ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ : 20 ಲಕ್ಷ ರೂ ಮೌಲ್ಯದ 12 ಬೈಕ್ ವಶಕ್ಕೆ

ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ : 20 ಲಕ್ಷ ರೂ ಮೌಲ್ಯದ 12 ಬೈಕ್ ವಶಕ್ಕೆ Inter-district bike thief arrested: 12 bikes worth Rs 20 lakh seized

            ಹುಬ್ಬಳ್ಳಿ 23 : ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳತನವಾಗಿದ್ದರ ಬಗ್ಗೆ ಪ್ರಕರಣ ದಾಖಲಾಗಿದ್ದು, ಸದರಿ ಕಳ್ಳತನ ಪ್ರಕರಣವನ್ನು ಭೇದಿಸಲು ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ, ಐಪಿಎಸ್ ಮತ್ತು ರವೀಶ್ ಸಿ.ಆರ್, ಡಿಸಿಪಿ (ಅ ಮತ್ತು ಸಂ) ರವರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ಉತ್ತರ ಉಪವಿಭಾಗದ ಎಸಿಪಿ ಶಿವಾನಂದ ಚಲವಾದಿ ನೇತೃತ್ವದಲ್ಲಿ ಕೇಶ್ವಾಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ರವರಾದ ಕೆ.ಎಸ್‌. ಹಟ್ಟಿ ಮತ್ತವರ ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡವೊಂದನ್ನು ರಚಿಸಲಾಗಿತ್ತು.  

              ಸದರಿ ತಂಡವು ತಕ್ಷಣ ಕಾರ್ಯಪ್ರವೃತ್ತರಾಗಿ ಘಟನೆಗೆ ಸಂಬಂಧಿಸಿದಂತೆ ಆರೋಪಿತನ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ, ಬೈಕ್ ಕಳ್ಳತನ ಮಾಡಿದ್ದ ಓರ್ವ ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತ ಆರೋಪಿಯು ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ ನಗರಗಳಲ್ಲಿ ಕಳ್ಳತನ ಮಾಡಿದ್ದ 7 ರಾಯಲ್ ಎನ್‌ಫೀಲ್ಡ್‌, 2 ಎನ್‌ಟಾರ್ಕ, 1 ಹೊಂಡಾ ಡಿಯೋ, 1 ಯಮಾಹಾ, ಮತ್ತು 1 ಬಜಾಜ ಪಲ್ಸರ್ ಸೇರಿದಂತೆ  ಒಟ್ಟು 20 ಲಕ್ಷ ರೂ ಮೌಲ್ಯದ ಒಟ್ಟು 12 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದು, ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. 

         ಸದರಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಧಾರವಾಡ ಉಪನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್, ಪಿಎಸ್‌ಐ ರವರಾದ ಮಾರುತಿ ಆರ್, ಬಾಬಾ ಎಎಮ್, ಹಾಗೂ ಸಿಬ್ಬಂದಿ ಜನರಾದ ಆನಂದ ಪೂಜಾರ, ಆನಂದ ಗೋವಣ್ಣವರ, ಅಮರೇಗೌಡಾ, ಚಂದ್ರು ಲಮಾಣಿ, ಮಹೇಶ ಬೆನ್ನೂರ, ಮಾರುತಿ ಬಸಣ್ಣವರ, ವಿಠಲ ಮಾದರ, ಬಸವರಾಜ ಅಂಗಡಿ ರವರುಗಳನ್ನು ಒಳಗೊಂಡ ತಂಡದ ಕಾರ್ಯವೈಖರಿಯನ್ನು ಮಾನ್ಯ ಪೋಲಿಸ್ ಆಯುಕ್ತರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.