ಅಂತರಾಷ್ಟ್ರೀಯ ವಿಚಾರ ಸಂಕೀರಣ: ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಅನುಗುಣವಾಗಿ ಜ್ಞಾನಾರ್ಜನೆ ಅಗತ್ಯ

ಅಂತರಾಷ್ಟ್ರೀಯ ವಿಚಾರ ಸಂಕೀರಣ: ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಅನುಗುಣವಾಗಿ ಜ್ಞಾನಾರ್ಜನೆ ಅಗತ್ಯ International symposium: Students need to acquire knowledge in line with technology

ರಾಣೇಬೆನ್ನೂರು 14 : ಹೊಸ ಹೊಸ ಆವಿಸ್ಕಾರಗಳ ಇಂದಿನ ವ್ಯವಸ್ಥೆಯಲ್ಲಿ ಪರಸ್ಪರ ವಿಚಾರ ವಿನಿಮಯಗಳ ಮೂಲಕ ವಿಷಯ ಸಮಸ್ಯೆಗಳ ಪರಿಹಾರಕ್ಕೆ ತುಂಬಾ ಸಹಕಾರಿಯಾಗಲಿದೆ. ಇಂತಹ ಸೆಮಿನಾರ್ಗಳು ಮೇಲಿಂದ ಮೇಲೆ ನಡೆದಾಗ ಮಾತ್ರ ಬೌದ್ಧಿಕ ವಿಕಾಸತೆಯ ಜೊತೆಗೆ ಶೈಕ್ಷಣಿಕ ಕೌಶಲ್ಯ ಮತ್ತಷ್ಟು ಹೆಚ್ಚಿಸಿಕೊಳ್ಳಲು ಸಾಧ್ಯವಾಗುವುದು ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು. ಅವರು ಶುಕ್ರವಾರ ನಗರ ಹೊರವಲಯದ ಆರ್‌. ಟಿ.ಇ.ಎಸ್  ಪದವಿ ಮಹಾವಿದ್ಯಾಲಯದಲ್ಲಿ ತಮಿಳುನಾಡು ಸತ್ಯಂ ಶಿವಂ ಸುಂದರಂ ವಿದ್ಯಾಲಯ, ಧಾರವಾಡ ಉನ್ನತಿ ಎಜುಕೇಶನ್ ಟ್ರಸ್ಟ್‌ ಸಹಯೋಗದಿಂದ ಸಮಾಜಶಾಸ್ತ್ರ ವಿಭಾಗವು ಆಯೋಜಿಸಿದ್ದ, ಅಂತರಾಷ್ಟ್ರೀಯ ವಿಚಾರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.   

ಜ್ಞಾನ,ವಿಜ್ಞಾನ ಮತ್ತು ತಂತ್ರಜ್ಞಾನ ಅತ್ಯಂತ ವೇಗವಾಗಿ ಬೆಳೆಯುತ್ತಲಿದೆ ಅದಕ್ಕೆ ಅನುಗುಣವಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಮಾನಾಂತರವಾಗಿ ಜ್ಞಾನಾರ್ಜನೆ ಹೊಂದುವುದು ಸಹ ಇಂದಿನ ಅಗತ್ಯವಾಗಿದ್ದು, ಇಂತಹ ಅಂತರಾಷ್ಟ್ರೀಯ ವಿಚಾರ ಸಂಕಿರಣಗಳು ಪ್ರಗತಿಯ ದಿಕ್ಸೂಚಿ ನೀಡಲಿವೆ ಎಂದರು. ಮುಖ್ಯ ಅತಿಥಿಯಾಗಿದ್ದ ಸಂಸ್ಥೆಯ ಅಧ್ಯಕ್ಷ ಡಾ. ಸಂಜಯ ಸಾಹುಕಾರ ಅವರು ಶೈಕ್ಷಣಿಕ ವಿಷಯವಾಗಿ ಮತ್ತು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ತಮ್ಮ ಸಂಸ್ಥೆ ಕಳೆದ 59 ವರ್ಷಗಳಿಂದ ಸೇವಿ ಸಲ್ಲಿಸುತ್ತಾ ಬಂದಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯೇ ನಮ್ಮ ಧ್ಯೇಯ ವಾಕ್ಯವಾಗಿದೆ ಅದಕ್ಕಾಗಿ ಎಲ್ಲಾ ರೀತಿಯ ಅನುಕೂಲತೆಗಳನ್ನು ಸಂಸ್ಥೆಯು  ಕಲ್ಪಿಸಿಕೊಡುವದಾಗಿ ಹೇಳಿದರು.  

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ. ಸಿ. ಎ. ಹರಿಹರ ಅವರು, ತಮ್ಮ ಕಾಲೇಜು ಇತ್ತೀಚಿಗಷ್ಟೇ ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳ ಜೊತೆಗೆ ಶೈಕ್ಷಣಿಕ ಪ್ರಗತಿಗಾಗಿ, ಪರಸ್ಪರ ಒಡಂಬಡಿಕೆ ಮಾಡಿಕೊಂಡಿದ್ದು, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಸಹ ಬೇರೆ ದೇಶಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯಬಹುದು ಎನ್ನುವ ದೂರ ದೃಷ್ಟಿ ಇಟ್ಟುಕೊಂಡು ಸಾಗಿದೆ ಎಂದರು.  ವಿಚಾರ ಸಂಕಿರಣದಲ್ಲಿ ಧಾರವಾಡ ಕವಿವಿ ಡಾ. ಅಂಬೇಡ್ಕರ್ ಅಧ್ಯಯನ ಪೀಠದ ಸುಭಾಸ್ ನಾಟಿಕರ, ಪ್ರೊ, ಸಂಗೀತಾ ಮಾನೆ, ಡಾ, ಎಂ. ಎಂ. ಹೆಬ್ಬಾಳದ, ಡಾ, ಸೆಲ್ವಿ, ಡಾ, ಆನಂದ ಖಾನಪೇಟ, ಐಕ್ಯೂಎಸಿ ಸಂಯೋಜಕ ಡಾ, ಮಧುಕುಮಾರ ಆರ್, ಸೇರಿದಂತೆ ವಿವಿಧ ವಿದ್ಯಾಲಯಗಳ ಬೋಧಕರು ಪರಸ್ಪರ ವಿಚಾರ ವಿನಿಮಯ ಮಾಡುವುದರ ಮೂಲಕ ವಿಚಾರ ಸಂಕಿರಣ ಯಶಸ್ವಿಗೊಳಿಸಿದರು.  ಈ ವಿಚಾರ ಸಂಕಿರಣದಲ್ಲಿ ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳ ಡಾ, ಶಿವಕುಮಾರ್ ಸೋಮ ಸುಂದರಂ, ಗುಡಿನಾ ಗೋಬೆನಾ ಉಸೋಮಿಯಾ, ಡಾ. ಎಸ್  ನೇಹರು, ಮೊದಲಾದವರು ಪಾಲ್ಗೊಂಡು ವಿನಿಮಯ ನಡೆಸಿದರು. ಕು. ಲಕ್ಷ್ಮಿ ಮತ್ತು ಪ್ರವೀಣ್ ಲಮಾಣಿ ಪ್ರಾರ್ಥಿಸಿದರು. ಡಾಕ್ಟರ್ ಮಾಲತೇಶ ಪೂಜಾರ, ಸ್ವಾಗತಿಸಿ, ಶಿವಕುಮಾರ ಬೆಣ್ಣಿ ನಿರೂಪಿಸಿ ವಂದಿಸಿದರು. 


Seminar International Conference Knowledge Science and Technology RTES Degree College