ನೈರುತ್ಯ ರೈಲ್ವೆಯ ಪ್ರಧಾನ ನಿರ್ವಾಹಕರಿಂದ ರಾಣೆಬೆನ್ನೂರು ರೈಲು ನಿಲ್ದಾಣದ ಪರೀಶೀಲನೆ
Inspection of Ranebennur Railway Station by the Principal Administrator of South Western Railway
ಹಾವೇರಿ 06: ನೈರುತ್ಯ ರೈಲ್ವೆಯ ಪ್ರಧಾನ ನಿರ್ವಾಹಕರಾದ ಮುಕುಲ್ ಸರನ್ ಮಥುರ್ ಅವರು ದಿ. ನವಂಬರ್ 05, 2025 ರಂದು ಅಮೃತ ಭಾರತ ಸ್ಟೇಷನ್ ಯೋಜನೆ ಅಡಿಯಲ್ಲಿ ರಾಣೆಬೆನ್ನೂರು ರೈಲು ನಿಲ್ದಾಣವನ್ನು ಪರೀಶೀಲಿಸಿದರು.
ಈ ಸಂದರ್ಭದಲ್ಲಿ ಪ್ರಶಾಂತ್ ಕುಮಾರ್, ಮುಖ್ಯ ಕಾರ್ಯಾಚರಣೆ ನಿರ್ವಾಹಕರು, ಸಿ. ಎಂ. ಗುಪ್ತ, ಮುಖ್ಯ ಎಂಜಿನಿಯರ್ ಮುದಿತ್ ಮಿತ್ತಲ್, ವಿಭಾಗೀಯ ರೈಲು ನಿರ್ವಾಹಕರು, ಮೈಸೂರು ವಿಭಾಗ ಮತ್ತು ಇತರ ಹಿರಿಯ ವಿಭಾಗೀಯ ಅಧಿಕಾರಿಗಳು ಸಹ ಉಪಸ್ಥಿತರಿದ್ದರು. ಪರೀಶೀಲನೆಯ ವೇಳೆ ಪ್ರಧಾನ ನಿರ್ವಾಹಕರು ಪ್ರಯಾಣಿಕರ ಸೌಕರ್ಯಗಳನ್ನು ಹೆಚ್ಚಿಸುವುದು ಮತ್ತು ನಿಲ್ದಾಣದ ಮೂಲಸೌಕರ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಅಮೃತ ಭಾರತ ಸ್ಟೇಷನ್ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ವಿಮರ್ಶಿಸಿದರು.ಜೊತೆಗೆ ರಾಣೆಬೆನ್ನೂರು- ಚಿಕ್ಕಜಾಜೂರು ಮತ್ತು ಚಿಕ್ಕಜಾಜೂರು-ಮೊಳಕಾಲ್ಮೂರು ವಿಭಾಗಗಳ ನಡುವೆ ವಿಂಡೋ ಟ್ರೈಲಿಂಗ್ ಇನ್ಸ್ಪೆಕ್ಷನ್ ನಡೆಸಲಾಯಿತು.
ಈ ಸಂದರ್ಭದಲ್ಲಿ ಹಳಿ ಸ್ಥಿತಿ, ಸುರಕ್ಷತಾ ಅಂಶಗಳು ಮತ್ತು ವಿಭಾಗದ ಕಾರ್ಯಗಳನ್ನು ಪರೀಶೀಲಿಸಲಾಯಿತು.ಭೇಟಿಯ ಅಂಗವಾಗಿ, ಪ್ರಧಾನ ನಿರ್ವಾಹಕರು ಸಾಸಲು ನಿಲ್ದಾಣದಿಂದ ಐರನ್ ಓರ್ ಸರಕು ರೈಲಿಗೆ ಹಸಿರು ನಿಶಾನೆ ತೋರಿಸಿದರು, ಇದು ವಿಭಾಗದ ಕಾರ್ಯ ವಿಧಾನ ಮತ್ತು ಸರಕು ಸಾರಿಗೆ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಈ ಪ್ರಯತ್ನವು ಪ್ರಾದೇಶಿಕ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡುವಲ್ಲಿ ಹಾಗೂ ರೈಲ್ವೆಯ ಆದಾಯವನ್ನು ವೃದ್ಧಿಸುವಲ್ಲಿ ಸರಕು ಸಂಚಾರದ ಮಹತ್ವವನ್ನು ಒತ್ತಿ ಹೇಳುತ್ತದೆ.ಇದಲ್ಲದೆ, ಪ್ರಧಾನ ನಿರ್ವಾಹಕರು ರಾಣೆಬೆನ್ನೂರು ಮತ್ತು ಚಿಕ್ಕಜಾಜೂರಿನಲ್ಲಿ ಹೊಸದಾಗಿ ನಿರ್ಮಿಸಲಾದ ರೈಲು ವಸತಿ ಗೃಹಗಳನ್ನು ಉದ್ಘಾಟಿಸಿದರು, ಇದು ಸಿಬ್ಬಂದಿ ಕಲ್ಯಾಣ ಹಾಗೂ ರೈಲು ನೌಕರರ ವಸತಿ ಸೌಲಭ್ಯಗಳ ಸುಧಾರಣೆಯ ಮತ್ತೊಂದು ಮೈಲಿಗಲ್ಲಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 