ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಜಾಗೃತಿ ಜಾಥಾ

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಜಾಗೃತಿ ಜಾಥಾ International Day of Democracy: Awareness rally

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಜಾಗೃತಿ ಜಾಥಾ 

ಮುದ್ದೇಬಿಹಾಳ, 15 ; ಪ್ರಜೆಗಳೇ ಪ್ರಜೆಗಳಿಗಾಗಿ ಆಳ್ವಿಕೆ ಮಾಡಿಕೊಳ್ಳುವ ವ್ಯವಸ್ಥೆಯಾದ ಪ್ರಜಾಪ್ರಭುತ್ವ ಇಡೀ ವಿಶ್ವದಲ್ಲಿ ಬಹು ದೊಡ್ಡ ಅಸ್ತ್ರವಾಗಿದೆ ಈ ಹಿನ್ನೇಲೆಯಲ್ಲಿ ನಾವೇಲ್ಲ ಭಾರತೀಯರು ಈ ಪ್ರಜಾಪ್ರಭುತ್ವವನ್ನು, ಸಂವಿದಾನವನ್ನು ಅತ್ಯಂತ ಗೌರವದಿಂದ ಕಾಣುವಂತಾಗಬೇಕು ಎಂದು ದಲಿತ ಮುಖಂಡ ಹರೀಷ ನಾಟಿಕಾರ ಹೇಳಿದರು. 

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ಪಟ್ಟಣದ ಡಾ, ಬಿ ಆರ್ ಅಂಬೇಡ್ಕರವರ ವೃತ್ತದಲ್ಲಿ ಡಾ, ಬಿ ಆರ್ ಅಂಬೇಡ್ಕರವರ ವೃತ್ತದಲ್ಲಿ ತಾಲೂಕಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ದಲ್ಲಿ ಬಾಗವಹಿಸಿ ಅವರು ಮಾತನಾಡಿದರು.  ಭಾರತ ದೇಶವು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಮುನ್ನಡೆಯುತ್ತಿರುವ ಮಹಾನ್ ದೇಶವಾಗಿದೆ. ದೇಶದ ಭದ್ರಭುನಾದಿಗೆ ಪ್ರಜಾಪ್ರಭುತ್ವವೇ ಪ್ರಮುಖ ಅಡಿಗಲ್ಲಾಗಿದೆ. ಜಾತ್ಯಾತೀತ, ಧರ್ಮಾತೀತ ಮತ್ತು ಪಕ್ಷಾತೀತಾಗಿರುವ ಪ್ರಜಾಪ್ರಭುತ್ವವನ್ನು ಮನನ ಮಾಡಿಕೊಳ್ಳುವ ದೃಷ್ಠಿಯಿಂದ ಈ ದಿನವನ್ನು ಆಚರಿಸಲಾಗುತ್ತದೆ. ಇತ್ತಿಚಿಗೆ ಈ ಪ್ರಜಾಪ್ರಭುತ್ವದ ವ್ಯವಸ್ಥೆಯ ದಿಕ್ಕನ್ನೆ ಬದಲಿಸುವ ಹುನ್ನಾರ ನಡೆಯುತ್ತಿರುವ ಕೆಲ ಘಟನೆಗಳು ಸಂವಿದಾನ ವಿರೋಧಿ ನೀತಿಯನ್ನೇ ವಿರೋಧಿಸಿದಂತಾಗುತ್ತದೆ ಸಧ್ಯ ಇದಕ್ಕೆ ಸಾಮೂಹಿಕ ಸಹಭಾಗಿತ್ವ ದೊರಕಿರುವುದು ಶ್ಲಾಘನೀಯ ಎಂದರು. 

  ಈ ವೇಳೆ ಕಾಂಗ್ರೇಸ್ ಮುಖಂಡ ವಾಯ್ ಎಚ್ ವಿಜಯಕರ ಅವರು ಮಾತನಾಡಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಿಂದಾಗಿ ನಾವೆಲ್ಲರೂ ಒಂದಾಗಿದ್ದೇವೆ, ಒಗ್ಗಟ್ಟಾಗಿದ್ದೇವೆ. ಈ ಕಾರ್ಯಕ್ರಮದ ಮೂಲಕವಾಗಿ ಭಾರತದಷ್ಟು ಅತ್ಯುತ್ತಮವಾದ ಪ್ರಜಾಪ್ರಭುತ್ವ ರಾಷ್ಟ್ರ್ರ ಮತ್ತೊಂದಿಲ್ಲ ಎನ್ನುವುದನ್ನು ವಿಶ್ವಕ್ಕೆ ಸಾರಿದಂತಾಗಿದೆ. 

ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಸಮಾನತೆಯನ್ನು ಎತ್ತಿ ತೋರಿಸುವ ಉದ್ದೇಶದೊಂದಿಗೆ ಪ್ರಜಾಪ್ರಭುತ್ವದ ದಿನಾಚರಣೆ ಪ್ರಯುಕ್ತ ಇಂದು ಎಲ್ಲ ಸರಕಾರಿ ಇಲಾಖೆ ಅಧಿಕಾರಿಗಳ, ಸಾರ್ವಜನಿಕರ, ಮುಖಂಡರ ಸಮ್ಮುಖದಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳುವ ಮೂಲಕ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯ ಸಂಗ್ರಾಮದ ನೆನಪುಗಳನ್ನು ಮೆಲುಕು ಹಾಕಿಕೊಳ್ಳುವ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮ ಪೂರಕವಾಗಿದೆ ಎಂದರು. 

ಪ್ರಪಂಚದ 162 ದೇಶಗಳಲ್ಲಿಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಸೆ.15ರಂದು ಆಚರಿಸಲಾಗುತ್ತದೆ. ದೇಶ ಹಾಗೂ ರಾಜ್ಯದಲ್ಲಿಕಳೆದ ಮೂರು ವರ್ಷದಲ್ಲಿ ಈ ದಿನವನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಲಾಗುತ್ತಿದೆ. ಕಳೆದ ವರ್ಷ ರಾಜ್ಯದಲ್ಲೇ ಅತ್ಯಂತ ಅದ್ಧೂರಿಯಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜ್ಯ ಸರಕಾರವು 'ನಮ್ಮ ಮತ ನಮ್ಮ ಹಕ್ಕು' ಘೋಷಣೆಯಡಿಯಲ್ಲಿ ಪ್ರಜಾಪ್ರಭುತ್ವವನ್ನು ಆಚರಿಸುವ ಮೂಲಕ ನಾವೆಲ್ಲರೂ ಒಟ್ಟಿಗೆ ಇರೋಣ. ಸಧ್ಯ ಈ ಪ್ರಜಾಪ್ರಭುತ್ವ ಆಚರಣೆಯ ಜಾಗೃತಿ ಅಭಿಯಾಯನವು ಯಶಸ್ವಿಯಾಗಿ ಗುರಿ ತಲುಪಲಿ ಎಂದು ಹಾರೈಸಿದರು.  

ಪುರಸಭೆ ಅಧ್ಯಕ್ಷ ಮೃಹಿಬೂಬ ಗುಳಸಂಗಿ,ಮಲ್ಲು ತಳವಾರ, ಬಲಭೀಮ ನಾಯಕಮಕ್ಕಳ,ಬಸವರಾಜ ಪೂಜಾರ,ಎಸ್ ಆರ್ ಕಟ್ಟಿಮನಿ,ಪ್ರಕಾಶ್ ಸರೂರ,ಪುರಸಭೆ ಸದಸ್ಯ ಶಿವೂ ಶಿವಪೂರ,ಹಣಮಂತ ನಾಯಕಮಕ್ಕಳ,ಪುರಸಭೆ ಸದಸ್ಯ ಹಣಮಂತ ಭೋವಿ,ಚನ್ನಪ್ಪ ವಿಜಯಕರ,ಪ್ರಶಾಂತ ಕಾಳೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಸಂತಿ ಮಠ,ತಾಪಂ ಅಧಿಕಾರಿ ವೆಂಕಟೇಶ್ ವಂದಾಲ,ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಎಸ್ ಸಾವಳಗಿ,ಅಕ್ಷರ ದಾಸೋಹ ಅಧಿಕಾರಿ ಎಂ ಎಂ ಬೆಳಗಲ್,ಸಕ9ಲ ಪವಾನ ತಳವಾರ, ಮಹಾಂತೇಶ್ ಕಟ್ಟಿಮನಿ ಜಾವಿಧ ನಾಯ್ಕೋಡಿ, ಸಂಗಣ್ಣ ವಾಲಿಕಾರ, ಸೇರಿದಂತೆ ಹಲವರು ಇದ್ದರು.