ಉತ್ತರ ಭಾರತ ರಾಜ್ಯಗಳಲ್ಲಿ ಹೆಚ್ಚಿದ ಶೀತಗಾಳಿ
Increased cold wave in North Indian states
ಹೊಸದಿಲ್ಲಿ: ಉತ್ತರದ ಬಹುತೇಕ ರಾಜ್ಯಗಳಲ್ಲಿ ಶೀತಗಾಳಿ ಹೆಚ್ಚುತ್ತಿದ್ದು, ಹಲವೆಡೆ ತಾಪ ಮಾನ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸೋಮವಾರ ತೀವ್ರ ಚಳಿ ಆವರಿಸಿದ್ದು, ನಗ ರದ ಹಲ ವೆಡೆ ಕನಿಷ್ಠ ತಾಪಮಾನ ಸುಮಾರು 3 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ. ಇದರಿಂದಾಗಿ 2023ರ ಅನಂತರದ ಅತ್ಯಂತ ಚಳಿಯ ಜನವರಿ ದಿನವೆಂದು ದಾಖಲೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಐಎಂಡಿ ಪ್ರಕಾರ, 2023ರ ಜನವರಿ 16ರಂದು ದಿಲ್ಲಿಯಲ್ಲಿ ಕನಿಷ್ಠ ತಾಪಮಾನ 1.4 ಡಿಗ್ರಿ ಸೆಲ್ಸಿಯಸ್ಗೆ ಇಳಿದಿತ್ತು.
ಸೋಮವಾರ ಬೆಳಗ್ಗೆ ದಾಖಲಾಗಿರುವ ಅಂಕಿ ಅಂಶಗಳಂತೆ, ದಿಲ್ಲಿಯ ಸಫªರ್ಜಂಗ್ನಲ್ಲಿ ಕನಿಷ್ಠ ತಾಪಮಾನ 3.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಸಾಮಾನ್ಯ ಮಟ್ಟಕ್ಕಿಂತ 4.2 ಡಿಗ್ರಿ ಕಡಿಮೆಯಾಗಿದೆ. ಪಾಳಂನಲ್ಲಿ 3.3 ಡಿಗ್ರಿ, ಲೋಧಿ ರಸ್ತೆಯಲ್ಲಿ 3 ಡಿಗ್ರಿ, ರಿಡ್ಜ್ ಪ್ರದೇಶದಲ್ಲಿ 4.2 ಡಿಗ್ರಿ ಹಾಗೂ ಆಯಾನಗರದಲ್ಲಿ 3.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.
ನಗರದಲ್ಲಿ ಗರಿಷ್ಠ ತಾಪಮಾನವು 19 ಡಿಗ್ರಿ ಸೆಲ್ಸಿಯಸ್ಇರುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ. ಮುಂದಿನ ಎರಡು ದಿನಗಳವರೆಗೆ ದಿಲ್ಲಿಯಲ್ಲಿ ಶೀತಅಲೆ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.
ದಿಲ್ಲಿಯ ವಾಯು ಗುಣಮಟ್ಟವೂ ಕಳಪೆಯಾಗಿಯೇ ಉಳಿದಿದ್ದು, ಕನಿಷ್ಠ ತಾಪಮಾನದಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮಾಹಿತಿ ಪ್ರಕಾರ, ನಗರದ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯುಐ) 298 ಆಗಿದೆ. ಸುಮಾರು 20 ಮೇಲ್ವಿಚಾರಣ ಕೇಂದ್ರಗಳಲ್ಲಿ ಅತ್ಯಂತ ಕಳಪೆ ವಾಯು ಗುಣಮಟ್ಟ ದಾಖಲಾಗಿದ್ದು, ಉಳಿದ ಕೇಂದ್ರಗಳಲ್ಲಿ ಕಳಪೆ ಮಟ್ಟ ಕಂಡುಬಂದಿದೆ.
ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಚಳಿಯ ತೀವ್ರತೆ ಅತಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹರಿಯಾಣದ ಗುರುಗ್ರಾಮ ಮತ್ತು ಪಂಜಾಬ್ನ ಬಟಿಂಡಾ ನಗರಗಳಲ್ಲಿ ಕನಿಷ್ಠ ತಾಪಮಾನವು 0.6 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದ್ದು, ಈ ಋತುವಿನ ಅತ್ಯಂತ ಶೀತದ ರಾತ್ರಿಯಾಗಿ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ.
ಶ್ರೀನಗರ: ತೀವ್ರ ಚಳಿಯ ಅಲೆಯ ನಡುವೆ ಕಾಶ್ಮೀರದಲ್ಲಿ ಕನಿಷ್ಠ ತಾಪಮಾನವು ಕೆಲವು ಡಿಗ್ರಿ ಏರಿಕೆಯಾಗಿದ್ದು, ಚಳಿಯ ತೀವ್ರತೆ ತುಸು ಕಡಿಮೆಯಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಮೈನಸ್ ಡಿಗ್ರಿ ತಾಪಮಾನದಿಂದ ದಾಲ್ ಸರೋವರ ಸೇರಿದಂತೆ ಕಣಿವೆಯ ಪ್ರಮುಖ ಜಲಮೂಲಗಳ ಭಾಗಗಳು ಹಿಮಗಡ್ಡೆಯಾಗಿ ಮಾರ್ಪಟ್ಟಿವೆ.
ಶ್ರೀನಗರದಲ್ಲಿ ರವಿವಾರ ರಾತ್ರಿ ಮೈನಸ್ 2.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾವು ಮೈನಸ್ 6.5 ಡಿಗ್ರಿ ಸೆಲ್ಸಿಯಸ್ ತಾಪಮಾನದೊಂದಿಗೆ ಕಣಿವೆಯಲ್ಲೇ ಅತ್ಯಂತ ತಂಪಾದ ಪ್ರದೇಶವಾಗಿ ದಾಖಲಾಗಿದೆ. ಗುಲ್ಮಾರ್ಗ್ ನಲ್ಲಿ ಮೈನಸ್ 3.4 ಡಿಗ್ರಿ ತಾಪಮಾನ ದಾಖಲಾಗಿದೆ.
"ಚಿಲ್ಲೆ„-ಕಲನ್' ಪ್ರಭಾವ
ಕಾಶ್ಮೀರವು ಪ್ರಸ್ತುತ "ಚಿಲ್ಲೆ-ಕಲನ್' ಅವ ಧಿಯಲ್ಲಿದೆ. ಇದು 40 ದಿನಗಳ ಕಾಲ ಇರುವ ಅತ್ಯಂತ ಕಠಿನ ಚಳಿಗಾಲವಾಗಿದ್ದು, ಡಿಸೆಂಬರ್ 21ರಿಂದ ಜನವರಿ 30ರ ವರೆಗೆ ಇರುತ್ತದೆ. ಈ ಸಮಯದಲ್ಲಿ ತಾಪಮಾನವು ಶೂನ್ಯಕ್ಕಿಂತ ಹಲವು ಡಿಗ್ರಿ ಕೆಳಕ್ಕೆ ಇಳಿಯುತ್ತದೆ ಮತ್ತು ಹಿಮಪಾತದ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 