ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಉತ್ಸವವಾಗಿದೆ : ಭರತ್ ಬೊಮ್ಮಾಯಿ

ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಉತ್ಸವವಾಗಿದೆ : ಭರತ್ ಬೊಮ್ಮಾಯಿ It is a festival to increase physical fitness: Bharat Bommai

          ಶಿಗ್ಗಾವಿ 30 : ಗ್ರಾಮೀಣ ಕ್ರೀಡಾಕೂಟವು ಗ್ರಾಮೀಣ ಪ್ರದೇಶಗಳ ಸಾಂಪ್ರದಾಯಿಕ ಆಟಗಳನ್ನು ಪ್ರದರ್ಶಿಸುವ, ಸಮುದಾಯ ಒಗ್ಗೂಡಿಸುವ ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಒಂದು ಉತ್ಸವವಾಗಿದೆ ಎಂದು ಬಿಜೆಪಿ ಯುವ ಮುಖಂಡ ಭರತ್ ಬೊಮ್ಮಾಯಿ ಹೇಳಿದರು.ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ಸಂಸದರ ಕ್ರೀಡಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಕ್ರೀಡೆಗೆ ವಿಶೇಷ ಆದ್ಯತೆ ನೀಡಿದ್ದು, ಖೇಲೋ ಇಂಡಿಯಾ, ಫಿಟ್ ಇಂಡಿಯಾ, ಮತ್ತು ಜೀತೋ ಇಂಡಿಯಾ ಮೂಲಕ ವಿಶೇಷವಾಗಿ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡಲಾಗುತ್ತಿದೆ,

          ಇದರ ಫಲವಾಗಿ ಒಲಿಂಪಿಕ್ಸ್‌ ಮತ್ತು ಪ್ಯಾರಾ ಒಲಿಂಪಿಕ್ಸ್‌ ನಲ್ಲಿ ಭಾರತ ಇತಿಹಾಸದಲ್ಲೇ ಅತಿ ಹೆಚ್ಚು ಪದಕಗಳನ್ನು ಗಳಿಸಲು ಅನುಕೂಲವಾಗಿದೆ.ಪೋನನಲ್ಲಿಯ ಆಟಗಳು ಕಡಿಮೆ ಆಗಬೇಕು, ಮಣ್ಣಿನಲ್ಲಿಯ ಆಟಗಳು ಹೆಚ್ಚಾಗಬೇಕು ಎಂಬ ಉದ್ದೇಶವನ್ನು ಪ್ರಧಾನಿಯವರು ಹೊಂದಿದ್ದಾರೆ. ಕ್ರೀಡೆಗಳಿಂದ ಕಲಿಯುವುದು ಬಹಳಷ್ಟಿದೆ. ಈ ಕ್ರೀಡಾಕೂಟದಲ್ಲಿ ಬಹಳಷ್ಟು ಮಹಿಳೆಯರು ಭಾಗವಹಿಸುತ್ತಿದ್ದಾರೆ. ಸೋಲು, ಗೆಲುವುಗಳು ಸಮನಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಅಂದಾಗ ಮಾತ್ರ ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. 

          ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮಾತನಾಡಿ ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಇದೊಂದು ಉತ್ತಮ ಕ್ರೀಡಾ ಮಹೊತ್ಸವವಾಗಿದೆ, ಭಾವನಾತ್ಮಕ ಮನೋಭಾವನೆಗಳು ಸಮತೋಲಿತವಾಗಿರಲು ಕ್ರೀಡೆಗಳು ಸಹಾಯಕವಾಗಿವೆ, ಕ್ರೀಡಾ ಮನೋಭಾವದಿಂದ ಭಾವಗವಹಿಸಿ, ಈ ಕ್ರೀಡಾ ಮಹೋತ್ಸವ ಶಿಸ್ತು, ಸಂಯಮದ ಕ್ರೀಡಾಕೂಟವಾಗಲಿ ಎಂದು ಹೇಳಿದರು. ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು,ಗಂಜೀಗಟ್ಟಿ ಚರಮೂರ್ತೇಶ್ವರ ಮಠದ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಬಂಕಾಪೂರ ಅರಳೆಲೆ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಸಿಇಓ ರುಚಿ ಬಿಂದಲ್, ಸವಣೂರ ಉಪವಿಭಾಗಾಧಿಕಾರಿ ಸುಭಂ ಶುಕ್ಲಾ, ಕ್ರೀಡಾಧಿಕಾರಿ ಲತಾ, ನರಹರಿ ಕಟ್ಟಿ, ಸೇರಿದಂತೆ ದೈಹಿಕ ಶಿಕ್ಷಕರು, ಕ್ರೀಡಾಪಟುಗಳು, ಕ್ರೀಡಾ ಅಧಿಕಾರಿಗಳು, ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು