ಮಸಾರಿ ಭಾಗದ ಹಿಂದೂ ರುದ್ರ ಭೂಮಿ ಸ್ವಚ್ಛಗೊಳಿಸಲು ನಗರಸಭೆಗೆ ಒತ್ತಾಯ
ಲೋಕದರ್ಶನ
ವರದಿ
ಗದಗ 14: ಮಸಾರಿ ಭಾಗದ ಹಿಂದೂ ರುದ್ರ ಭೂಮಿಯಲ್ಲಿ ಕಸ, ಕಂಟಿ, ಪಿಕಜಾಲಿ
ಮುಳ್ಳು, ಅರಿಬಿ ಅಂಚಡಿಯಿಂದ ಕೂಡಿದ್ದರಿಂದ ಶವ ಸಂಸ್ಕಾರಕ್ಕೆ ಬರುವವರಿಗೆ ಮುಜುಗರವಾಗುತ್ತಿದ್ದು
ಈ ಕೊಡಲೇ ನಗರಸಭೆಯವರು ಎಚ್ಚತ್ತು ಮಸಾರಿ ಭಾಗದ ಹಿಂದೂ ರುದ್ರಭೂಮಿಯನ್ನು ಸ್ವಚ್ಛಗೊಳಿಸಬೇಕೆಂದು ಪ್ರಭುಸ್ವಾಮಿ
ಹಿರೇಮಠ ಅವರು ನಗರಸಭೆಯನ್ನು ಒತ್ತಾಯಿಸಿದರು.
ಹಾತಲಗೇರಿ ರಸ್ತೆನಲ್ಲಿರು ಮಸಾರಿ ಭಾಗದ ಹಿಂದೂ
ರುದ್ರ ಭೂಮಿಯಲ್ಲಿ ಸಭೆ ಸೇರಿದ್ದ ಸಭೀಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹಿರಿಯರಾದ ಎಮ್ ಆರ್ ಸಾಸ್ವಿಹಳ್ಳಿ ಅವರು ಮಾತನಾಡಿ
ಈ ರುದ್ರ ಭೂಮಿಯಲ್ಲಿ ಬೋರ್ವೆಲ್ ಕೊರಿಸಿ ಗಿಡಮರಗಳನ್ನು ಬೆಳಿಸಿ ಉದ್ಯಾವನವನ್ನಾಗಿ ಮಾಡಿ ಈ ಸ್ಥಳವನ್ನು
ಆಕರ್ಷನೀಯ ಸ್ಥಾನವನ್ನಾಗಿ ಮಾಡಬೇಕಾಗಿದೆ ಎಂದು ಹೇಳಿದರು.
ಪ್ರೋ. ಜಿ.ಟಿ ಹಿಡಿಕಿಮಠ ಅವರು ಮಾತನಾಡಿ ಸತ್ತವರ
ಚೆಕ್ಬುಕ್, ಪಾಸ್ಬುಕ್, ಎ ಟಿ ಎಮ್ ಕಾಡರ್್, ಹಾಸ್ತಿ ಕಾಗದ ಪತ್ರವನ್ನು ಸುರಕ್ಷಿತವಾಗಿ ಅವರ ಸಂಬಂಧಿಕರು
ಇಟ್ಟುಕೊಂಡು ಸತ್ತವರು ಬಳಸುವ ಹಾಸಿಗೆ, ಚಾದಾರ, ದಿಂಬು, ಚಾಪೆ, ತಟ್ಟು, ಅವರು ಹಾಕಿಕೊಂಡತ ಅಂಗಿ,
ಲುಂಗಿಯನ್ನು ಸ್ಮಶಾನ ಗಟ್ಟಿಯಲ್ಲಿ ತಂದು ಬೀಸಾಡುತ್ತಿರುವುದ್ದನ್ನು ನೋಡಿದರೆ ನಾಗರೀಕ ಸಮಾಜ ತಲೆ
ತಗ್ಗಿಸುವಂತಾಗಿದೆ. ಕೊಡಲೇ ಹಂತ ನಿರುಪಯುಕ್ತ ವಸ್ತುಗಳನ್ನು ಬೀಸಾಡದೆ ಸುಟ್ಟುಹಾಕಿ ಪರಿಸರವನ್ನು
ಸ್ವಚ್ಛವಾಗಿ ಇಡಬೇಕೆಂದು ಅವರು ಹೇಳಿದರು.
ಸಭೆಯಲ್ಲಿ ನಿವೃತ್ತ ಅರಣ್ಯ ಅಧಿಕಾರಿ ಎಮ್.ಜಿ.ಕಮತರ್, ಎಲ್. ಐ. ಸಿ. ನಿವೃತ್ತ ಅಧಿಕಾರಿ, ಎಸ್. ವ್ಹಾಯ್, ಗಣಾಚಾರಿ, ಶಿಕ್ಷಕ ಶಿವಾನಂದ ಭಜಂತ್ರಿ, ಸಮಾಜ ಸೇವಕ, ಸೋಮಶೇಖರ್ ರೆಡ್ಡಿ, ಹಾಗೂ ಭೂಮಾಪನಾ ಇಲಾಖೆ ಅಧಿಕಾರಿ ಎಮ್.ಜಿ.ಬದಿ ಉಪಸ್ಥಿರಿದ್ದರು.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ 