ಪರೀಕ್ಷಾ ಕೇಂದ್ರಕ್ಕೆ ವಿಚಕ್ಷಕ ದಳ ಭೇಟಿ ನೀಡಿ ಪರೀಶೀಲನೆ
Invigilator visits exam center and inspects
ಪರೀಕ್ಷಾ ಕೇಂದ್ರಕ್ಕೆ ವಿಚಕ್ಷಕ ದಳ ಭೇಟಿ ನೀಡಿ ಪರೀಶೀಲನೆ
ಕಂಪ್ಲಿ 10: ಸ್ಥಳೀಯ ಕೊಟ್ಟಾಲ್ ರಸ್ತೆಯ ವಿನೂತನ ಮಹಿಳಾ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ 6ನೇ ಸೆಮಿಕ್ಷರ್‌ನ ಇತಿಹಾಸ ವಿಷಯದ ಪರೀಕ್ಷಾ ಕೇಂದ್ರಕ್ಕೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪರೀಕ್ಷಾ ವಿಚಕ್ಷಕ ದಳದ ಅಧ್ಯಕ್ಷರು ಮತ್ತು ಸದಸ್ಯರುಗಳು ಭೇಟಿ ನೀಡಿ, ಪರೀಶೀಲಿಸಿದರು. ನಂತರ ವಿಚಕ್ಷಕ ದಳದ ಅಧ್ಯಕ್ಷ ತಿರುಪತಿ ಹೆಚ್ ಮಾತನಾಡಿ, ಜೂ.2ರಿಂದ ಬಿಎ ಮತ್ತು ಬಿಕಾಂನ 2 ಮತ್ತು 4 ಹಾಗೂ 6ನೇ ಸೆಮಿಸ್ಟರ್ ಪರೀಕ್ಷೆಗಳು ಆರಂಭಗೊಂಡಿದ್ದು, ಮಂಗಳವಾರ ನಡೆದ ಇತಿಹಾಸ ವಿಷಯದ ಪರೀಕ್ಷೆ ಶಾಂತಿಯುತವಾಗಿ ಜರುಗಿದೆ. ಇಲ್ಲಿನ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದಾಗ ವಿದ್ಯಾರ್ಥಿನಿಯರು ಸುಸೂತ್ರವಾಗಿ ಪರೀಕ್ಷೆ ಬರೆಯಲು ಸಿಸಿ ಕ್ಯಾಮರ ಸೇರಿದಂತೆ ಎಲ್ಲಾ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಇಲ್ಲಿನ ಪರೀಕ್ಷೆಯಲ್ಲಿ ಯಾವುದೇ ನಕುಲು ಮಾಡಲು ಅವಕಾಶ ನೀಡದೇ, ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದು ಕಂಡು ಬಂದಿದೆ. ಕಳೆದ ಎರಡು ಮೂರು ವರ್ಷಗಳಿಂದ ಪರೀಕ್ಷಾ ವಿಭಾಗದಲ್ಲಿ ಉತ್ತಮವಾದ ಆಡಳಿತವನ್ನು ಮಾಡಿಕೊಂಡು ಬಂದಿದಾರೆ. ಮತ್ತು ಸಕಾಲದಲ್ಲಿ ವಿದ್ಯಾರ್ಥಿನಿಯರಿಗೆ ವಿದ್ಯಾಬ್ಯಾಸಕ್ಕೆ ಅನುಕೂಲ ಮಾಡಿಕೊಟ್ಟು, ಶಾಂತಿಯುತವಾಗಿ ಪರೀಕ್ಷೆಯೊಂದಿಗೆ ಉತ್ತಮ ಫಲಿತಾಂಶ ನೀಡಿ, ವಿದ್ಯಾರ್ಥಿನಿಯರಿಗೆ ಮುಂದಿನ ಉನ್ನತ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು. ಈ ಸಂದರ್ಭದಲ್ಲಿ ವಿಚಕ್ಷಕ ದಳದ ಸದಸ್ಯರಾದ ಡಾ.ಬಸಮ್ಮ ಶಿಗ್ಗಾವಿ, ಸುಧಾಕರ್, ಪ್ರಾಚಾರ್ಯ ಬಿ.ಮದ್ದಾನೆಪ್ಪ ಇದ್ದರು. ಜೂ 002ಬಿ.ಎ.ಬಿ.ಕಾಂ ಸೆಮಿಸ್ಟರ್ ಪರೀಕ್ಷಾ ಕೇಂದ್ರಕ್ಕೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪರೀಕ್ಷಾ ವಿಚಕ್ಷಕ ದಳದ ಅಧ್ಯಕ್ಷ ತಿರುಪತಿ ಹಾಗೂ ಸದಸ್ಯರು ಭೇಟಿ ನೀಡಿ, ಪರೀಶೀಲಿನೆ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ 