ಜಾಣ್ಮೆ ಮತ್ತು ಆತ್ಮವಿಶ್ವಾಸ ಪ್ರತಿಯೊಬ್ಬರಲ್ಲಿ ಇರಬೇಕಾದ ಅಗತ್ಯವಿದೆ : ಶಾಸಕ ಪ್ರಕಾಶ್ ಕೋಳಿವಾಡ
Intelligence and self-confidence are essential for everyone: MLA Prakash Koliwada
ರಾಣೆಬೆನ್ನೂರು 29 : ಪರೀಕ್ಷೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಬಂದೇ ಬರುತ್ತದೆ. ಆದರೆ ಎದುರಿಸುವ ಜಾಣ್ಮೆ ಮತ್ತು ಆತ್ಮವಿಶ್ವಾಸ ಪ್ರತಿಯೊಬ್ಬರಲ್ಲಿ ಇರಬೇಕಾದ ಅಗತ್ಯವಿದೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು. ಅವರು ನಗರ ಹೊರ ವಲಯ ಕಮದೋಡ ಬಳಿಯ, ರೇನ್ಬೋ ಪದವಿ ಪೂರ್ವ ಕಾಲೇಜು ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ರೇನ್ಬೋ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ, ಪರೀಕ್ಷಾ ಭಯ ನಿವಾರಣಾಕ್ರಮ ಅರಿವು ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ಈ ಹಿಂದಿಗಿಂತಲೂ ಇಂದಿನ ದಿನಮಾನಗಳಲ್ಲಿ ಅಧಿಕವಾದ ಶಕ್ತಿ, ಮತ್ತು ಗ್ರಹಿಕಾ ಸಾಮರ್ಥ್ಯ ಇದೆ. ಸಾಮಾನ್ಯ ವಿಷಯ ಮತ್ತು ವಿಚಾರಗಳ ಮೂಲಕ ನಿಯಮಾನುಸಾರ ಅಧ್ಯಯನದಲ್ಲಿ ತೊಡಗಿಕೊಂಡರೆ ಅತ್ಯಂತ ಸರಳವಾಗಿ ಪರೀಕ್ಷೆಯನ್ನು ಎದುರಿಸಬಹುದಾಗಿದೆ ಎಂದರು.
ಎಸ್ ಎಸ್ ಎಲ್ ಸಿ ಮುಗಿದ ನಂತರ ಮುಂದೇನು ಎನ್ನುವ ಪ್ರಶ್ನೆ ನಮ್ಮನ್ನೇ ನಾವು ಮಾಡಿಕೊಳ್ಳಬೇಕಾಗಿದೆ. ಕಾರಣ ಜೀವನ ಬದುಕು ಇಂದು ಅಷ್ಟು ಸುಲಭವಲ್ಲ. ಶಿಕ್ಷಣದ ಜೊತೆ ಜೊತೆಗೆ ಸ್ವ ಸಾಮರ್ಥ್ಯ, ದೂರ ದೃಷ್ಟಿ, ವ್ಯಕ್ತಿತ್ವ ನಿರ್ಮಾಣ, ಮತ್ತು ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಇದರಿಂದ ಸಮಾಜದಲ್ಲಿ ಸಮಾನತೆ ಮತ್ತು ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಾಗುವುದು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ ಅವರು ಮಾತನಾಡಿ, ಕಾರ್ಯಗಾರಗಳ ಮೂಲಕ ವಿದ್ಯಾರ್ಥಿಗಳಲ್ಲಿರುವ ಪರೀಕ್ಷಾ ಭಯವನ್ನು ನಿವಾರಿಸಲು ಮತ್ತು ಪರೀಕ್ಷೆ ಎದುರಿಸುವುದು ಹೇಗೆ ಎನ್ನುವ ಕುರಿತಂತೆ ಬೇರೆ ಬೇರೆ ವಿಷಯಗಳ ಕುರಿತು, ಅನೇಕ ಶಿಬಿರಗಳು, ಆಯೋಜಿಸಲಾಗುತ್ತಿದೆ ವಿದ್ಯಾರ್ಥಿಗಳು. ಆತಂಕ ಮತ್ತು ಭಯ ಅನುಸರಿಸದೇ ಅತ್ಯಂತ ಜಾಣ್ಮೆ ಮತ್ತು ಸೂಕ್ಷ್ಮತೆಯಿಂದ ಪರೀಕ್ಷೆಯನ್ನು ಎದುರಿಸಬೇಕು ಎಂದು ಸಾಧ್ಯಂತವಾಗಿ ವಿವರಿಸಿ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಶ್ರೀಮತಿ ಲಲಿತಾ ಸುರೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶ್ ಮೋಟಗಿ, ನಾಗರಾಜ ಕಟ್ಟಿಮನಿ, ವೀರಣ್ಣ ಸಿ. ಟಿ, ಪ್ರಾಚಾರ್ಯರಾದ ಶ್ರೀಮತಿ ಸುಜಾತಾ ಎಸ್. ಸಿ, ಸಂಗಮೇಶ್ ಎಸ್. ಎಂ, ಸೇರಿದಂತೆ ಮತ್ತಿತರ ಗಣ್ಯರು ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.
"ಪರೀಕ್ಷೆ" ಎಂದಿಗೂ ಯುದ್ಧವಲ್ಲ. ಶಿಕ್ಷಕರು ನೀಡುವ ನಿತ್ಯದ ಪಾಠ, ಪ್ರವಚನಗಳು ಸಮರ್ಕ ಸರಿಯಾಗಿ ಅಂದಿನ ಪಾಠ ಅಂದೇ ಅರ್ಥ ಮಾಡಿಕೊಂಡರೇ, ಯಾವುದೇ ಭಯ ಬೇಡ ಅತ್ಯಂತ ಸರಳ ಮತ್ತು ಸಂಭ್ರಮದಿಂದ ಯಾವುದೇ ಪರೀಕ್ಷೆಯನ್ನು ಎದುರಿಸಲು ಸಾಧ್ಯವಿದೆ ಎಂದು ಸಂಪನ್ಮೂಲ ವ್ಯಕ್ತಿ ಎಂಆರ್ ಎಂ- ಪಿಯುಸಿ ಕಾಲೇಜಿನ ಪ್ರಾಚಾರ್ಯ ರಾಮ ಮೋಹನ್ ರಾವ್ ಅವರು ತಮ್ಮ ಪ್ರಾತ್ಯಕ್ಷತೆಯ ಮೂಲಕ ವಿದ್ಯಾರ್ಥಿಗಳಲ್ಲಿ "ಪರೀಕ್ಷಾ ಭಯ ದೂರ " ಕುರಿತು ಆತ್ಮವಿಶ್ವಾಸ ಮೂಡಿಸಿದರು. ಪರೀಕ್ಷೆ ಅರಿವು ಜಾಗೃತಿ ಕಾರ್ಯಗಾರದಲ್ಲಿ ನಗರ ಮತ್ತು ತಾಲೂಕಿನ 15ಕ್ಕೂ ಹೆಚ್ಚು ಪ್ರೌಢ ಶಾಲೆಗಳ 200 ಕ್ಕೂ ಹೆಚ್ಚು ಎಸ್. ಎಸ್. ಎಲ್. ಸಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಭೂಮಿಕಾ ಎಸ್,ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಜಗದೀಶ್ ಎಸ್. ನಾಯಕ ಸ್ವಾಗತಿಸಿ, ಸಂಸ್ಥಾಪಕ ಅಧ್ಯಕ್ಷ ಸುರೇಶ ಸಿ. ಟಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಲತೇಶ್ ಐ. ಕೆ. ನಿರೂಪಿಸಿ, ಆಕಾಶ್ ಎಸ್. ಸಿ. ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 