ವಿಪತ್ತು ಅಪಾಯ ಕಡಿತ ಅಂತರಾಷ್ಟ್ರೀಯ ದಿನಾಚರಣೆ

ವಿಪತ್ತು ಅಪಾಯ ಕಡಿತ ಅಂತರಾಷ್ಟ್ರೀಯ ದಿನಾಚರಣೆ International Day for Disaster Risk Reduction

ವಿಪತ್ತು ಅಪಾಯ ಕಡಿತ ಅಂತರಾಷ್ಟ್ರೀಯ ದಿನಾಚರಣೆ 

ಧಾರವಾಡ 14: ಅಕ್ಟೋಬರ 13 ರಂದು ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಶಿಯೇಶನ್ ಆಫ್ ಇಂಡಿಯಾ ಧಾರವಾಡ ಶಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಧಾರವಾಡ,  ಇವರುಗಳ  ಸಂಯುಕ್ತ ಆಶ್ರಯದಲ್ಲಿ   ವಿಪತ್ತು ಅಪಾಯ ಕಡಿತ ಅಂತರಾಷ್ಟ್ರೀಯ ದಿನಾಚರಣೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.   

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮತ್ತು ಜಿಲ್ಲಾ ವಿಪತ್ತು ನಿರ್ವಹನಾ ಸಮಿತಿ ಸದಸ್ಯರಾದ ಡಾ. ಎಸ್‌.ಎಮ್‌. ಹೊನಕೇರಿ, ಇಂದಿನ ದಿನಗಳಲ್ಲಿ ಅನೇಕ ವಿಪತ್ತುಗಳು ಎದುರಾಗುತ್ತಿದ್ದು ಇವುಗಳನ್ನು ಸಮರ್ಥವಾಗಿ ಎದುರಿಸಬೇಕಾದರೆ ಸ್ಥಳಿಯ ಸಮುದಾಯವನ್ನು ಸಬಲಿಕಣಗೋಳಿಸುವದು ಅತೀಮುಖ್ಯವಾಗಿದೆ. ಇತರೆ ಸೇವೆಗಳಂತೆ ವಿಪತ್ತಿನಲ್ಲಿ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಸೇವೆಗಳು ಅತ್ಯವಶ್ಯಕ ಎಂಬುದು ಕೋವಿಡ್ ಸಮಯದಲ್ಲಿ ಎಲ್ಲರಿಗೂ ಮನವರಿಕೆಯಾಗಿದೆ. ವಿಪತ್ತು ಅಪಾಯ ಕಡಿತ ಅಂತರಾಷ್ಟ್ರೀಯ ದಿನಾಚರಣೆಯ ಈ ವರ್ಷದ ಘೋಷಣೆ "ನಿಧಿಯ ಸ್ಥಿತಿಸ್ಥಾಪನೆ, ವಿಪತ್ತುಗಳನ್ನಲ್ಲ" ಎಂಬುದಾಗಿದೆ. ಅಂದರೆ ವಿಪತ್ತು ನಿರ್ವಹಣೆ ಕುರಿತು ಪೂರ್ವತಯಾರಿ ಮಾಡಿಕೊಂಡರೆ ವಿಪತ್ತಿನ ಸಂದರ್ಭದಲ್ಲಿ ಕಡಿಮೆ ಹಣದಲ್ಲಿ ವಿಪತ್ತು ನಿರ್ವಹಣೆ ಮಾಡಬಹುದಾಗಿದೆ. ಈ ದೇಶೆಯಲ್ಲಿ ಎಫ್‌.ಪಿ.ಎ.ಐ. ಉತ್ತಮ ಕಾರ್ಯ ಮಾಡುತ್ತಿದೆ, ಎಲ್ಲ ಸೇರಿ ವಿಪತ್ತು ನಿರ್ವಹಣೆ ಕಾರ್ಯ ಮಾಡೋಣವೆಂದು ಕರೆನೀಡಿದರು. 

ಎಫ್‌.ಪಿ.ಎ.ಐ ನ ಜನರಲ್ ಮ್ಯಾನೇಜರ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಾ ವಿಪತ್ತು ಅಪಾಯ ಕಡಿತ ಅಂತರಾಷ್ಟ್ರೀಯ ದಿನಾಚರಣೆಯ ಎರಡು ಪ್ರಮುಖ ಅಂಶಗಳಾದ ವಿಪತ್ತು ಅಪಾಯ ಕಡಿತಕ್ಕೆ ಹಣವನ್ನು ಹೆಚ್ಚಿಸುವದು ಮತ್ತು ಎಲ್ಲ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಗಳು ಅಪಾಯ ಮಾಹಿತಿ ಮತ್ತು ಸ್ಥಿತಿಸ್ಥಾಪಕತ್ವ ಖಚಿತಪಡಿಸಿಕೊಳ್ಳುವದನ್ನ ಒಳಗೊಂಡಿದೆ. ಕಡಿಮೆ ಅಂದಾಜು ಮತ್ತು ಸಮರ್ಥನಿಯವಲ್ಲದ ವಿಪತ್ತುಗಳು, ಆರ್ಥಿಕ ಸಮೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಹೆಚ್ಚುತ್ತಿರುವ ಬೆದರಿಕೆಯಾಗಿದೆ. ವಿಪತ್ತುಗಳು ದೇಶಗಳನ್ನು  ಸಾಲದ ಸುಳಿಗೆ ತಳುತ್ತಿವೆ, ಕಡಿಮೆ ಆದಾಯ, ಹೆಚ್ಚಿದ ವಿಮೆ ಮತ್ತು ವಿಪತ್ತುಗಳು ಪುನಾರ್ವತಿಸುತ್ತಿವೆ. ಅಲ್ಲದೇ ಅಂತರಾಷ್ಟ್ರೀಯ ನೇರವು ಕ್ಷೀಣಿಸುತ್ತಿರುವದು ವಿಪತ್ತು ನಷ್ಟ  ತಡೆಗೆ ಇನ್ನಷ್ಟ ನಿರ್ಣಾಯಕವಾಗಿದೆ. ವಿಪತ್ತು ಅಪಾಯ ಕಡಿತಕ್ಕೆ ಹಣಕಾಸು ಕಡಿಮೆಗೋಳಿಸುವದರಿಂದ ಭವಿಷ್ಯದಲ್ಲಿ ಹೆಚ್ಚು ದುಬಾರಿ ವಿಪತ್ತುಗಳಿಗೆ ಕಾರಣವಗುತ್ತದೆ. ಮಾನವೀಯ ನೇರವುಗಳನ್ನು ಅಗತ್ಯತೆ ಹೆಚ್ಚುತ್ತದೆ. ಹೀಗಾಗಿ ವಿಪತ್ತು ವೆಚ್ಚ ಕಡಿಮೆ ಮಾಡಲು ದೇಶಗಳು ವಿಪತ್ತು ಅಪಾಯ ಕಡಿತಕ್ಕೆ ಹಣವನ್ನು ಹೆಚ್ಚಿಸಬೇಕು. ಎಲ್ಲ ಅಭಿವೃದ್ಧಿ ಹೂಡಿಕೆಗಳು ಅಪಾಯದ ಮಾಹಿತಿ-ಎಚ್ಚರಿಕೆ ವ್ಯವಸ್ಥೆ ಮತ್ತು ಚಿಹ್ನೆಗಳನ್ನು ಒಳಗೊಳುವದನ್ನು ಖಚಿತಪಡಿಸಿಕೊಳ್ಳಬೇಕು. ಈ ದೇಶೆಯಲ್ಲಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಪೂರ್ವ ಸನ್ನದತೆ ಯೋಜನೆ ರೂಪಿಸುವದು, ಸಾಮಾಜಿಕ ಸಂಕೀರ್ಣ ವ್ಯವಸ್ಥೆಯನ್ನು ಬಲಪಡಿಸುವದು, ಆರೋಗ್ಯ ಶಿಕ್ಷಣ ಮತ್ತು ಕಾರ್ಯಕ್ರವನ್ನು ಯೋಜಿಸುವದು, ಸಮುದಾಯವನ್ನು ಸಂಘಟಿಸುವದು, ಹೊಸ ನಿರ್ಮಾಣಗಳು ಅಪಾಯವನ್ನು ತಡೆದುಕೊಳ್ಳುವಂತೆ ರೂಪಿಸುವದು, ಮುನ್ನೂಚನೆ ಎಚ್ಚರಿಕೆ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರವಹಿಸಬೇಕಾಗಿದೆ. ಈ ದೇಶೆಯಲ್ಲಿ ಎಫ್‌.ಪಿ.ಎ.ಐ. ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಕನಿಷ್ಟ ಸೇವಾ ಪ್ಯಾಕೇಜ ಯೋಜನೆಯ ಅಡಿಯಲ್ಲಿ ಜಿಲ್ಲೆ ಎಲ್ಲ ಪ್ರಾಥಮಿಕ ಕೇಂದ್ರದ ವೈಧ್ಯಾದಿಕಾರಿಗಳಿಗೆ, ಆಪ್ತಸಮಾಲೊಚರಿಗೆ, ಆಶಾ ಕಾರ್ಯಕರ್ತರಿಗೆ ಮತ್ತು ಸ್ವಯಂಸೇವಾ ಪ್ರತಿನಿಧಿಗಳಿಗೆ ಮತ್ತು ಯುವಜನರಿಗೆ  ನಿರಂತರವಾಗಿ ತರಬೇತಿ ನೀಡಿ ಸನ್ನದ್ಧಗೋಳಿಸಲಾಗಿದೆ ಎಂದು ಅಭಿಪ್ರಾಯಪಟ್ಟರು. 

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಾದ ಡಾ. ಮಹೇಶ ಚಿತ್ತರಗಿ, ಡಾ. ಸುಜಾತಾ ಹಸವಿಮಠ, ಡಾ. ಎಸ್‌. ಕಳಸೂರಮಠ, ಡಾ. ಮಂಜುನಾಥ ಎಸ್‌. ಡಾ. ರವಿಂದ್ರ, ಡಾ. ಎ.ಎಸ್‌. ಮಜ್ಜಗಿ ಮತ್ತು ತಾಲೂಕ ವೈದ್ಯಾಧಿಕಾರಿಗಳಾದ  ಡಾ. ತನುಜಾ, ಡಾ. ರಾಜೇಂದ್ರ ಮತ್ತು ಧಾರವಾಡ ಜಿಲ್ಲೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳು ಮತ್ತು ಸ್ವಯಂಸೇವಾ ಸಂಸ್ಥೆಯ ಪ್ರತಿನಿಧಿಗಳು ಸೇರಿದಂತೆ 58 ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದರು.