ಇಂಟ್ಯಾಕ್ ರಸಪ್ರಶ್ನೆ ಕಾರ್ಯಕ್ರಮ
Intac Quiz Program
ಇಂಟ್ಯಾಕ್ ರಸಪ್ರಶ್ನೆ ಕಾರ್ಯಕ್ರಮ
ಧಾರವಾಡ 05: ಇಂಟ್ಯಾಕ್ ಸಂಸ್ಥೆಯ ಧಾರವಾಡ ಘಟಕವು ಆಗಸ್ಟ್ 5 ರಂದು ಬೆಳಿಗ್ಗೆ 11-30 ಗಂಟೆಗೆ ಧಾರವಾಡ ಜೆ.ಎಸ್.ಎಸ್. ಕಾಲೇಜಿನ ಉತ್ಸವ ಸಭಾಂಗಣದಲ್ಲಿ ಪ್ರೌಢಶಾಲಾ ಮಕ್ಕಳಿಗಾಗಿ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಿತು. ಧಾರವಾಡ-ಹುಬ್ಬಳ್ಳಿಯ 12 ಶಾಲೆಗಳ 116 ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡಿದ್ದರು.
ಮೊದಲು ಲಿಖಿತ ರಸಪ್ರಶ್ನೆ ಸುತ್ತಿನಲ್ಲಿ 4 ತಂಡಗಳನ್ನು ಆಯ್ಕೆ ಮಾಡಲಾಯಿತು. ಮೌಖಿಕ ಅಂತಿಮ ಸುತ್ತಿನಲ್ಲಿ ನಾಲ್ಕು ತಂಡಗಳಿಗೆ ಆಲೂರ ವೆಂಕಟರಾವ್, ದ.ರಾ.ಬೇಂದ್ರೆ,ಚೆನ್ನವೀರ ಕಣವಿ ಮತ್ತು ರಾ.ಹ.ದೇಶಪಾಂಡೆ ಎಂದು ಹೆಸರಿಸಲಾಯಿತು. ಅಂತಿಮವಾಗಿ ರಾ.ಹ.ದೇಶಪಾಂಡೆ ತಂಡದ ರಾಜೀವ್ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯ ನಿಶ್ಚಿತಾ ಸಂಕಪ್ಪಗೋಳ ಮತ್ತು ಓಂಕಾರ ಜಿರಗೋಡ ಪ್ರಥಮ ಸ್ಥಾನ ಗಳಿಸಿದರು. ಆಲೂರ ವೆಂಕಟರಾವ ತಂಡದ ಅನ್ವಿ ಜಾಮದಾರ ಮತ್ತು ಶ್ರೇಯಾಂಕ ಈನೂರ ದ್ವೀತಿಯ ಸ್ಥಾನ ಗಳಿಸಿದರು. ವಿಜೇತರಿಗೆ ಬಹುಮಾನ ಮತ್ತು ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರಗಳನ್ನುನೀಡಲಾಯಿತು.ಲಿಖಿತ ರಸಪ್ರಶ್ನೆ ಕಾರ್ಯಕ್ರಮವನ್ನು ಪ್ರೊ.ಸುರೇಶ ಗುದಗನವರ ಹಾಗೂ ಮೌಖಿಕ ರಸಪ್ರಶ್ನೆಯನ್ನು ಡಾ.ಶಶಿಧರ ನರೇಂದ್ರ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಜಿ.ಸಿ.ತಲ್ಲೂರ, ಡಾ.ಹನುಮಾಕ್ಷಿ ಗೋಗಿ, ಡಾ.ಆರಿ್ಜ.ಪುರಾಣಿಕ, ಲತಾ ಶಹಾಪುರ, ಅಮೃತಾ ಜೋಶಿ, ರಶ್ಮಿ ಭಾರದ್ವಾಜ್, ಸಂಗೀತಾ ಜಾಯಿ, ವೀಣಾ ಜೋಶಿ, ಭಾರತಿ ಪಿಳ್ಳೆ,ಸವಿತಾ ಕುಲಕರ್ಣಿ, ಶಬೀರಾ ನಾಯ್ಕವಾಡಿ, ಚನ್ನಬಸಪ್ಪ ಬೆಣ್ಣಿ,ಮನುಕುಮಾರ ಹಿರೇಮಠ, ಸನ್ಮತಿ ದೊಡಮನಿ ಮುಂತಾದವರು ಇದ್ದರು.
ಇಂಟ್ಯಾಕ್ ಸಂಚಾಲಕ ಡಾ.ಮೋಹನ ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಚಾಲಕ ಆರಿ್ಜ.ತಿಮ್ಮಾಪುರ ಸ್ವಾಗತಿಸಿದರು. ಡಾ.ಎನ್.ಬಿ.ನಾಲತವಾಡ ನಿರೂಪಿಸಿದರು. ಡಾ.ರಾಜಶ್ರೀ ಗುದಗನವರ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 