅವರು ಸೂಚಿಸಿದನ್ನು ಪರಿಗಣಿಸಿ ಚರ್ಚಿಸೀತೀರ್ಮಾನ ಕೈಗೊಳ್ಳಲಾಯಿತು.
ವಚನ ಸಾಹಿತ್ಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರದ ಸಂಘಟನೆಗಾಗಿ ಮತ್ತು ಶರಣರ ಕುರಿತು ಉಪನ್ಯಾಸ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಕುರಿತು ಈಗಾಗಲೇ 90ಕ್ಕೂ ಹೆಚ್ಚು ಉಪನ್ಯಾಸಗಳನ್ನು ದೊಡ್ಡ ದೊಡ್ಡ ವೇದಿಕೆಗಳಲ್ಲಿ ನೀಡಿದ ಹೆಗ್ಗಳಿಕೆ ಸಂಗಣ್ಣ ಕೊಪ್ಪಳ ಇವರದು ಇದನ್ನು ಪರಿಗಣಿಸಿ ಇಟಗಿ ಉತ್ಸವದಲ್ಲಿ ನಡೆಯುವ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಲಾಯಿತು. ಶನಿವಾರದಂದು ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಹೇಶ್ ಬಾಬು ಸುರ್ವೆ ಅವರ ಅಧ್ಯಕ್ಷತೆಯಲ್ಲಿ ಈ ಆಯ್ಕೆಯನ್ನು ಮಾಡಲಾಯಿತು , ವೇದಿಕೆಯ ಗೌರವಾಧ್ಯಕ್ಷ ಎಂ.ಬಿ.ಅಳವಂಡಿ,ವೇದಿಕೆಯರಾಜ್ಯ ಉಪಾಧ್ಯಕ್ಷಸಿದ್ದಪ್ಪ ಹಂಚಿನಾಳ ಜಿಲ್ಲಾ ಅಧ್ಯಕ್ಷಜಿ.ಎಸ್. ಗೋನಾಳ, ಸಾಂಸ್ಕೃತಿಕ ಪ್ರತಿಷ್ಠಾನದ ಜಿಲ್ಲಾ ಅಧ್ಯಕ್ಷಎಂ .ಸಾಧಿಕ ಅಲಿ, ಸೇರಿದಂತೆವೈ ಬಿ ಜೂಡಿ ಅನ್ನಪೂರ್ಣ ಮನ್ನಾಪುರ್ಶಿವಕುಮಾರ್ ಹಿರೇಮಠ ಶಿಲ್ಪ ಮಂಗಳೂರು ಉಮೇಶ್ ಪೂಜಾರ ಸುಶೀಲಾ ಎಂ .ಎಸ್.ಶರಣಪ್ಪ ಹಾದಿ.ಉದಯ್ ತೋಟದ ಇತರರು ಭಾಗವಹಿಸಿದ್ದರು ಎಂದು ಪ್ರಕಟನೆಯಲ್ಲಿ ಮಹೇಶ್ ಬಾಬು ಸುರ್ವೆ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 