ಸಸಿಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡುವುದು ನಮ್ಮೇಲ್ಲರ ಕರ್ತವ್ಯ

ಸಸಿಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡುವುದು ನಮ್ಮೇಲ್ಲರ ಕರ್ತವ್ಯ   It is our duty to plant and nurture saplings.

ಸಸಿಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡುವುದು ನಮ್ಮೇಲ್ಲರ ಕರ್ತವ್ಯ                                   

ಕಂಪಿ ್ಲ27: ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಜೊತೆಗೆ ಪಾಲನೆ ಪೋಷಣೆ ಮಾಡುವುದು ನಮ್ಮೇಲ್ಲರ ಕರ್ತವ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲೆ ನಿರ್ದೇಶಕ  ರೋಹಿತಾಕ್ಷ ಹೇಳಿದರು ತಾಲೂಕಿನ ಕಂಪ್ಲಿ ಕೊಟ್ಟಾಲ್ ಗ್ರಾಮದ ಶ್ರೀ ಪಾಂಡುರಂಗ ದೇವಸ್ಥಾನ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡಗಳ ನಾಟಿ ಮಾಡಿ ಸಸಿಗಳನ್ನು ವಿತರಿಸಿ ನಂತರ ಮಾತನಾಡಿ ಪರಿಸರದಿಂದ ಉತ್ತಮ ಗಾಳಿ ಮಳೆ ಬರುತ್ತದೆ ಪ್ರತಿಯೊಬ ಮನುಷ್ಯನು ಪರಿಸರ ಉಳಿಸಿ ಸಂರಕ್ಷಣೆ ಮಾಡಿ ನೈಸರ್ಗಿಕವಾಗಿ  ಪರಿಸರವನ್ನು ರಕ್ಷಿಸುವ ಅಭ್ಯಾಸವಾಗಬೇಕು ಜನರಿಗೆ ಪರಿಸರ ಜಾಗೃತಿ ಬಗ್ಗೆ ಪ್ರತಿ ಶುಭ ಕಾರ್ಯಕ್ರಮಗಳಾದ ಹುಟ್ಟುಹಬ್ಬದ ಆಚರಣೆ, ಮದುವೆ ವಾರ್ಷಿಕೋತ್ಸವ ಆಚರಣೆ, ದಿನ ಕೇಕ್ ಕತ್ತರಿಸುವ ಬದಲು ಒಂದು ಗಿಡ ನೆಟ್ಟು ಪರಿಸರವನ್ನು ಉಳಿಸುವ ಬಗ್ಗೆ ಬೆಳೆಸುವ ಬಗ್ಗೆ ಹಾಗೂ ಯೋಜನೆಯ ವಿವಿಧ ಕಾರ್ಯಕ್ರಮಗಳಾದ ದೇವಸ್ಥಾನ ಜೀರ್ಣೋದ್ಧಾರಕ್ಕೆ ನೀಡುವ ಸಹಾಯದಿಂದ ಬಗ್ಗೆ, ವಿಕಲಚೇತನರಿಗೆ ಉಚಿತವಾಗಿ ಪರಿಕರಗಳ  ನೀಡುತ್ತಿರುವ ಬಗ್ಗೆ, ಶುದ್ಧ ಗಂಗಾ ಘಟಕ ನಿರ್ಮಾಣ ಬಗ್ಗೆ, ಹಿಂದೂ ರುದ್ರಭೂಮಿ ಅಭಿವೃದ್ಧಿ ಬಗ್ಗೆ,ಮಾರ್ಗದರ್ಶನ ನೀಡಿದರು ಪಾಂಡುರಂಗ ದೇವಸ್ಥಾನ ಕಮಿಟಿ ಸದಸ್ಯರಿಗೆ ಸುಮಾರು 80 ಗಿಡಗಳ ವಿತರಣೆ ಮಾಡಿ ಆವರಣದಲ್ಲಿ ಸಾಂಕೇತಿಕವಾಗಿ ಗಿಡಗಳ ನಾಟಿ ಮಾಡಲಾಯಿತು ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಸುಧೀರ್ ಮಾತನಾಡಿ ಧರ್ಮಸ್ಥಳ ಸಂಸ್ಥೆ ಮಾಡುತ್ತಿರುವ ಸಮಾಜಮುಖಿ ಕೆಲಸ ಮಾಡುತ್ತಿರುವುದು ಶಾಘ್ಲನೀಯ ಎಂದರು,ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀ ರಾಘವೇಂದ್ರ ಪಾಂಡುರಂಗ ದೇವಸ್ಥಾನದ ಅಧ್ಯಕ್ಷರಾದ ಶ್ರೀನಿವಾಸ್ ರೆಡ್ಡಿ ಕಮಿಟಿ ಸದಸ್ಯರಾದ ಚಂದ್ರಶೇಖರ, ಶ್ರೀನಿವಾಸ್, ದೇವಸ್ಥಾನ ಅರ್ಚಕರಾದ ಶ್ರೀ ರಾಘವೇಂದ್ರ, ದೇವಸ್ಥಾನ ಸಮಿತಿ ಸದಸ್ಯರು,ಮತ್ತು ತಾಲೂಕಿನ ಕೃಷಿ ಅಧಿಕಾರಿ ಸಂಜುಕುಮಾರ್, ಮೇಲ್ವಿಚಾರಕರಾದ ಶ್ರೀ ಮಂಜುನಾಥ್, ಸೇವಾಪ್ರತಿನಿಧಿಯಾದ ಪದ್ಮಾವತಿ ಹಾಗೂ ಸ್ವ ಸಹಾಯ ತಂಡದ ಸದಸ್ಯರು ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಲಾಯಿತು.*