ವೀಡಿಯೋ ಸಾಂಗ್ ಮೂಲಕ ಶ್ರೀಮಠದ ಭಕ್ತರಿಗೆ ಜಾತ್ರೆಗೆ ಆಹ್ವಾನ
Invitation to the fair to the devotees of the Sri Math through a video song
ಕೊಪ್ಪಳ 19: ಸಂಸ್ಥಾನ ಗವಿಮಠ ಜಾತ್ರೆಯೂ ಪ್ರತಿ ವರ್ಷ ವಿಭಿನ್ನ, ವಿಶಿಷ್ಟ ರೂಪದಲ್ಲಿ ಅರ್ಥ ಪೂರ್ಣವಾಗಿ ಜರುಗುತ್ತಿದೆ. ಆಧುನಿಕತೆಯ ಸ್ಪರ್ಶದ ಜೊತೆಗೆ ಭಕ್ತರಿಗೆ 2026ರ ಮಹಾಜಾತ್ರೆಯ ಆಹ್ವಾನ ಶ್ರೀಮಠದ ಭಕ್ತರಿಗೆ ನೇರವಾಗಿ ತಲುಪಿಸುವ ಸತ್ಕಾರ್ಯದಲ್ಲಿ ತೊಡಗಿದೆ. ಅದಕ್ಕೆ ಈ ಬಾರಿಯೂ ಜನೇವರಿ 05, 06 ಹಾಗೂ 07ರಂದು ನಡೆಯುವ ಅಜ್ಜನ ಜಾತ್ರೆಗೆ ಭಕ್ತರನ್ನು ಆಹ್ವಾನಿಸುವ ಆ ದೃಶ್ಯವನ್ನು ಡ್ರೋಣ್ ಕ್ಯಾಮರಾದ ಮೂಲಕ ಸೆರೆಹಿಡಿದ ವೀಡಿಯೊದೊಂದಿಗೆ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಿಸಿದ ಟ್ರೇಲರ್ ಸಾಂಗ್‌ಇಂದು 19.12.2025 ರ ಸಮಯ ಬೆಳಿಗ್ಗೆ 09:00ಗಂಟೆಗೆ ಶ್ರೀಮಠದ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಕೊಂಡು ಸೇವೆಗೈಯುತ್ತಿರುವ ನಾಗವ್ವ ಮ್ಯಾಗಳಮನಿ, ಹುಲಿಗೆವ್ವ ಅಗಳಕೇರಾ, ಶೋಭಾ ಇಟಗಿ, ಲಕ್ಷ್ಮೀ ಬೆಲ್ಲದ, ಭರಮವ್ವ ಭೋಚಹನಳ್ಳಿ, ಅಮೃತಾ, ಯಲ್ಲಮ್ಮ, ಈರಮ್ಮ, ಮಾತೆಂಗವ್ವ, ರುದ್ರಗೌಡ, ಮಲ್ಲಿಕಾರ್ಜುನಯ್ಯ ಸೇವಕರು ಇವರಿಂದ ಬಿಡುಗಡೆಗೂಳಿಸಿದ್ದು ಜಾತ್ರೆಯ ವಿಶೇಷತೆಯಾಗಿದೆ.
“ಭಕ್ತಿಯ ಮನೆ ಮನಗಳಲ್ಲಿ
ಮುಕ್ತಿಯ ಕೆನೆ ನೆನಹಿನಲ್ಲಿಓಂಕಾರವುಕೋಟೆಕಟ್ಟಿಬೆಟ್ಟಗಳು ಧ್ಯಾನದಲಿ
ಸಿದ್ದ ಪುರುಷ ಗವಿಸಿದ್ದನೇ
ಇಷ್ಟ ಪ್ರಾಣ ಭಾವದಲ್ಲಿಜಾತ್ರೋತ್ಸವ ನಮ್ಮಯಾತ್ರೋತ್ಸವ”
ಈ ಸುಂದರ ಭಕ್ತಿ ತುಂಬಿದ ಸಾಲುಗಳಿರುವ ಈ ಸಾಹಿತ್ಯಕೆ ್ಕಜೀವ ತುಂಬುವ ಕಂಠಸಿರಿಯ ಕೊಪ್ಪಳದ ಗಾಯಕ ಸದಾಶಿವ ಪಾಟೀಲರು ಮೈದುಂಬಿ ಹಾಡಿರುತ್ತಾರೆ. ಈ ಹಾಡಿನಲ್ಲಿ ಶಿವಶಾಂತವೀರ ಹಾಗೂ ಮರಿಶಾಂತವೀರ ಮಹಾಸ್ವಾಮಿಗಳವರ ಮೂರ್ತಿಶಿಲ್ಪ, ಭಕ್ತಿ ಸಂಗೀತ, ಚಿಕೇನಕೊಪ್ಪದ ಶರಣರ ಧೀರ್ಘದಂಡ ನಮಸ್ಕಾರ, ಜಾತ್ರಾ ಮಹಾದಾಸೋಹದ ಪ್ರಸಾದದ ಸಿದ್ಧತೆ ಮತ್ತು ಭಕ್ತರ ಸೇವನೆ, ಹಾಗೂ ಗವಿಮಠದ ಸೆವೆಯಲ್ಲಿ ಇತರ ಸೆವೆಯಲ್ಲಿ ತೊಡಗಿದ ವಿವಿಧ ಸೇವಕರ, ಶ್ರೀಮಠದ ಜಾತ್ರೆಯ ಚಿತ್ರಿತ ವೈಶಿಷ್ಟ್ಯಪೂರ್ಣ ಪುಣ್ಯಕಾರ್ಯಗಳು ಅಂತರ್ಗತವಾಗಿವೆ. ಇಲ್ಲಿನ ಪ್ರಾಕೃತಿಕ ಬೆಟ್ಟ-ಗುಡ್ಡಗಳ, ಕೆರೆ, ಸಹಜತೆಯ ವೈಭವ, ಹಾಗೂ ಚಿತ್ರಿತ ವೀಡಿಯೋ ಬಳಸಿ ಸಂಯೋಜನೆ ಮಾಡಿ ಚಿತ್ರೀಕರಣ ಮಾಡಿದ ವೀಡಿಯೋ ಟ್ರೇಲರ್ ಸಾಂಗ್‌ನೊಂದಿಗೆ ಶ್ರೀಮಠದ ಭಕ್ತರಿಗೆ ಈ ವರ್ಷದ ಜಾತ್ರೆಗೆ ಆಹ್ವಾನ ನೀಡಲಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 