ಕಾಲಕ್ಕೆ ತಕ್ಕಂತೆ ವಿಜ್ಞಾನದ ಅರಿವು ಪಡೆದುಕೊಳ್ಳುವುದು ಅಗತ್ಯ.- ಪ್ರೋ. ಎಸ್.ಟಿ. ನಂದಿಬೇವೂರು
It is necessary to acquire scientific knowledge in line with the times.- Prof. S.T. Nandibevur
ಕೊಪ್ಪಳ 02: 20 ನೇ ಶತಮಾನದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಹೊಸ ಶಕ್ತಿತಂದವರು ಪ್ರೋ. ಸಿ.ವಿ.ರಾಮನ್‌ವರು ಸ್ವತಂತ್ರ ಪೂರ್ವದಲ್ಲಿಯೆ ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ನೋಬಲ್ ಪ್ರಶಸ್ತಿ ತಂದುಕೊಟ್ಟ ಕೀರ್ತಿ ಅವರದಾಗಿದೆ ಆರಂಭದಲ್ಲಿ ಸಿವಿಲ್ ಪರೀಕ್ಷೆ ಪಾಸಾಗಿ ಆಡಳಿತ ಸೇವೆಯಲ್ಲಿ ್ಲ ತೊಡಗಿದರು. ನಂತರ ಸಿವಿಲ್ ಸೇವೆಗೆ ರಾಜೀನಾಮೆಯನ್ನು ನೀಡಿ ಪ್ರಧ್ಯಾಪಕರಾಗಿ ಸಂಶೋಧನೆಯಲ್ಲಿ ತೊಡಗಿಸಿಕೊಂಡದ್ದು ಅವರಿಗೆ ವಿಜ್ಞಾನದ ಬಗ್ಗೆ ಇರುವ ಕುತೂಹಲ ಆಸಕ್ತಿ ಹಾಗೂ ಅಧ್ಯಯನವೇ 1930ರಲ್ಲಿ ಅವರಿಗೆ ನೊಬೆಲ್ ಪ್ರಶಸ್ತಿ ಪಡೆಯಲು ಕಾರಣ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಜೀವನಾವಧಿ ಪ್ರಾಧ್ಯಾಪಕರಾದ ಪ್ರೋ. ಎಸ್.ಟಿ. ನಂದಿಬೇವೂರು ಅವರು ಹೇಳಿದರು.
ನಗರದ ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ದಿನಾಂಕ 2.3.2026 ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ನಿಮಿತ್ಯ ವಿಜ್ಞಾನದಲ್ಲಿ ಮಹಿಳೆ-ಅಭಿವೃದ್ದಿಶೀಲ ಭಾರತದ ಪ್ರೇರಕ ಶಕ್ತಿ ಎಂಬ ಘೋಷ ವಾಕ್ಯದೊಂದಿಗೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ. ಅವರು ಆಧುನಿಕ ತಂತ್ರಜ್ಞಾನ ತಕ್ಕಂತೆ ಅರಿವು ಬೆಳೆಸಿಕೊಳ್ಳುವುದ ಅಗತ್ಯ. ನಾವೆಲ್ಲರೂ ರೋಬೋಟ್ ಯುಗದಲ್ಲಿ ಇದ್ದೇವೆ ಇಂತಹ ಸಂದರ್ಭದಲ್ಲಿ ಆಧುನಿಕ ಕಾಲಕ್ಕೆ ತಕ್ಕಂತೆ ವಿಜ್ಞಾನದ ಅರಿವು ಪಡೆದುಕೊಳ್ಳುವುದು ಅಗತ್ಯವಾಗಿದೆ. ಹಾಗೂ ಭಾರತದ ಮತ್ತು ಪ್ರಪಂಚದ ವಿಜ್ಞಾನದಲ್ಲಿ ಆದ ಬೆಳವಣಿಗೆ ಹಾಗು ವಿಜ್ಞಾನಿಗಳ ಕೊಡುಗೆಗಳ ಅರಿವು ನಮಗೆ ಇರಬೇಕು. ಇಂತಹ ಕಾರ್ಯಕ್ರಮದಲ್ಲಿ ಜಗತ್ತಿಗೆ ಕೊಡುಗೆ ನೀಡಿದ ಎಲ್ಲಾ ವಿಜ್ಞಾನಿಗಳನ್ನು ಸ್ಮರಿಸುವುದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್ ನ ಕಾರ್ಯದರ್ಶಿಗಳಾದ ಡಾ. ಆರ್ ಮರೇಗೌಡ ಅವರು ಮಾತನಾಡಿ ಸಿ.ವಿ ರಾಮನ್ ಅವರು ಪ್ರಪಂಚ ಕಂಡ ಶ್ರೇಷ್ಠ ವಿಜ್ಞಾನಿ. ಅವರು ಭಾರತದ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಯಿಂದಾಗಿ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸುತ್ತಾರೆ. ವಿಜ್ಞಾನದ ಜ್ಞಾನ ಎಲ್ಲರು ಬೆಳೆಸಿಕೊಳ್ಳಬೇಕು. ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನೀಡುವದರ ಮೂಲಕ ವಿಜ್ಞಾನದ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ. ಇಂತಹ ಕಾರ್ಯಕ್ರಮದ ಸದುಪಯೋಗ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಹೇಳಿದರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್ ಬಿ ಕಂಬಾರ್ ಅವರು ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತ ಕೋರಿದರು. ಪ್ರೊ. ಶ್ರೀಧರ್ ಪೂಜಾರ್ ರವರು ನಿರೂಪಿಸಿದರು. ಐಕ್ಯೂಎಸಿ ಸಂಯೋಜಕರಾದ ಡಾ. ಕೆ. ಕವಿತಾ ವಂದಿಸಿದರು. ಮಹಾವಿದ್ಯಾಯದ ಸಂಯೋಜಕರಾದ ಪ್ರೋ ಎಚ್.ವಿ.ಆನಂದಹಳ್ಳಿ ಹಾಗೂ ಹಾಗೂ ಪ್ರಾಧ್ಯಾಪಕರಾದ ನಾಗರಾಜ್ ಬೊಮ್ಮನಾಳ್, ಡಾ. ಚನ್ನಬಸವ, ಡಾ.ನಾಗರಾಜ್ ದಂಡೋತಿ, ಡಾ.ಶೈಲಜಾ ಅರಲೇಮಠ, ಡಾ.ಆನಂದರಾವದೇಸಾಯಿ, ಡಾ.ನೀಲಾಂಭಿಕೆ ಹುದ್ದಾರ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 