ಗಣರಾಜ್ಯೋತ್ಸವ ಆಚರಣೆಗೆ ಸಿದ್ಧತೆಗೆ ಸೂಚನೆ: ತಹಶಿಲ್ದಾರ್ ಹತ್ತಳ್ಳಿ

ಗಣರಾಜ್ಯೋತ್ಸವ ಆಚರಣೆಗೆ ಸಿದ್ಧತೆಗೆ ಸೂಚನೆ: ತಹಶಿಲ್ದಾರ್ ಹತ್ತಳ್ಳಿ  Instructions for preparations for Republic Day celebrations: Tahsildar Hattalli


ಬೀಳಗಿ 08: ’ತಾಲ್ಲೂಕಿನಲ್ಲಿ ಜ.26ರಂದು ಸಡಗರದಿಂದ ಗಣರಾಜ್ಯೋತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ತಹಶಿಲ್ದಾರ್ ವಿನೋದ ಹತ್ತಳ್ಳಿ ಸೂಚಿಸಿದರು. ಇಲ್ಲಿನ ತಹಶಿಲ್ದಾರ್ ಕಚೇರಿ ಸಭಾಂಗ ಣದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ’ಗಣರಾಜ್ಯೋತ್ಸವ ಆಚರಣೆಗೆ ವಿವಿಧ ಸಮಿತಿ ರಚಿಸಲಾಗಿದೆ. ಅವು ತಮಗೆ ವಹಿಸಿದ ಜವಾಬ್ದಾರಿ ಸರಿಯಾಗಿ ನಿರ್ವಹಿಸಬೇಕು. ಎಲ್ಲ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು’ ಎಂದರು.

’ಗಣರಾಜ್ಯೋತ್ಸವ ಆಚರಣೆಗೆಪಟ್ಟಣದ ಎಲ್ಲ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳಿಗ್ಗೆ 8:15 ಕ್ಕೆ ಕರೆತರಬೇಕು. ನಂತರ ತಹಶಿಲ್ದಾರ್ ಕಾರ್ಯಾಲಯದ ಆವರಣದಲ್ಲಿ 9.15 ಕ್ಕೆ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಿಳಿಸಿ ಪಟ್ಟಣದ ವೃತ್ತಗಳನ್ನು ಶುಚಿಗೊಳಿಸಿ, ವಿದ್ಯುದ್ದೀಪಗಳಿಂದ ಅಲಂಕರಿಸಬೇಕು’ ಎಂದರು. ಜ.21 ರಂದು ಅಂಬಿಗರ ಚೌಡಯ್ಯನವರ ಜಯಂತಿ ಹಾಗೂ 25ರಂದು  ಸವಿತಾ ಮಹರ್ಷಿ ಅವರ ಜಯಂತಿಯನ್ನು ಮಹನೀಯರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕಅರ್ಥಪೂರ್ಣವಾಗಿ ತಹಶಿಲ್ದಾರ್ ಅವರ ಕಾರ್ಯಾಲಯದಲ್ಲಿ ಆಚರಿಸಲು ನಿರ್ಧರಿಸಿದರು. 

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದೇವೀಂದ್ರ ಧನಪಾಲ, ಸಿಡಿಪಿಒ ಬಿ.ಜಿ.ಕವಟೇಕರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿ.ಎಸ್‌. ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಮೀನಾಕ್ಷಿ ಕೋಟಿ, ದೈಹಿಕ ಶಿಕ್ಷಣ ಶಿಕ್ಷಕ ಎಸ್‌.ಎ.ಎತ್ತಿನಮನಿ, ಕ್ಷೇತ್ರ ಸಮನ್ವಯಾಧಿಕಾರಿ ಶಿವಾಜಿ ಕಾಂಬ್ಳೆ, ಶಿವಾಜಿ ನಾಯ್ಕ, ಜಿ.ಎಸ್‌.ಅಳ್ಳಿಕಟ್ಟಿ, ಮಹಾದೇವ ಹಾದಿಮನಿ, ಸಂತೋಷ ಜಂಬಗಿ, ಸಿದ್ದು ಮಾದರ, ಪಡಿಯಪ್ಪ ಕಳ್ಳಿಮನಿ, ಸಿದ್ದು ಮೇಟಿ, ಎಮ್‌.ಎಸ್‌.ಕೊಮಾರ ದೇಸಾಯಿ , ಸಿದ್ದು ಸೊನ್ನದ, ಶೇಖರ ನಡುವಿನಮನಿ,  ಪಾಂಡು ಮಮದಾಪೂರ ಇತರರಿದ್ದರು.