ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಶೋಷಣೆಗಳು ನಿಲ್ಲದಿರುವುದು ಖೇದಕರ ಸಂಗತಿ
It is a sad fact that sexual violence and exploitation of women continues unabated
ಬ್ಯಾಡಗಿ 14 : ಯುವತಿಯರು ಹಾಗೂ ಮಹಿಳೆಯರ ರಕ್ಷಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಿಗಿಯಾದ ಕಾನೂನುಗಳನ್ನು ಮಾಡಿದ್ದರು ಸಹ ಇವರ ಮೇಲೆ ದೌರ್ಜನ್ಯ ಹಾಗೂ ಲೈಂಗಿಕ ಶೋಷಣೆಗಳು ಪೂರ್ಣವಾಗಿ ನಿಲ್ಲದಿರುವದು ಖೇದಕರ ಸಂಗತಿಯಾಗಿದೆ ಎಂದು ನಿವೃತ್ತ ಶಿಕ್ಷಕಿ ಸಂಧ್ಯಾರಾಣಿ ದೇಶಪಾಂಡೆ ಹೇಳಿದರು. ಪಟ್ಟಣದ ಎಸ್. ಜೆ. ಜೆ. ಎಂ ಶಿಕ್ಷಣ ಸಂಸ್ಥೆಯ ಠಿಣಛಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಇನ್ನರ್ ವೀಲ್ ಕ್ಲಬ್ನವರು *ಮಹಿಳೆಯರನ್ನು ರಕ್ಷಿಸಿರಿ* ಎಂಬ ಕಾರ್ಯಕ್ರಮದಲ್ಲಿ ಉಪನ್ಯಾಸ ಮಾಡಿ ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಕಾನೂನಿನ ಬಿಗಿ ಮುಷ್ಟಿಯಿಂದ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಕಡಿಮೆ ಆಗಿವೆ. ಮಹಿಳೆಯರು ಯಾವದೇ ಭಯ ಇಲ್ಲದೇ ತಮ್ಮ ತೊಂದರೆಗಳ ಬಗ್ಗೆ ಕಾನೂನಿನ ನೆರವು ಪಡೆಯುವದರ ಮೂಲಕ ಅಪರಾಧಿಗಳಿಗೆ ತಕ್ಕ ಶಿಕ್ಷೆ ಆಗುವಂತೆ ಮಾಡಬಹುದು .
ಶಿಕ್ಷಣ. ಧೈರ್ಯ ಹಾಗೂ ಬುದ್ದಿವಂತಿಕೆ ಮಹಿಳೆಯರಿಗೆ ಅಗತ್ಯವಿದೆ. ಸಮಾಜವು ಬದಲಾಗಿದೆ. ಮಹಿಳೆಯರ ಬಗ್ಗೆ ಉತ್ತಮ ಭಾವನೆಗಳು ಜಾಗೃತ ಆಗುತ್ತಿವೆ. ಸರಕಾರದ ಕಾನೂನು ಮಹಿಳೆಯರಿಗೆ ಮೀಸಲಾತಿ ಮೂಲಕ ಸಮಾನ ಅವಕಾಶಗಳನ್ನು ಕಲ್ಪಿಸಿದೆ.ಮಹಿಳೆಯರು ಉತ್ತಮ ಸಮಾಜ ದೇಶದ ಶಿಸ್ತು ಸಂಸ್ಕೃತಿಗಳ ಕಡೆಗೂ ಹೆಚ್ಚಿನ ಗಮನ ಕೊಡಬೇಕೆಂದು ಪಾಶ್ಚಿಮಾತ್ಯ ಸಂಸ್ಕೃತಿಗಳಿಗೆ ಮಾರಿ ಹೋಗ ಬಾರದು ಎಂದು ಹೇಳಿದರು. ಕ್ಲಬ್ ಅಧ್ಯಕ್ಷೆ ಪ್ರತಿಭಾ ಮೇಲಗಿರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಕ್ಲಬ್ ಮಹಿಳಾ ಜಾಗೃತಿ. ಪರಿಸರ. ಉತ್ತಮ ಕುಟುಂಬ. ಅರೋಗ್ಯ ರಕ್ಷಣೆ. ಮಹಿಳಾ ಕಾನೂನುಗಳು ಹೀಗೆ ಹಲವಾರು ಕಾರ್ಯಕ್ರಮ ಏರಿ್ಡಸುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ಡಿ. ಬಿ ಕುಸಗೂರ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಕ್ಲಬ್ ಸದಸ್ಯೆ ಪುಷ್ಪಾ ಇಂಡಿಮಠ. ವಿಜಯಲಕ್ಷ್ಮಿ ಯಾದವಾಡ. ಗೀತಾ ಎಲಿ. ವಿಜಯಲಕ್ಶ್ಮಿ ಗೌಡರ. ಸುಶೀಲ ಕಲಕಟ್ಟಿ. ಪಾರ್ವತಿ ಲೋಕೇಶ್ ಉಪಸ್ಥಿತರಿದ್ದರು
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 