ಐಸಿಸಿ ವಿಶ್ವಕಪ್ಗೆ ಭಾರತದ ಅಂಪೈರ್ ಸುಂದರಾಮ್ ರವಿ
ದುಬೈ, ಏ 26 ಇಂಗ್ಲೆಂಡ್ನಲ್ಲಿ ಮೇ. 30 ರಂದು ಆರಂಭವಾಗುವ ಐಸಿಸಿ ವಿಶ್ವಕಪ್ ಮಹತ್ವದ ಟೂನರ್ಿಗೆ ತೀಪುಗಾರರ ಪಟ್ಟಿ ಹಾಗೂ ರೆಫರಿಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಶುಕ್ರವಾರ ಅಧಿಕೃತವಾಗಿ ಬಿಟುಗಡೆ ಮಾಡಿದೆ. ಭಾರತದ ಏಕೈಕ ಅಂಪೈರ್ ಸುಂದರಾಮ್ ರವಿ ಅವರು ಐಸಿಸಿ ಬಿಡುಗಡೆ ಮಾಡಿದ ತೀಪುಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಪ್ರಸಕ್ತ ಆವೃತ್ತಿಯ ಐಪಿಎಲ್ ಟೂನರ್ಿಯಲ್ಲಿ ರಾಯಲ್ ಚಾಲೆಂಜಸರ್್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಫ್ರಂಟ್ ಪೂಟ್ ನೋ ಬಾಲ್ ನೀಡುವಲ್ಲಿ ನಿರಾಕರಿಸಿದ್ದ ಸುಂದರಾಮ್ ರವಿ, ವಿವಾದ ಸೃಷ್ಟಿಸಿದ್ದರು. ಈ ಪಂದ್ಯದಲ್ಲಿ ಆರ್ಸಿಬಿ ಆರು ರನ್ಗಳಿಂದ ಸೋಲು ಅನುಭವಿಸಿತ್ತು. ಇವರು ಕಳೆದ ತಿಂಗಳಿನಲ್ಲಷ್ಟೆ ಐಸಿಸಿ ಎಲೈಟ್ ಪ್ಯಾನಲ್ ದಜರ್ೆಯ ತೀಪುಗಾರರಾಗಿ ಮುಂಬಡ್ತಿ ಪಡೆದಿದ್ದರು.
ಅನುಭವಿ ಅಂಪೈರ್ ಶ್ರೀಲಂಕಾದ ರಂಜನ್ ಮದುಗಾಲೆ ಅವರು ಆರನೇ ಬಾರಿ ವಿಶ್ವಕಪ್ ಟೂನರ್ಿಯಲ್ಲಿ ತೀಪುಗಾರರಾಗಿ ಸೇವೆ ಸಲ್ಲಿಸಲಿದ್ದಾರೆ. ಕ್ರಿಸ್ ಬ್ರಾಡ್ ಹಾಗೂ ಜೆಫ್ ಕ್ರೋ ಅವರ ಪಾಲಿಗೆ ಇದು ನಾಲ್ಕನೇ ಬಾರಿಯಾಗಿದೆ. ಅಲೀಮ್ ದಾರ್ ಅವರು ಐದನೇ ಬಾರಿ ವಿಶ್ವಕಪ್ ಟೂನರ್ಿಯಲ್ಲಿ ಅಂಪೈರ್ ಆಗಿ ಸೇವೆ ಸಲ್ಲಿಸಲು ತಯಾರಾಗಿದ್ದಾರೆ. ಇಯಾನ್ ಗೌಲ್ಡ್ ಅವರ ಪಾಲಿಗೆ ನಾಲ್ಕನೇ ಹಾಗೂ ಅಂತಿಮ ಟೂನರ್ಿ ಇದಾಗಿದ್ದು, ವಿಶ್ವಕಪ್ ಬಳಿಕ ಅಂಪೈರ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಲಿದ್ದಾರೆ. ಮೇ. 30 ರಂದು ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೂನರ್ಿಯ ಉದ್ಘಾಟನಾ ಪಂದ್ಯದಲ್ಲಿ ಮೂರು ವಿಶ್ವಕಪ್ ಗೆದ್ದ ತಂಡದ ಸದಸ್ಯರು ಐಸಿಸಿ ರೆಫರಿ ಹಾಗೂ ತೀಪುಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1987ರಲ್ಲಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದಲ್ಲಿ ಸದಸ್ಯರಾಗಿದ್ದ ಡೇವಿಡ್ ಬೂನ್ ಅವರು ಪಂದ್ಯ ರೆಫರಿ, ಶ್ರೀಲಂಕಾದ ಕುಮಾರ ಧರ್ಮಸೇನಾ ಹಾಗೂ ಬ್ರೂಸ್ ಆಕ್ಸೆನ್ಫಡರ್್ ಅವರು ತೀಪುಗಾರರಾಗಿ ಸೇವೆ ಸಲ್ಲಿಸಲಿದ್ದಾರೆ. ಮೂರನೇ ಅಂಪೈರ್ ಆಗಿ ಪಾಲ್ ರೀಫೆಲ್ ಕಾರ್ಯ ನಿರ್ವಹಿಸಲಿದ್ದಾರೆ.
ರೆಫರಿಗಳು: ಕ್ರಿಸ್ ಬ್ರಾಡ್, ಡೇವಿಡ್ ಬೂನ್, ಆಂಡಿ ಪೈಕ್ರೊಫ್ಟ್, ಜೆಫ್ ಕ್ರೋವ್, ರಂಜನ್ ಮದುಗಾಲೆ, ರಿಚೀ ರಿಚಡ್ರ್ಸನ್
ತೀಪುಗಾರರು:
ಅಲೀಮ್ ದಾರ್, ಕುಮಾರ್ ಧರ್ಮಸೇನ, ಮರೀಸ್ ಎರಸ್ಮಸ್, ಕ್ರಿಸ್ ಗ್ಯಾಫನಿ, ಇಯಾನ್ ಗೌಲ್ಡ್, ರಿಚಡರ್್ ಇಲಿಂಗ್ ವರ್ತ, ರಿಚಡರ್್ ಕೆಟಲ್ಬರೋ, ನಿಗೆಲ್ ಲಾಂಗ್, ಬ್ರೂಸ್ ಆಕ್ಸೆನ್ ಫರ್ಡ, ಸುಂದರಾಮ್ ರವಿ, ಪಾಲ್ ರೀಫೆಲ್, ರಾಡ್ ಟಕರ್, ಜೋಯಲ್ ವಿಲ್ಸನ್, ಮೈಕೇಲ್ ಗೌಗ್, ರುಚಿರಾ ಪಲ್ಯಗುಗುಜ್, ಪಾಲ್ ವಿಲ್ಸನ್
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 