ಜಕಾರ್ತ 09: ಇಂಡೋನೇಷಿಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಕ್ರೀಡಾಕೂಟದ ಮಹಿಳಾ ಕ್ಲಬ್ ಥ್ರೋ ಸ್ಪಧರ್ೆಯಲ್ಲಿ ಭಾರತದ ಏಕ್ತಾ ಭ್ಯಾನ್ ಸ್ವರ್ಣ ಪದಕ ಗಳಿಸಿದ್ದಾರೆ. ಇದು ಈ ಸಾಲಿನ ಕ್ರೀಡಾಕೂಟದಲ್ಲಿ ಭಾರತಕ್ಕೆ ದಕ್ಕುತ್ತಿರುವ ನಾಲ್ಕನೇ ಚಿನ್ನದ ಪದಕವಾಗಿದೆ.
ಭ್ಯಾನ್ ತನ್ನ ನಾಲ್ಕನೇ ಪ್ರಯತ್ನದಲ್ಲಿ
16.02 ಮೀ. ದೂರಕ್ಕೆ ಕ್ಲಬ್ ಎಸೆಯುವ ಮೂಲಕ ಚಿನ್ನದ ಸಾಧನೆ
ಮಾಡಿದ್ದಾರೆ.
ಈ32 / 51 ಶೈಲಿಯ
ಕ್ರೀಡಾಪಟುವಾಗಿರುವ ಏಕ್ತಾ ಈ ವಷರ್ಾರಂಭದಲ್ಲಿ ನಡೆದಿದ್ದ
ಇಂಡಿಯನ್ ಓಪನ್ ಪ್ಯಾರಾ ಅಥ್ಲೆಟಿಕ್ಸ್
ಚಾಂಪಿಯನ್ ಶಿಪ್ ನಲ್ಲಿ ಸಹ
ಚಿನ್ನದ ಪದಕ ಗಳಿಸಿದ್ದರು.
ಇನ್ನು ಮಂಗಳವಾರ ಭಾರತದ ಜಯಂತಿ ಬೆಹೆರಾ, ಆನಂದನ್ ಗುನಶೇಖರನ್ ಹಾಗೂ ಮೋನು ಘಂಗಾಸ್
ಸಹ ಕಂಚಿನ ಪದಕ ಗಳಿಸಿ ಮಿಂಚಿದ್ದಾರೆ.ಘಂಘಾಸ್ ತಾವು ಪುರುಷರ ಷಾಟ್
ಪುಟ್ ಎಸೆತದಲ್ಲಿ ಈ11 ವಿಭಾಗದಲ್ಲಿ ನಡೆದ ಸ್ಪರ್ಧೆ ವೇಳೆ ತೃತೀಯ ಸ್ಥಾನ
ಪಡೆದಿದ್ದರು. ಪುರುಷರ 200ಮೀ. ಖಿ44 / 62/64 ವರ್ಗಗಳಲ್ಲಿ
ಗುಣಶೇಖರನ್ ಹಾಗೂ ಮಹಿಳೆಯರ 200ಮೀ.
ಖಿ45 / 46/47 ವಿಬಾಗದಲ್ಲಿ ಬೆಹೆರಾ ಕಂಚು ಗಳಿಸಿದ್ದಾರೆ.
ಇದಕ್ಕೆ ಮುನ್ನ ಸೋಮವಾರದಂದು, ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರ್ತದ
ಸಂದೀಪ್ ಚೌಧರಿ ವಿಶ್ವ ದಾಖಲೆಯ ಚಿನ್ನ ಜಯಿಸಿ ಭಾರತಕ್ಕೆ ಕೀತರ್ಿ ತಂದಿದ್ದರು. ಇದೀಗ ಏಕ್ತಾ ಅವರ
ಚಿನ್ನದ ಪದಕ ಸೇರಿ ಭಾರತ
ಇದುವರೆಗೆ ನಾಲ್ಕು ಚಿನ್ನದ ಪದಕಗಳೊಡನೆ ಒಟ್ಟಾರೆ ದಿನದಲ್ಲಿ 11 ಪದಕಗಳನ್ನು ಗಳಿಸಿದೆ.