ರಾಣೆಬೆನ್ನೂರಲ್ಲಿ ವಿನೂತನ ಯುನಿಸೆಕ್ಸ್ ಸಲೂನ್ ಸ್ಪಾ ಉದ್ಘಾಟನೆ
Innovative unisex salon spa inaugurated in Ranebennur
ರಾಣೆಬೆನ್ನೂರಲ್ಲಿ ವಿನೂತನ ಯುನಿಸೆಕ್ಸ್ ಸಲೂನ್ ಸ್ಪಾ ಉದ್ಘಾಟನೆ
ರಾಣೇಬೆನ್ನೂರು 07: ಉತ್ತರಕರ್ನಾಟಕದ ಹೆಬ್ಬಾಗಿಲು ವಾಣಿಜ್ಯ ನಗರವೆಂದುಖ್ಯಾತಿ ಪಡೆದಿರುವ, ರಾಣೇಬೆನ್ನೂರು ನಗರದಲ್ಲಿ, ನವೀನ ತಂತ್ರಜ್ಞಾನದ, ಸೌಂದರ್ಯವರ್ಧನೇಯ "ಅವಿವಾ ಸ್ಪಾ" ಪ್ರಾರಂಭವಾಗಿರುವುದು ಈ ಭಾಗದ ನಾಗರಿಕರಿಗೆತುಂಬಾ ಅನುಕೂಲವಾಗಲಿದೆಎಂದುಚಿತ್ರನಟಿರಾಗಿಣಿ ದ್ವಿವೇದಿ ಹೇಳಿದರು. ಅವರು, ನಗರದಲ್ಲಿ ಗುರುರಾಜ್ ಮಾಲೀಕತ್ವದಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ "ಅವಿವಾ" ಯುನಿಸೆಕ್ಸ್ ಸಲೂನ್, ಸ್ಪಾ ಸಲೂನ್ ಉದ್ಘಾಟಿಸಿ ಮಾತನಾಡಿದರು. ಸೌಂದರ್ಯ ವರ್ಧನೆಯಲ್ಲಿ ಹೆಣ್ಣುಗಂಡು ಎಂಬ ಯಾವುದೇ ಭೇದ ಭಾವವಿಲ್ಲ. ಸೌಂದರ್ಯ ಬಹುಮುಖ್ಯ.ಇಲ್ಲಿನ ನಾಗರಿಕರುತಮ್ಮ ಸೌಂದರ್ಯ ವರ್ಧನೆಗಾಗಿಯೇದಾವಣಗೆರೆ, ಚಿತ್ರದುರ್ಗ ಶಿವಮೊಗ್ಗ, ಹುಬ್ಬಳ್ಳಿ ಮತ್ತು ಬೆಂಗಳೂರು ನಂತಹದೊಡ್ಡದೊಡ್ಡ ನಗರಗಳತ್ತ ಮುಖ ಮಾಡುತ್ತಿರುವುದನ್ನು ಗಮನಿಸಿದ್ದೇವೆ ಎಂದರು.
ಅವಿವಾ ಸ್ಪಾ ಮಾಲಿಕಗುರುರಾಜ ಕೆ, ಸ್ವಾಗತಿಸಿ ಮಾತನಾಡಿದಅವರು, ನಗರದಲ್ಲಿಅಗತ್ಯವಿರುವುದನ್ನು ಮನಗಂಡು, ತಮ್ಮ ಸ್ನೇಹಿತರೊಂದಿಗೆ ಚರ್ಚಿಸಿ, ಎಲ್ಲರಅಭಿಪ್ರಾಯದಂತೆ ಮತ್ತು ಸಹೋದರರಅಪೇಕ್ಷೆಯಂತೆ ಪ್ರಾರಂಭಿಸಲಾಗಿದೆ. ಇಂದಿನಿಂದ ಬಹುದೂರದ ಪ್ರದೇಶಗಳಿಗೆ ಹೋಗುವ ಅಗತ್ಯವಿಲ್ಲ. ಇದರ ಪ್ರಯೋಜನ ಪ್ರತಿಯೊಬ್ಬ ನಾಗರಿಕರು ಪಡೆದುಕೊಳ್ಳಲು ಮುಂದಾಗಬೇಕುಎಂದುಕೋರಿದರು.
ಬೆಂಗಳೂರಿನ ಉದ್ಯಮಿರಮೇಶ್ ಬಾಬು, ವಂದೇ ಮಾತರಂ ಸಂಸ್ಥೆಯಅಧ್ಯಕ್ಷ ಪ್ರಕಾಶ್ ಬುರಡಿಕಟ್ಟಿಅನುಬಂಧಇವೆಂಟ್ನ ಮಾಲಿಕರೋಹನ್ ಗುಪ್ತಾ, ರಮೇಶ್ ಬಾಬುಜೀ, ವಿನುತಾಗುರುರಾಜ್, ಶಿವರಾಂ ರಾಯಚೂರು, ಶ್ವೇತಾ ಶಿವಮೊಗ್ಗ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 