ಎಲ್ಲ ಜಯಂತಿಗಳನ್ನು ಎಲ್ಲ ಸಮುದಾಯದ ಜನರು ಭಕ್ತಿಯಿಂದ ಆಚರಿಸುವುದು ಅವಶ್ಯ : ಶಾಸಕ ಮಾನೆ

ಎಲ್ಲ ಜಯಂತಿಗಳನ್ನು ಎಲ್ಲ ಸಮುದಾಯದ ಜನರು ಭಕ್ತಿಯಿಂದ ಆಚರಿಸುವುದು ಅವಶ್ಯ : ಶಾಸಕ ಮಾನೆ It is essential that people of all communities celebrate all Jayantis with devotion: MLA Mane

ಶಿಗ್ಗಾವಿ 23 : ಮಹಾನ್ ಪುರುಷರ ಆಚರಣೆಗಳು ಕೇವಲ ಅವರವರ ಸಮುದಾಯಕ್ಕೆಸೀಮಿತವಾಗಿರದೆ, ಅವರ ಸ್ಮರಣಾರ್ಥ ನಡೆಯುವ ಜಯಂತಿಗಳನ್ನು ಎಲ್ಲ ಸಮುದಾಯದ ಜನರು ಭಕ್ತಿಯಿಂದ ಆಚರಿಸುವುದು ಅವಶ್ಯವಾಗಿದೆ ಎಂದು ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಹೇಳಿದರು.  ಪಟ್ಟಣದಲ್ಲಿ ತಾಲೂಕ ಮರಾಠ ಸಮಾಜದಿಂದ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸ್ವಾರ್ಥದ ಮನೋಭಾವನೆಯನ್ನು ಬಿಟ್ಟು, ನಿಸ್ವಾರ್ಥ ಭಾವನೆಯೊಂದಿಗೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಬೆರೆಯುವುದು ಇಂದು ಅವಶ್ಯವಿದೆ.

ಶಿವಾಜಿ ಮಹಾರಾಜರನ್ನು ಕೇವಲ ಒಂದು ಸಮುದಾಯದ ಮೇಲೆ ಎತ್ತಿ ಕಟ್ಟುವಂತಹ ಕೃತ್ಯಗಳು ಇಂದು ಹೆಚ್ಚಾಗುತ್ತಿವೆ ಅಲ್ಲದೇ ಶಿವಾಜಿ ಮಹಾರಾಜರ ಮೂಲಕ ಒಂದು ಸಮುದಾಯವನ್ನು ದ್ವೇಷಿಸುತ್ತಿರುವದು ಖೇಧದ ಸಂಗತಿ ಎಂದರು. ಶಾಸಕ ಯಾಸೀರಖಾನ್ ಪಠಾಣ ಮಾತನಾಡಿ ಭಾರತ ದೇಶವನ್ನು ಪರಕಿಯರಿಂದ ಮುಕ್ತಗೊಳಿಸಿ, ಅಖಂಡ ಭಾರತ ನಿರ್ಮಾಣ ಮಾಡಲು ಹೋರಾಡಿದ ಅಪ್ರತಿಮ ನಾಯಕ ಶಿವಾಜಿ ಮಹಾರಾಜರ ಆಡಳಿತ, ಧೈರ್ಯ, ಅವರ ಹೋರಾಟದ ಮನೋಭಾವನೆ ನಮಗೆಲ್ಲ ಆದರ್ಶವಾಗಿವೆ. ನನ್ನ ಆಡಳಿತಾವಧಿಯಲ್ಲಿ ಸಮಾಜದ ಏಳಿಗೆಗೆ ಬೇಕಾದ ಎಲ್ಲಾ ರೀತಿಯ ಸಹಕಾರ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಹೇಳಿದರು.  ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ ದಾರ್ಶನಿಕರ ಜಯಂತಿಗಳು ಜಾತಿಗೆ ಸಿಮೀತಗೊಳಿಸಬಾರದು.

ಮರಾಠ ಸಮಾಜದ ಶ್ರೇಯೋಭಿವೃದ್ದಿಗೆ ಸಮಾಜದ ಜತೆಗಿರುತ್ತೇನೆ ಎಂದರು.  ವಿರಕ್ತಮಠದ ಸಂಗನಬಸವ ಶ್ರೀಗಳು ಸಾನಿಧ್ಯವಹಿಸಿದ್ದರು. ಗುರು ಭಾವನಮಠದ ಚಂದ್ರ​‍್ಪ ಕಾಳೆ, ಮರಾಠ ಸಮಾಜದ ತಾಲೂಕ ಅಧ್ಯಕ್ಷ ಚಂದ್ರಶೇಖರ ಮಾನೋಜಿ ಪ್ರಾಸ್ರಾವಿಕವಾಗಿ ಮಾತನಾಡಿದರು.  ಜಿಲ್ಲಾ ಅಧ್ಯಕ್ಷ ಎಂ.ಎನ್‌.ವೆಂಕೋಜಿ, ಪ್ರಭಣ್ಣ ಮಾಸನ ಕಟ್ಟಿ, ಪಾಂಡು ದಂಡಿನ, ಹನುಮರೆಡ್ಡಿ ನಡುವಿನಮನಿ, ಲಕ್ಷ್ಮಣ ಕುಂದಗೋಳ, ಶಿವಾಜಿ ಅಕ್ಕಿ, ರವಿ ಕಡೆಮನಿ, ಶಿವಾಜಿ ಹಟ್ಟಿ, ಸುಮಿತ್ ಸೂರ್ಯವಂಶಿ, ಫಿರೋಜ್ ಕಾಮನಹಳ್ಳಿ, ದೇವೇಂದ್ರ ಜಾಧವ, ವಿಶಾಲ ಮರಾಠೆ ಸೇರಿದಂತೆ ಇತರರಿದ್ದರು.