ಇಂಡಸ್ ಟವರ್ಸ ತಾಂತ್ರಿಕ ನೌಕರರ ಮುಷ್ಕರ ನಾಲ್ಕನೇ ದಿನಕ್ಕೆ
Indus Towers technical employees' strike enters fourth day
ಕಾರವಾರ 14: ಇಂಡಸ್ ಟವರ್ಸ ಸಂಸ್ಥೆ ತನ್ನ ತಾಂತ್ರಿಕ ನೌಕರರನ್ನು ವಜಾ ಮಾಡಿದ್ದನ್ನು ವಿರೋಧಿಸಿ, ಕೆಲಸ ಕಳೆದು ಕೊಂಡ ಕಾರ್ಮಿಕರು ಕಾರವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಆರಂಭಿಸಿರುವ ಮುಷ್ಕರ ಮೂರನೇ ದಿನ ಪೂರ್ಣಗೊಳಿಸಿ, ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಭಾರತೀಯ ಪ್ರವೇಟ್ ಟೆಲಿಕಾಂ ಮಜ್ದೂರ್ ಸಂಘದ ಸದಸ್ಯರಾಗಿರುವ ಇಂಡಸ್ ಟವರ್ಸ ತಾಂತ್ರಿಕರು ಸಂಘಟನೆ ಮಾಡಿಕೊಂಡಿರುವುದನ್ನು ಇಂಡಸ್ ಟವರ್ಸ ಲಿಮಿಟೆಡ್ ವಿರೋಧ ಮಾಡುತ್ತಿದ್ದು, ಸಂಘದಲ್ಲಿರುವ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳದಂತೆ, ತನ್ನ ಗುತ್ತಿಗೆದಾರರಿಗೆ ಸೂಚಿಸಿದೆ ಎಂದ ಮುಷ್ಕರ ನಿರತರು, ಮುಷ್ಕರ ಮಾಡುತ್ತಿರುವುದು ಯಾರ ಮೇಲೂ ದ್ವೇಷದಿಂದಲ್ಲ. ನಮ್ಮ ಹೋರಾಟ ಶಾಂತಿಯುತ, ಸಂವಿಧಾನಿಕ, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಕನ್ನಡಿಗ ಕಾರ್ಮಿಕರ ಶೋಷಣೆಯನ್ನು ಗಮನಿಸಿ ಸರ್ಕಾರವೂ ಈಗ ತಕ್ಷಣ ಕ್ರಮ ಕೈಗೊಳ್ಳಬೇಕು. ಬಿಪಿಟಿಎಂಎಸ್ ಪರವಾಗಿ ನಮ್ಮ ಹೋರಾಟವನ್ನು ನ್ಯಾಯ ಸಿಗುವವರೆಗೂ ಮುಂದುವರಿಸುತ್ತೇವೆ ಎಂದು ಮುಷ್ಕರ ನಿರತರು ಹೇಳಿದ್ದಾರೆ.
ಟೆಲಿಕಾಂ ಟವರ್ ನಲ್ಲಿ ಬಂಡವಾಳ ಹಾಕಿರುವ ಇಂಡಸ್ ಟವರ್ಸ , ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಟವರ್ಸ ಗುತ್ತಿಗೆದಾರರನ್ನು ಪ್ರತಿ ವರ್ಷ ಬದಲಿಸುತ್ತಿದ್ದು, ಅಲ್ಲಿ ಕೆಲಸ ಮಾಡುತ್ತಿರುವ ತಾಂತ್ರಿಕ ನೌಕರರ ಮೇಲೆ ದಬ್ಬಾಳಿಕೆ ಹೆಚ್ಚಿದೆ. ಇದನ್ನು ಪ್ರಶ್ನಿಸಿದರೆ ನೌಕರಿಯಿಂದ ವಜಾ ಮಾಡಲಾಗುತ್ತಿದೆ ಎಂದು ಮುಷ್ಕರ ನಿರತರು ಆರೋಪಿಸಿದರು. ಸಂಘಟಿತರಾದ ಕಾರ್ಮಿಕರನ್ನು ಒಡೆಯುವ ಪ್ರಯತ್ನದ ಸಲುವಾಗಿ ಮ್ಯಾನೇಜ್ಮೆಂಟನವರು ಕಾರ್ಮಿಕರಲ್ಲಿ ಭಿನ್ನತೆ ಮೂಡಿಸಲು ಪ್ರಯತ್ನಿಸಿದರು. ವಿವಿಧ ಪೊಲೀಸ್ ಸ್ಟೇಷನ್ ಗಳಲ್ಲಿ ಸುಳ್ಳು ಪ್ರಕರಣ ದಾಖಲಿಸಿದರು ಯೂನಿಯನ್ ಸದಸ್ಯರಿಗೆ ಆಮಿಷ ನೀಡುವುದು ಸಹ ನಡೆಯಿತು. ಆದರೆ ಇದ್ಯಾವುದೂ ಕೂಡ ಕಾರ್ಮಿಕರ ಒಗ್ಗಟ್ಟನ್ನು ಒಡೆಯಲು ಸಾಧ್ಯವಾಗಲಿಲ್ಲ ಎಂದು ಮುಷ್ಕರನಿರತರು ಹೇಳಿದ್ದಾರೆ. ಕರ್ನಾಟಕದಲ್ಲಿ 280, ಉತ್ತರ ಕನ್ನಡ ಜಿಲ್ಲೆಯಲ್ಲಿ 15 ಕ್ಕೂ ಹೆಚ್ಚುಬ ತಾಂತ್ರಿಕ ನೌಕರರು ಹಾಗೂ ಸಹಾಯಕ ಸಿಬ್ಬಂದಿ ನೌಕರಿ ಕಳೆದು ಕೊಂಡಿದ್ದು, ನ್ಯಾಯಾಯುತ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದಾರೆ. ಕಾರ್ಮಿಕರ ಹಕ್ಕು ಮತ್ತು ನೌಕರಿ ಮರಳಿ ನೀಡಲು ಒತ್ತಾಯಿಸಿ ಅಧ್ಯಕ್ಷ ಮಹಮ್ಮದ್ ಜಾಫರ್ ದೊಡ್ಡವಾಡ, ಉಪಾಧ್ಯಕ್ಷ ಗಣೇಶ ನಾಯ್ಕ ಇವರ ನೇತೃತ್ವದಲ್ಲಿ ಮುಷ್ಕರ ಮುಂದುವರಿದಿದೆ. ಟೆಲಿಕಾಂ ಮಜ್ದೂರ್ ಯುನಿಯನ್ ನಲ್ಲಿ ಇದ್ದ ಮಾತ್ರಕ್ಕೆ ನೌಕರಿ ಯಿಂದ ತೆಗೆಯಬಾರದು. ವಾರದ ರಜೆ, ಹಬ್ಬಗಳ ದಿನ,ರಾಷ್ಟ್ರೀಯ ದಿನಾಚರಣೆ ಗೆ ರಜೆ ನೀಡಬೇಕು. ದಿನದಲ್ಲಿ ಎಂಟು ತಾಸು ಕರ್ತವ್ಯಕ್ಕೆ ಮಿತಿ ಹಾಕಬೇಕು. ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ನೀಡಬೇಕು.
ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ವೇತನ ಪರಿಷ್ಕರಣೆ ಆಗಬೇಕು. ವೈದ್ಯಕೀಯ ವೆಚ್ಚ ಹಾಗೂ ಅಪಘಾತ ವಿಮೆ ನೀಡಬೇಕು. ಕರ್ತವ್ಯದ ವೇಳೆ ನಿಧನರಾದರೆ 26 ಲಕ್ಷ ಪರಿಹಾರ ನೀಡಬೇಕು. ಫೀಲ್ಡ್ ಸಿಬ್ಬಂದಿಗೆ ಸುರಕ್ಷತಾ ಉಪಕರಣ ನೀಡಬೇಕು ಎಂದು ಆಗ್ರಹಿಸಿದರು. ಇಂಡಸ್ ಟವರ್ಸ ಎಲ್ಲಾ ಗುತ್ತಿಗೆದಾರ ಕಾರ್ಮಿಕರಿಗೆ ಕಾನೂನು ಬದ್ಧ ರಕ್ಷಣೆ ನೀಡಬೇಕು ಹಾಗೂ ಬಿಪಿಟಿಎಂಎಸ್ ಸಂಘಟನೆ ಜೊತೆ ಮಾತುಕತೆ ಆರಂಭಿಸಲು ಮುಷ್ಕರ ನಿರತರು ಇಂಡಸ್ ಟವರ್ಸ ಸಂಸ್ಥೆಯ ಮಾಲಕರು ಹಾಗೂ ಆಡಳಿತಾಧಿಕಾರಿಯನ್ನು ಆಗ್ರಹಿಸಿದ್ದಾರೆ. ಧರಣಿಯಲ್ಲಿ ಪದಾಧಿಕಾರಿಗಳಾದ ಪ್ರಶಾಂತ ನಾಯ್ಕ, ಲೋಹಿತ್ , ರಾಮಾ ದೇವಾಡಿಗ ಸೇರಿದಂತೆ ಹಲವು ಕಾರ್ಮಿಕರು ಭಾಗವಹಿಸಿದ್ದಾರೆ....
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 