ಅಂತರ ಶಾಲಾ ವಿಜ್ಞಾನ ಮೇಳ : ಕಾರ್ಯಕ್ರಮ ಯಶಸ್ವಿ:ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

ಅಂತರ ಶಾಲಾ ವಿಜ್ಞಾನ ಮೇಳ : ಕಾರ್ಯಕ್ರಮ ಯಶಸ್ವಿ:ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ Inter-school Science Fair: Program a success: Prize distribution to students

                           ಕೊಪ್ಪಳ 01 : ಶೈಕ್ಷಣಿಕ ವಿದ್ಯಾಭ್ಯಾಸ ಮತ್ತುಸಂಶೋಧನೆಯಸಂಯೋಜನೆಯನ್ನು ಉತ್ತೇಜಿಸುವುದಕ್ಕಾಗಿ ಹೊಸಪೇಟೆ ಅಂತರ-ಶಾಲಾ ವಿಜ್ಞಾನ ಮೇಳವನ್ನು  ಶನಿವಾರ ದಂದು ಪಕ್ಕದ ವಿಜಯನಗರ ಜಿಲ್ಲೆ ಹೊಸಪೇಟೆ ನಗರದಅಂಜುಮನ್ ಶಾದಿ ಮಹಲ್ನಲ್ಲಿ ಯಶಸ್ವಿಯಾಗಿ ಮತ್ತು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿತ್ತು ,ಈ ವಿಜ್ಞಾನ ಮೇಳವು ಸಂಶೋಧನೆ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಲು ಹಾಗೂ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಆಯೋಜಿಸಲಾಗಿದ್ದು, ಇದರ ಉದ್ಘಾಟನೆಯನ್ನು ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್‌ಏನ್‌ಎಫ್ ಇಮಾಮ್ ನಿಯಾಜಿ ರವರು ನೆರವೇರಿಸಿ  ಮಾತನಾಡಿ ವಿದ್ಯಾರ್ಥಿ ಗಳು ಸತತ ಪರಿಶ್ರಮದಿಂದ ಯಶಸ್ವಿ ಕಾಣಲು ಸಾಧ್ಯವಾಗಿದೆ , ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂದಿದೆಎಂದು ವಿವರಿಸಿದರು.

                        ವಿದ್ಯಾರ್ಥಿಗಳ ಪರಿಶ್ರಮಕ್ಕೆ ಸಹಕರಿಸಿದ ಶಿಕ್ಷಕರ ವರ್ಗಕ್ಕೂ ಮತ್ತು ಪಾಲಕರ ವರ್ಗಕ್ಕೂ ಅಭಿನಂದಿಸಿದರು, ಮ್ಯಾನೇಜಿಂಗ್ ಕಮಿಟಿ, ಮಸ್ಕಿದ್‌-ಎ-ತಯ್ಯಬಾ ವತಿಯಿಂದ ಎ.ಜೆ. ಅಕಾಡೆಮಿ ಫಾರ್ ರಿಸರ್ಚ್‌ ಅಂಡ್ ಡೆವಲಪ್ಮೆಂಟ್ ಇವರ ಸಹಯೋಗದಲ್ಲಿ ಜರುಗಿದ ಈ ಮೇಳದಲ್ಲಿ, 4 ರಿಂದ 10ನೇ ತರಗತಿಯವಿದ್ಯಾರ್ಥಿಗಳುಭಾಗವಸಿಈ ವಿಜ್ಞಾನ ಮೇಳದಲ್ಲಿ ಭೌತಿಕ ವಿಜ್ಞಾನ, ಜೈವಿಕ ವಿಜ್ಞಾನ ಮತ್ತು ಪರಿಸರ ವಿಜ್ಞಾನ ಎಂಬ ಮೂರು ವಿಭಾಗಗಳಲ್ಲಿ ನಗರದ ವಿವಿಧ ಶಾಲೆಗಳ ಸುಮಾರು ನೂರಾರು ವಿದ್ಯಾರ್ಥಿಗಳು ಸಂಶೋಧನೆ ಆಧಾರಿತ ಪ್ರಾಜೆಕ್ಟ್ಗಳನ್ನು ಪ್ರಸ್ತುತಪಡಿಸಿದರು,ಅವುಗಳಲ್ಲಿ ವೈಯಕ್ತಿಕ ಹಾಗೂ ಗುಂಪು ಪ್ರಾಜೆಕ್ಟ್‌ ಗಳು ಸೇರಿದೆ. ತಜ್ಞರ ಸಮಿತಿಯು ಅತ್ಯುತ್ತಮ ಯೋಜನೆಗಳಿಗೆ ಬಡಿಂಗ್ ಸೈಂಟಿಸ್ಟ್‌’, ’ಎಮರ್ಜಿಂಗ್ ಸೈಂಟಿಸ್ಟ್‌’ ಮತ್ತು ’ಯಂಗ್ ಸೈಂಟಿಸ್ಟ್‌’ ಎಂಬ ಪ್ರತಿಷ್ಠಿತ ಪ್ರಶಸ್ತಿಗಳು ಉತ್ತರಣೆ ಮಾಡಲಾಯಿತು.

                      ಭಾಗವಹಿಸಿದ ಎಲ್ಲಾ ಶಾಲೆಗಳು, ವಿದ್ಯಾರ್ಥಿಗಳು ಮತ್ತು ಮಾರ್ಗದರ್ಶಕ ಶಿಕ್ಷಕರಿಗೆ ಪ್ರಮಾಣಪತ್ರಗಳು  ನೀಡಲಾಯಿತುವಿಜ್ಞಾನ ಮೇಳವು ವೀಕ್ಷಿಸಲು ಅಂದು ಬೆಳಿಗ್ಗೆ ಇಂದಸಂಜೆ ವರೆಗೆ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಸಂಜೆ ವೇಳೆಗೆ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.ಸಂಸ್ಥೆಯ ಸಂಯೋಜಕರಾದ ಸೈಯದ್ ಫೇರೋಜ್ ಪೀರಾ ರವರು ಆರಂಭದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ವಿಜ್ಞಾನ ವಸ್ತು ಪ್ರದರ್ಶನದ ಮಾಹಿತಿ ನೀಡಿದರು, ಎ ಜೆ ಅಕಾಡೆಮಿಯ ನಿರ್ದೇಶಕರಾದ ಮೊಹಮ್ಮದ್ ಅಬ್ದುಲ್ಲಾ ಜಾವೀದ್ ರವರು ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಕಾರ್ಯಕ್ರಮ ಕುರಿತು ಮಾತನಾಡಿದರು, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮೊಹಮ್ಮದ್ ಅಕ್ರಂ ಶಾ ರವರು ವಿಶೇಷ ಆಮಂತ್ರಿಕರಾಗಿ ಪಾಲ್ಗೊಂಡಿದ್ದರು ,ನಂತರದ ವೇಳೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್, ಜಾನ್ವಿ ರವರು ಭೇಟಿ ಮಾಡಿ ವಿದ್ಯಾರ್ಥಿಗಳು ಸಿದ್ಧಪಡಿಸಿದ ವಿಜ್ಞಾನ ವಸ್ತು ಪ್ರದರ್ಶನವನ್ನು ವೀಕ್ಷಣೆ ಮಾಡಿ ತಮ್ಮ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು, ಕೊನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ವಿವಿಧ ಪ್ರಶಸ್ತಿ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಣೆ ಮಾಡಲಾಯಿತು,