ಭಾರತದ ಸಂವಿಧಾನ ದಿನದ ಆಚರಣೆ :ನಮ್ಮ ಸಂವಿಧಾನ ನಮ್ಮ ಗೌರವ

ಭಾರತದ ಸಂವಿಧಾನ ದಿನದ ಆಚರಣೆ :ನಮ್ಮ ಸಂವಿಧಾನ ನಮ್ಮ ಗೌರವ  Indian Constitution Day Celebration: Our Constitution is our Respect

                   ಮುಂಡಗೋಡ 27 : ತಾಲೂಕ ಆಡಳಿತ ತಾಲೂಕ ಪಂಚಾಯತ ಸಮಾಜ ಕಲ್ಯಾಣ ಇಲಾಖೆ ಪಟ್ಟಣ ಪಂಚಾಯಿತಿ ಮುಂಡಗೋಡ ಇವರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಟೌನ್ ಹಾಲ್ ನಲ್ಲಿ ಬುಧವಾರ ಸಂವಿಧಾನ ಪೀಠಿಕೆ ಹಾಗೂ ಡಾ. ಬಿ. ಆರ್ ಅಂಬೇಡ್ಕರ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.    ಇಲ್ಲಿಯ ಪ್ರವಾಸಿ ಮಂದಿರದಿಂದ ತೆರೆದ ವಾಹನದಲ್ಲಿ ಸಂವಿಧಾನ ಪೀಠಿಕೆ ಹಾಗೂ ಡಾ. ಬಿ. ಆರ್ ಅಂಬೇಡ್ಕರ ಅವರ ಭಾವಚಿತ್ರವನ್ನು ಮೆರವಣಿಗೆ ಮೂಲಕ  ಬಸವನಬೀದಿ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಟ್ಟಣದ ಟೌನ್ ಹಾಲ್ ಪ್ರವೇಶಿಸಿತು. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರಸನ್ನಸಿಂಗ್ ಹಜೇರಿ ಮಾತನಾಡುತ್ತಾ ನಮ್ಮ ಭಾರತ ದೇಶದ ಭಾಷೆ ಹಾಗೂ ಸಂಸ್ಕೃತಿ ವಿಷಯಗಳಿಗೆ ಅನುಗುಣವಾಗಿ ಅಳೆದು ತೂಗಿ ರಚಿಸಲಾದ ಸಂವಿಧಾನ ನಮ್ಮದು ಎಂದು ಹೇಳಿದರು.

                   ತಾ ಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ ದಾಸನಕೊಪ್ಪ ಮಾತನಾಡುತ್ತಾ ನಮ್ಮ ದೇಶದಲ್ಲಿಸಾಕಷ್ಟು ಭಾಷೆ, ಜಾತಿ, ಧರ್ಮಗಳಿದ್ದರೂ ಕೂಡ ಪ್ರತಿಯೊಬ್ಬರೂ ಯಾವುದೇ ಬೇಧ ಭಾವವಿಲ್ಲದೆ ನಿರ್ಭೀತಿ ಹಾಗೂ ಭಾವೈಕ್ಯತೆಯಿಂದ ಬದುಕಲು ನಮ್ಮ ಸಂವಿಧಾನವೇ ಕಾರಣವಾಗಿದೆ ಎಂದು ಹೇಳಿದರು. ತಹಸೀಲ್ದಾರ ಚಂದ್ರಶೇಖರ ಹೊಸಮನಿ, ಪ.ಪಂ ಸದಸ್ಯ ಅಶೋಕ ಚಲವಾದಿ, ಬಿಜೆಪಿ ತಾಲೂಕಾಧ್ಯಕ್ಷ ಮಂಜುನಾಥ ಪಾಟೀಲ ಮುಂತಾದವರು ಮಾತನಾಡಿದರು. ಈ ವೇಳೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಾಳೇಶ ಈ ಸಿದ್ದಯ್ಯನವರ, ಪಂಚಾಯತ್ ರಾಜ್ ಇಲಾಖೆ ಎಇಇ ಪ್ರದೀಪ ಭಟ್ಟ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣ ಕುಳ್ಳೂರ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಸುಮಾ, ಗ್ರಾಮೀಣ ಕುಡಿಯುವ ನೀರು ಇಲಾಖೆ ಎಇಇ ರಾಜೇಶ್ವರಿ ಕದಂ, ಪ.ಪಂ ಸಹಾಯಕ ಅಧಿಕಾರಿ ಪ್ರದೀಪ ಹೆಗಡೆ, ಪಶುಸಂಗೋಪನಾ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ ಹೆಗಡೆ, ಪಿ  ನಾಗೇಂದ್ರ, ಬಾಳೇಶ ಸಿದ್ದಯ್ಯನವರ ಮುಖಂಡ ಮತ್ತು ಉಪಸ್ಥಿತರಿದ್ದರು.