ಬಿಜಾಪುರದಲ್ಲಿ ವೈದ್ಯಕೀಯ ಕಾಲೇಜ ಆರಂಭಿಸಲು ಅನಿರ್ದಿಷ್ಟಾವಧಿ ಸತ್ಯಾಗ್ರಹ
Indefinite Satyagraha to start a medical college in Bijapur
ಬಿಜಾಪುರದಲ್ಲಿ ವೈದ್ಯಕೀಯ ಕಾಲೇಜ ಆರಂಭಿಸಲು ಅನಿರ್ದಿಷ್ಟಾವಧಿ ಸತ್ಯಾಗ್ರಹ
ವಿಜಯಪುರ 17: ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹವು 30 ನೇ ದಿನಕ್ಕೆ ಕಾಲಿಟ್ಟಿದೆ. ಈ ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಲ್ಲಿಕಾರ್ಜುನ ಯಂಡಿಗೇರಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧಕ್ಷರು ಮಾತನಾಡುತ್ತಾ ಸರಕಾರಿ ಮೆಡಿಕಲ್ ಕಾಲೇಜು ನಮ್ಮ ಹಕ್ಕು. ಬಡವರ ಹಿತಾಸಕ್ತಿಯನ್ನು ಸರಕಾರಕಾಪಡಬೇಕು, ಬಡವರಿಗಾಗಿ, ಆರ್ಥಿಕವಾಗಿ ಹಿಂದುಳಿದವರಿಗಾಗಿ ಸರಕಾರಿ ಕಾಲೇಜು ಅವಶ್ಯಕತೆ ಇದೆ. ನಮ್ಮ ಮಕ್ಕಳು ಕಲಿಯದಿದ್ದರು ಮುಂದಿನ ನಮ್ಮ ಪೀಳಿಗೆಗಾಗಿ ಸರಕಾರ ವೈದ್ಯಕೀಯ ಕಾಲೇಜನ್ನು ಬಿಜಾಪುರದಲ್ಲಿ ಆರಂಭಿಸಬೇಕು. ಸರಕಾರಜನರ ಹೋರಾಟಕ್ಕೆ ಮಣಿದು ವೈದ್ಯಕೀಯ ಕಾಲೇಜು ಆರಂಭಿಸದ ಹೋದರೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ಬೆಳೆಸಲು ನಾವು ಸಿದ್ದರಿದ್ದೇವೆ. ಜನಗಳ ಹಿತಾಸಕ್ತಿ ಕಾಪಡದ ಜನಪ್ರತಿನಿದಿಗಳು ಏಕೆ ಬೇಕು ಎಂದು ಗುಡುಗಿದರು.
ಕಳೆದ 29 ದಿನಗಳಿಂದ ಒಂದಲ್ಲ ಒಂದು ರೀತಿಯಲ್ಲಿ ಹೋರಾಟ ನಡೆಸುತ್ತಲೆ ಬಂದಿದ್ದಾರೆ ಆದರೆ ಸರಕಾರ ಇತ್ತ ಕಡೆ ಗಮನ ಹರಿಸುತ್ತಿಲ್ಲ. ಯಾರ ಹಿತಾಸಕ್ತಿಕಾಪಾಡುವಲ್ಲಿಇವರು ನಿರತರಾಗಿದ್ದಾರೆಎಂದು ಹೇಳಿದರು.ಹೋರಾಟ ಸಮಿತಿಯ ಸದಸ್ಯರಾದ ಅರವಿಂದ ಕುಲಕರ್ಣಿ, ಭಗವಾನ್‌ರೆಡ್ಡಿ, ಲಲಿತಾ ಬಿಜ್ಜರಗಿ, ಅಕ್ರಂಮಾಷಳಕರ, ಪ್ರಭುಗೌಡ ಪಾಟೀಲ, ಸುರೇಶ್ ಬಿಜಾಪುರ, ಲಕ್ಷ್ಮಣ ಹಂದ್ರಾಳ,ಭರತಕುಮಾರ ಹೆಚ್,ಟಿ ಮಲ್ಲಿಕಾರ್ಜುನ ಹೆಚ್ ಟಿ, ಬಾಬುರಾವ್ ಬೀರಕಬ್ಬಿ,ಹಾಗೂ ಸಂಗನಬಸವೇಶ್ವರ ಸ್ವಾಮೀಜಿ, ಬಸವರಾಜ ಸುತ್ತಗುಂಡಿ, ಮಹದೇವಪ್ಪ ತೇಲಿ, ಗೀರೀಶ್‌ಕಲ ಘಟಗಿ, ಶೇಷರಾವ್ ಮಾನೆ,ಲಕ್ಷ್ಮಣ ಕಂಬಾಗಿ, ಚೆನ್ನುಕಟ್ಟಿಮನಿ,ಸಲೀಂ ವಜ್ರಾಣಿ, ಜಗದೇವ ಸೂರ್ಯವಂಶಿ, ಬೋಗೇಶ್ ಸೋಲಾಪುರ, ನಾಗರಾಜ ಕಲಕುಟಗರ, ಗೀತಾ ಹೆಚ್, ನೀಲಮ್ಮ ಬಿರಾದರ,ಕಾವೇರಿ ರಜಪೂತ,ಮಹದೇವಿ ಧರ್ಮಶೆಟ್ಟಿ ಮುಂತಾದವರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 