ಭಾರತ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠವಾದ ಸಂವಿಧಾನ : ಪ್ರೋ.ಕೆ. ನಾಗಬಸಯ್ಯ

ಭಾರತ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠವಾದ ಸಂವಿಧಾನ : ಪ್ರೋ.ಕೆ. ನಾಗಬಸಯ್ಯ Indian Constitution is the greatest constitution in the world: Prof. K. Nagabasaiah


ಕೊಪ್ಪಳ 28:  ಭಾರತ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠವಾದ ಸಂವಿಧಾನ ಪ್ರೋ.ಕೆ. ನಾಗಬಸಯ್ಯ . ಭಾರತ ಸಂವಿಧಾನವು ವಿಶ್ವದಲ್ಲಿಯೇ ಶ್ರೇಷ್ಠವಾದದ್ದು ನಮ್ಮ ಸಂವಿಧಾನವಾಗಿದೆ ಎಂದು ನಿವೃತ್ತ ಉಪ ಕುಲಸಚಿವರಾದ  ಕೆ. ನಾಗಬಸಯ್ಯ ರವರು ಹೇಳಿದರು.  ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಕೊಪ್ಪಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಂವಿಧಾನದ ಪಿಠೀಕೆ ಅತ್ಯಂತ ಅರ್ಥಗರ್ಭಿತವಾದದ್ದು ಇದರ ಪ್ರತಿಯೊಂದು ಅಂಶವು ಪ್ರತಿಯೋಬ್ಬ ನಾಗರಿಕನಿಗೂ ಬೇಕಾದ ಸ್ವಾತಂತ್ಯ್ರ, ಸಾಮಜಿಕ ನ್ಯಾಯ, ಸಮಾನತೆ. ಸಾರ್ವಬೌಮ, ಜಾತ್ಯಾತೀತತೆ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯ ಅಂಶಗಳನ್ನು  ರೊಪಿಸವಂತಹ ಮತ್ತು ಅಂಶಗಳನ್ನು  ಒಳಗೊಂಡ ಶ್ರೇಷ್ಟ ಸಂವಿಧಾನ ನಮ್ಮ ಸಂವಿಧಾನವಾಗಿದೆ ಎಂದರು. 

  ಎನ್‌.ಎಸ್‌.ಎಸ್‌. ಕಾರ್ಯಕ್ರಮಾಧಿಕಾರಿ ಹಾಗೂ ಉಪಪ್ರಾಚಾರ್ಯರಾದ ಬಸವರಾಜ ಎಸ್‌.ಎಮ್‌. ಮಾತನಾಡಿ ವಿಶ್ವ ಕಂಡ ಮಹಾನ್ ದೇವರು ಡಾ.ಬಿ.ಆರ್ ಅಂಬೇಡ್ಕರವರು ನಮಗೆ ನೀಡಿದ ಸಂವಿಧಾನ ಎಲ್ಲಾ ಕಾನೂನುಗಳ ತಾಯಿ ಇವತ್ತಿನ ದಿವಸ ನಾವು ಇಷ್ಟೂ ಸ್ವತಂತ್ರವಾಗಿ ಮಾತನಾಡಲೂ ಮತ್ತು ಜೀವಿಸಲು ಕಾರಣ ನಮ್ಮ ಸಂವಿಧಾನ ಇಂತಹ ಸಂವಿಧಾನವನ್ನು ನೀಡಿದ ಡಾ.ಬಾಬಾ ಸಾಹೇಬ ಅಂಬೇಡ್ಕರವರಗೆ ಶತಕೋಟಿ ನಮಸ್ಕಾರಗಳನ್ನು ಸಮರ​‍್ಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆಯನ್ನು ಭೋಧಿಸಿದರು. ಉಪನ್ಯಾಸಕರಾದ ಜ್ಯೋತಿ ರೋಟ್ಟಿ ಮಾತನಾಡಿ ಭಾರತ ಸಂವಿಧಾನವು ವಿಶ್ವದಲ್ಲಿಯೆ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ ಅದು ಪ್ರತಿಯೋಬ್ಬ ನಾಗರಿಕರಿಗೆ ದಾರೀದೀಪವಾಗಿದೆ ಎಂದರು. 

     ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಷಾದೇವಿ ಹಿರೇಮಠ ಪ್ರಾಚಾರ್ಯರು ವಹಿಸಿ ಮಾತನಾಡಿ  ಡಾ.ಬಿ.ಆರ್ ಅಂಬೇಡ್ಕರವರ ಆಶಯಗಳು ಅದ್ಬುತವಾದವುಗಳು ಅವರ ಆಶಯಗಳನ್ನು ಈಡೇರಿಸುವುದು ನಮ್ಮ ನಿಮ್ಮೇಲ್ಲರ ಕರ್ತವ್ಯಾಗಿದೆ. ಜಾತಿ ಧರ್ಮದ ಕಟ್ಟಳೆಗಳನ್ನು ಹೋಗಲಾಡಿಸಲು ಹಗಲಿರಳು ಶ್ರಮಿಸಿದವರು ಮತ್ತು ಹೆಚ್ಚು ಅವಮಾನಗಳನ್ನು ಸಹಿಸಿಕೊಂಡು ಸಮಾನತೆಯ ತತ್ವಗಳನ್ನು ಜಗತ್ತಿಗೆ ಹೇಳಿಕೊಟ್ಟ ಮಹಾನ್ ವಿಶ್ವನಾಯಕ ಡಾ.ಬಿ.ಆರ್ ಅಂಬೇಡ್ಕರವರು ಎಂದರು.     ಕಾರ್ಯಕ್ರಮದಲ್ಲಿ  ಸಿಬ್ಬಂದಿ ವರ್ಗ , ವರ್ಗ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.  ವಿದ್ಯಾರ್ಥಿ ನಾಗಲಿಂಗಪ್ಪ  ಕಾರ್ಯಕ್ರಮವನ್ನು ನಿರೂಪಿಸಿದರು ,ಪ್ರಕಾಶ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಪದ್ಮನಾಭ ಸ್ವಾಗತಿಸಿದರು ಮತ್ತು ನಿಜಾಮ್ಮುದ್ದೀನ್ ವಂಧಿಸಿದರು